ಹೈದರಾಬಾದ್ :ಇಂದಿನ ಯುವಜನತೆಗೆ ಸ್ಮಾರ್ಟ್ ವಾಚ್‌ಗಳು ಎಷ್ಟು ಹುಚ್ಚು ಹಿಡಿಸಿವೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಆದರೆ, ಅವು ಯುವಕರಿಗೆ ಮಾತ್ರವಲ್ಲ, ವಯಸ್ಕರಿಗೂ ತುಂಬಾ ಉಪಯುಕ್ತವಾಗಿವೆ. ಸಹಜವಾಗಿಯೇ ಪ್ರತಿಯೊಬ್ಬರೂ ಆಧುನಿಕ ಜೀವನದಿಂದ ಬೇಸತ್ತಿದ್ದಾರೆ. ಅದಕ್ಕಾಗಿಯೇ ಅವರು ಆರೋಗ್ಯಕರ ಜೀವನಶೈಲಿಗೆ ವಿಶೇಷ ಗಮನ ನೀಡುತ್ತಿದ್ದಾರೆ.
ತಮ್ಮ ದೈನಂದಿನ ಚಟುವಟಿಕೆಗಳು ಮತ್ತು ವ್ಯಾಯಾಮಗಳನ್ನು ಟ್ರ್ಯಾಕ್ ಮಾಡಲು ಸ್ಮಾರ್ಟ್ ವಾಚ್‌ಗಳು ತುಂಬಾ ಉಪಯುಕ್ತವಾಗಿವೆ. ವಿಶೇಷವಾಗಿ ಹೃದಯ ಬಡಿತ, ಬಿಪಿ, ನಿದ್ರೆಯ ಟ್ರ್ಯಾಕಿಂಗ್, ಕ್ಯಾಲೋರಿ ಎಣಿಕೆ, ದೇಹದಲ್ಲಿನ ಆಮ್ಲಜನಕದ ಮಟ್ಟವನ್ನು ಈ ಸ್ಮಾರ್ಟ್ ವಾಚ್ಗಳ ಮೂಲಕ ತಿಳಿದುಕೊಳ್ಳಬಹುದು. ಇವುಗಳ ಮೂಲಕ ಅನೇಕ ಆರೋಗ್ಯ ವಿಷಯಗಳನ್ನು ಟ್ರ್ಯಾಕ್ ಮಾಡಬಹುದು. ಹಾಗಾದ್ರೆ ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ಸ್ಮಾರ್ಟ್ ವಾಚ್‌ಗಳು ಯಾವುವು ಎಂಬುದನ್ನ ತಿಳಿದುಕೊಳ್ಳೊಣ.
1. ಆ್ಯಪಲ್ ವಾಚ್ ಸಿರೀಸ್ 8 : ಈ ವಾಚ್ ಫಿಟ್‌ನೆಸ್ ಫ್ರೀಕ್‌ಗಳಿಗೆ ಉತ್ತಮವಾಗಿದೆ. ಈ ವಾಚ್ ಸುಧಾರಿತ ಸಂವೇದಕಗಳನ್ನು ಹೊಂದಿದೆ. ಬೆಲೆ ಕೊಂಚ ಹೆಚ್ಚಿದ್ದರೂ ಈ ಸ್ಮಾರ್ಟ್ ವಾಚ್ ಸಾಕಷ್ಟು ಉತ್ತಮ ಫೀಚರ್ಗಳನ್ನು ಹೊಂದಿದೆ.
ಬ್ರಾಂಡ್:ಆ್ಯಪಲ್
ಮಾದರಿ:ಸರಣಿ 8
ಗಾತ್ರ:45 ಮಿಮೀ
ಕೇಸ್ ಮೆಟೀರಿಯಲ್: ಮಿಡ್ನೈಟ್ ಅಲ್ಯೂಮಿನಿಯಂ
ಬ್ಯಾಂಡ್ ಮೆಟೀರಿಯಲ್:ಮಿಡ್ನೈಟ್ ಸ್ಪೋರ್ಟ್ ಬ್ಯಾಂಡ್
ಡಿಸ್ಪ್ಲೇ :ರೆಟಿನಾ ಡಿಸ್ಪ್ಲೇ
ಆರೋಗ್ಯ ವೈಶಿಷ್ಟ್ಯಗಳು:ರಕ್ತದ ಆಮ್ಲಜನಕ ಮತ್ತು ಇಸಿಜಿ ಅಪ್ಲಿಕೇಶನ್‌ಗಳು, ಸ್ಲೀಪಿಂಗ್ ಹಂತಗಳನ್ನ ಟ್ರ್ಯಾಕಿಂಗ್ ಮಾಡುತ್ತದೆ
ಆವೃತ್ತಿ :ಇತ್ತೀಚಿನ iOS ಆವೃತ್ತಿಯೊಂದಿಗೆ iPhone 8 ಅಥವಾ ನಂತರದ ಆವೃತ್ತಿ
ಬೆಲೆ -ರೂ. 30, 900
2. ಸ್ಯಾಮ್ಸಂಗ್ ಗ್ಯಾಲಾಕ್ಸಿ ವಾಚ್ 6 : ಈ ವಾಚ್ ಫಿಟ್‌ನೆಸ್ ಟ್ರ್ಯಾಕಿಂಗ್ ಅಪ್ಲಿಕೇಶನ್‌ಗಳನ್ನು ಹೊಂದಿದೆ. ಇದರೊಂದಿಗೆ ನೀವು ಬಿಪಿ, ಹೃದಯ ಬಡಿತ, ಇಸಿಜಿ, ಮಲಗುವ ಸಮಯವನ್ನು ಟ್ರ್ಯಾಕ್ ಮಾಡಬಹುದು.
ಬ್ರ್ಯಾಂಡ್: ಸ್ಯಾಮ್ಸಂಗ್
ಮಾದರಿ: ಗ್ಯಾಲಕ್ಸಿ ವಾಚ್
ಗಾತ್ರ: 40 ಮಿಮೀ
ಸಂಪರ್ಕ:ಬ್ಲೂಟೂತ್
ಬಣ್ಣ: ಗ್ರ್ಯಾಫೈಟ್
ಪರದೆಯ ಗಾತ್ರ: 4 ಸೆಂ ಮೀ
ಆವೃತ್ತಿ: ಆಂಡ್ರಾಯ್ಡ್
ಆರೋಗ್ಯ ವೈಶಿಷ್ಟ್ಯಗಳು: ಬಿಪಿ ಮಾನಿಟರಿಂಗ್, ಇಸಿಜಿ, ಸ್ಲೀಪಿಂಗ್ ಸ್ಟೇಜ್ ಟ್ರ್ಯಾಕಿಂಗ್
ಬೆಲೆ: ರೂ. 29,999
3. ಗಾರ್ಮಿನ್ ವೆನು 2S : ಈ ಗಾರ್ಮಿನ್ ವೆನು 2S ಸ್ಮಾರ್ಟ್ ವಾಚ್ ಪ್ರಕಾಶಮಾನವಾದ AMOLED ಡಿಸ್ಪ್ಲೇಯನ್ನು ಹೊಂದಿದೆ. ಹಾಡುಗಳನ್ನು ಕೇಳಲು ಇದನ್ನು ವೈರ್‌ಲೆಸ್ ಹೆಡ್‌ಫೋನ್‌ಗಳೊಂದಿಗೆ ಸಂಪರ್ಕಿಸಬಹುದು.
ಬ್ರಾಂಡ್: ಗಾರ್ಮಿನ್
ಮಾದರಿ:ವೆನು 2 ಎಸ್