Information About Lightning:ದೇಶದಲ್ಲಿ ಮುಂಗಾರು ಕೊನೆಯ ಹಂತಕ್ಕೆ ಪ್ರವೇಶಿಸುತ್ತಿದ್ದರೂ, ಹಲವು ರಾಜ್ಯಗಳಲ್ಲಿ ಮಳೆಯ ಎಚ್ಚರಿಕೆ ಇನ್ನೂ ಮುಂದುವರೆದಿದೆ. ಮಳೆಗಾಲದಲ್ಲಿ ಸಿಡಿಲು ಸಾಮಾನ್ಯ. ಇಲ್ಲಿ ನೈಸರ್ಗಿಕ ಮಿಂಚನ್ನು ನೋಡುವುದು ಒಂದೆಡೆ ಸಂತೋಷವೆಸನಿಸಿದರೆ, ಇದು ಅತ್ಯಂತ ಅಪಾಯಕಾರಿಯೂ ಹೌದು. ಮಿಂಚು ಮನುಷ್ಯರಿಗೆ ಮಾರಣಾಂತಿಕವಾಗಿದೆ. ಮಳೆ ಬಂದಾಗ ಮಿಂಚು ಹೇಗೆ ಹೊಳೆಯುತ್ತದೆ, ಅದು ಹೇಗೆ ನೆಲಕ್ಕೆ ಅಪ್ಪಳಿಸುತ್ತದೆ ಎಂಬುದರ ಬಗ್ಗೆ ನೀವು ಯೋಚಿಸಿದ್ದೀರಾ.. ಇಲ್ಲಿ ನಾವು ಮಿಂಚಿನ ಸಂಪೂರ್ಣ ಪ್ರಕ್ರಿಯೆಯ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ. ಈ ಪ್ರಕ್ರಿಯೆಯು ಹೇಗೆ ನಡೆಯುತ್ತದೆ ಅನ್ನೋದನ್ನು ತಿಳಿಯೋಣ..
ಮಿಂಚು ಎಂದರೇನು: ಮಿಂಚುವುದು ಎಂದರೆ ವೇಗವಾಗಿ ಮತ್ತು ಅಷ್ಟೇ ಬಲವಾಗಿ ವಿದ್ಯುತ್ ಶಕ್ತಿಯು ಪರಿಸರದಲ್ಲಿ ಕಾಣಿಸಿಕೊಳ್ಳುವ ಒಂದು ಪ್ರಕ್ರಿಯೆ. ಅದರಲ್ಲಿ ಕೆಲವು ನೇರವಾಗಿ ಭೂಮಿಗೆ ಬಂದು ಅಪ್ಪಳಿಸುತ್ತವೆ. ಈ ಮಿಂಚು ಬೃಹತ್ ಆಕಾರದ ಮೋಡದಿಂದ ಉಂಟಾಗುತ್ತದೆ. ಮೋಡದ ತುದಿಯ ಉಷ್ಣಾಂಶ ಮೈನಸ್ 35 ರಿಂದ ಮೈನಸ್ 45 ಡಿಗ್ರಿ ಸೆಲ್ಸಿಯಸ್ನಷ್ಟು ಇರುತ್ತದೆ.
