Tri Fold Smartphone:ಸದ್ಯ ಮಾರುಕಟ್ಟೆಯಲ್ಲಿ ಮಡಚಬಹುದಾದ ಮೊಬೈಲ್ ಫೋನ್ಗಳಿಗೆ ಒಳ್ಳೆಯ ಕ್ರೇಜ್ ಇದೆ. ಇದರೊಂದಿಗೆ ಹಲವು ಕಂಪನಿಗಳು ಈ ಮಾದರಿಯ ಸ್ಮಾರ್ಟ್ ಫೋನ್ಗಳತ್ತ ಗಮನ ಹರಿಸಿವೆ. ಇವುಗಳನ್ನು ಗ್ರಾಹಕರ ಆಸಕ್ತಿ ಮತ್ತು ಅಭಿರುಚಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದ್ದು, ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ. ಈ ಹಿನ್ನೆಲೆ ಹುವಾವೇ ತನ್ನ ಮೊದಲ ಟ್ರೈ-ಫೋಲ್ಡಬಲ್ ಸ್ಮಾರ್ಟ್‌ಫೋನ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
Huawei Mate XT ಎಂಬ ಹೆಸರಿನಲ್ಲಿ ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ ಎಂದು ಕಂಪನಿಯ ಸಿಇಒ ರಿಚರ್ಡ್ ಹೇಳಿದ್ದಾರೆ. ಆದರೆ ಟೆಕ್ನೋ ಕಂಪನಿ ಈಗಾಗಲೇ ಈ ವಿಭಾಗದಲ್ಲಿ ಮೊಬೈಲ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಆದರೆ, ಯಾವಾಗ ರಿಲೀಸ್ ಆಗಲಿದೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಇದರೊಂದಿಗೆ Huawei ವಿಶ್ವದ ಮೊದಲ ಟ್ರೈ-ಫೋಲ್ಡಬಲ್ ಫೋನ್ ಅನ್ನು ಬಿಡುಗಡೆ ಮಾಡಿದ ಕಂಪನಿಯಾಗಲಿದೆ. ಈ ಹಿನ್ನೆಲೆಯಲ್ಲಿ ಯಾವಾಗ ಲಾಂಚ್ ಆಗಲಿದೆ ಮತ್ತು ಬೆಲೆ ಹಾಗೂ ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ..
Huawei ಟ್ರೈ ಫೋಲ್ಡ್ ಸ್ಮಾರ್ಟ್‌ಫೋನ್ ಯಾವಾಗ ಬಿಡುಗಡೆ?:
- ಹುವಾವೇ ತನ್ನ ಮೊದಲ ಟ್ರೈ-ಫೋಲ್ಡಬಲ್ ಫೋನ್ ಅನ್ನು ತರುವುದಾಗಿ ಘೋಷಿಸಿದೆ.
- ಇದನ್ನು Huawei Mate XT ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಾಗುತ್ತದೆ.
- ಸೆಪ್ಟೆಂಬರ್ 10 ರಂದು ಚೀನಾದ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳಲಿದೆ ಎಂದು Huawei ಸ್ಪಷ್ಟಪಡಿಸಿದೆ.