Google Maps: ಜನರು ವಿಳಾಸ ಹುಡುಕುವುದಕ್ಕೆ ಗೂಗಲ್ ಮ್ಯಾಪ್ಸ್ ಮೊರೆ ಹೋಗುತ್ತಾರೆ. ಇದರ ಸಹಾಯದಿಂದ ನಾವು ಟರ್ನ್ಗಳು, ಶಾರ್ಟ್ಕಟ್ಗಳ ಮೂಲಕ ಬಹುಬೇಗ ಗಮ್ಯಸ್ಥಾನ ತಲುಪುಬಹುದು. ಯಾವುದಾದ್ರೂ ಹೊಸ ಸ್ಥಳಕ್ಕೆ ಹೋಗಬೇಕಾದ್ರೆ ಗೂಗಲ್ ಮ್ಯಾಪ್ಸ್ ಬಹು ರಸ್ತೆ ಮಾರ್ಗಗಳನ್ನು ಸೂಚಿಸುತ್ತದೆ. ಇದರ ಸಹಾಯದಿಂದ ಕಡಿಮೆ ಸಮಯದಲ್ಲಿ ಆ ಪ್ರದೇಶವನ್ನು ತಲುಪಬಹುದು.
ಇದರ ಜೊತೆಗೆ, 'Avoid Toll' ಮತ್ತು 'Avoid Highway'ಯಂತಹ ಆಯ್ಕೆಗಳನ್ನೂ ಸಹ ಬಳಸಿಕೊಂಡು ನಮ್ಮ ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸಬಹುದು. ಈಗ ತಂತ್ರಜ್ಞಾನದ ಸಹಾಯದಿಂದ ಗೂಗಲ್ ಮ್ಯಾಪ್ಸ್ನಲ್ಲಿ ಹೊಸ ಫೀಚರ್ಗಳನ್ನು ತರುತ್ತಿದ್ದಾರೆ. ಇಂಥ ಅಡ್ವಾನ್ಸ್‌ಡ್ ಫೀಚರ್ನಿಂದ ಉತ್ತಮ ಪ್ರಯಾಣದ ಅನುಭವ ಪಡೆಯಬಹುದು. ಇದಲ್ಲದೇ ಗೂಗಲ್ ಮ್ಯಾಪ್ಸ್ನಲ್ಲಿ ನಮಗೆ ತಿಳಯದೇ ಇರುವ ಅನೇಕ ಫೀಚರ್ಗಳಿವೆ.
ಆಫ್ಲೈನ್ ಮ್ಯಾಪ್ಸ್ ಬಳಕೆ: ಇಂದಿಗೂ ನಮ್ಮ ದೇಶದ ಅನೇಕ ಪ್ರದೇಶಗಳಲ್ಲಿ ಸರಿಯಾದ ಇಂಟರ್ನೆಟ್ ವ್ಯವಸ್ಥೆಯಿಲ್ಲ. ಇಂಥ ಪರಿಸ್ಥಿತಿಯಲ್ಲಿ ಆಫ್ಲೈನ್ ಮ್ಯಾಪ್ಸ್ ಡೌನ್ಲೋಡ್ ಮಾಡಿಕೊಂಡು ಉಪಯೋಗಿಸುವುದರಿಂದ ನೀವು ಯಾವುದೇ ಅಡಚಣೆಯಿಲ್ಲದ ನ್ಯಾವಿಗೇಷನ್ ಪಡೆಯುತ್ತೀರಿ. ಇದಕ್ಕಾಗಿ ನೀವು ಆ್ಯಪ್ನಲ್ಲಿ ನೀವು ಎಲ್ಲಿಗೆ ಹೋಗಬೇಕೆನ್ನುವ ಸ್ಥಳವನ್ನು ಸರ್ಚ್ ಮಾಡಿ ಡೌನ್ಲೋಡ್ ಆಪ್ಷನ್ ಆಯ್ದುಕೊಳ್ಳಬೇಕು. ಈ ಫೀಚರ್ ನಿಮಗೆ ಗ್ರಾಮೀಣ ಭಾಗದಲ್ಲಿ ಮತ್ತು ಅರಣ್ಯ ಪ್ರದೇಶಗಳಲ್ಲಿ ಬಹಳ ಉಪಯುಕ್ತ.
ರಿಯಲ್ಟೈಂ ಲೊಕೇಶನ್: ಸಾಧಾರಣವಾಗಿ ನಾವು ಯಾವುದಾದ್ರೂ ಲೊಕೇಶನ್ ಸೆಟ್ ಮಾಡುಕೊಳ್ಳುವಾಗ ಪ್ರಿವ್ಯೂ ಕಾಣಿಸುತ್ತದೆ. ಇದರ ಹೊರತಾಗಿಯೂ ನೀವು ರಿಯಲ್ಟೈಂ ಲೊಕೇಶನ್ ಸ್ಥಳಗಳನ್ನು ನೋಡಲು ಬಯಿಸಿದ್ರೆ, ಅದಕ್ಕಾಗಿ ನೀವು ರೂಟ್ ಪ್ರಿವ್ಯೂ ಪಕ್ಕದಲ್ಲಿ ಇರುವ ಥ್ರೀ ಡಾಟ್ಸ್ಸೆಲೆಕ್ಟ್ ಮಾಡಿಕೊಳ್ಳಿ. ಬಳಿಕ ಅದರಲ್ಲಿ ಸ್ಯಾಟಲೈಟ್, ಟ್ರಾಫಿಕ್ ಆಪ್ಷನ್ ಮೇಲೆ ಕ್ಲಿಕ್ ಮಾಡಿದ್ರೆ ನಿಮಗೆ ಬೆಸ್ಟ್ ಪ್ರಿವ್ಯೂ ಕಾಣಿಸುತ್ತದೆ.