ಭೂಮಿಗೆ ಮಿಂಚು ಅಪ್ಪಳಿಸುವುದೇಕೆ: ಮೋಡದಲ್ಲಿ ನೀರಿನ ಅಂಶ ಮೇಲೆ ಸಾಗಿದಂತೆ ಮೋಡದ ತುದಿಯಲ್ಲಿ ತಾಪಮಾನ ಕಡಿಮೆ ಆಗುತ್ತಾ ಸಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಉಷ್ಣಾಂಶ ಉತ್ಪಾದನೆ ಆಗಿ ನೀರಿನ ಕಣಗಳನ್ನು ಮತ್ತೆ ಮೇಲಕ್ಕೆ ಸಾಗಿಸುವಂತೆ ಮಾಡುತ್ತದೆ. ಹೀಗೆ ಉಷ್ಣಾಂಶ ಸೊನ್ನೆ ಡಿಗ್ರಿಗಿಂತಲೂ ಕಡಿಮೆ ಆಗಿ ಮೈನಸ್ನತ್ತ ಹೋಗುತ್ತಿದ್ದಂತೆ ನೀರಿನ ಕಣಗಳು ಸಹ ಸಣ್ಣ ಮಂಜುಗಡ್ಡೆಯಾಗಿ ಬದಲಾಗುತ್ತಾ ಹೋಗುತ್ತದೆ. ಹೀಗೆ ತಮ್ಮ ಗಾತ್ರ ಬಲಿಷ್ಠವಾಗುತ್ತಿರುವಂತೆ ಮೇಲಕ್ಕೆ ಸಾಗುತ್ತಾ ಬಳಿಕ ಭೂಮಿಗೆ ಬೀಳಲು ತೊಡಗುತ್ತದೆ.
ಚೈನ್ ರಿಯಾಕ್ಷನ್ ಸಂಭವಿಸುವುದು ಹೇಗೆ?:ಸಣ್ಣ ಮಂಜುಗಡ್ಡೆ ಕಣಗಳು ಮೇಲಕ್ಕೆ ಹೋಗುತ್ತಾ ದೊಡ್ಡ ಮಂಜುಗಡ್ಡೆ ಕಣಗಳು ಕೆಳಗೆ ಬೀಳಲು ಪ್ರಾರಂಭಿಸುತ್ತವೆ. ಇದರಿಂದಾಗಿ ಒಂದಕ್ಕೊಂದು ಸಂಘರ್ಷ ಏರ್ಪಡುತ್ತದೆ. ಆ ಮೂಲಕ ಎಲೆಕ್ಟ್ರಾನ್ಗಳ ಬಿಡುಗಡೆ ಆಗುತ್ತದೆ. ಹೀಗೆ ವಿದ್ಯುತ್ ಶಕ್ತಿಯ ಸ್ಪಾರ್ಕ್ ಕಾಣಿಸಿಕೊಳ್ಳುತ್ತದೆ. ಹೀಗೆ ಸಂಚಾರ ಮಾಡುವ ಎಲೆಕ್ಟ್ರಾನ್ಗಳ ಕಾರಣದಿಂದ ಹೆಚ್ಚು ಘರ್ಷಣೆ ಉಂಟಾಗಿ ಚೈನ್ ರಿಯಾಕ್ಷನ್ ಸಂಭವಿಸುತ್ತದೆ.
ಚೈನ್ ರಿಯಾಕ್ಷನ್ ಕಾರಣದಿಂದ ಮೋಡದ ಮೇಲಿನ ಪದರ ಪಾಸಿಟಿವ್ ಚಾರ್ಜ್ ಹೊಂದುತ್ತದೆ. ಮಧ್ಯ ಪದರು ನೆಗೆಟಿವ್ ಚಾರ್ಜ್ ಹೊಂದುತ್ತದೆ. ಈ ಎರಡು ಪದರಗಳ ವಿದ್ಯುತ್ ಶಕ್ತಿಯ ವ್ಯತ್ಯಾಸ ದೊಡ್ಡದಾಗಿರುತ್ತದೆ. ಸಣ್ಣ ಅವಧಿಯಲ್ಲಿ ಬಹಳ ದೊಡ್ಡ ಪ್ರಮಾಣದ ಅಂದರೆ ಸುಮಾರು 100,000 ದಿಂದ ಮಿಲಿಯನ್ನಷ್ಟು ಆಂಪಿರ್ಸ್ ಕರೆಂಟ್ ಈ ಪದರಗಳ ಮಧ್ಯೆ ಸಂಚರಿಸುತ್ತವೆ.