ಕರ್ನಾಟಕ

karnataka

ETV Bharat / technology

ಟಾಟಾ ಪಂಚ್ ಅಪ್‌ಗ್ರೇಡ್ ಮಾಡೆಲ್ ಮಾರುಕಟ್ಟೆಗೆ ಬಿಡುಗಡೆ: ಬೆಲೆ, ವೈಶಿಷ್ಟ್ಯಗಳ ವಿವರ - TATA Punch Upgrade Model - TATA PUNCH UPGRADE MODEL

Upgraded Tata Punch Launched: ದೇಶೀಯ ಕಾರು ತಯಾರಕ ಕಂಪೆನಿ ಟಾಟಾ ಮೋಟಾರ್ಸ್ ತನ್ನ ಅತ್ಯುತ್ತಮ ಮೈಕ್ರೋ ಎಸ್‌ಯುವಿ ಟಾಟಾ ಪಂಚ್‌ನ ಅಪ್‌ಡೇಟ್​ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಟಾಟಾ ಪಂಚ್ ಅನ್ನು ಭಾರತೀಯ ಮಾರುಕಟ್ಟೆಗೆ 10 ರೂಪಾಂತರಗಳಲ್ಲಿ ಅದ್ಭುತ ವೈಶಿಷ್ಟ್ಯಗಳೊಂದಿಗೆ ಹೊರತರಲಾಗಿದೆ. ಇದರ ಬೆಲೆ, ವೈಶಿಷ್ಟ್ಯಗಳು ಸೇರಿದಂತೆ ಹೆಚ್ಚಿನ ವಿವರಗಳ ಇಲ್ಲಿವೆ.

TATA PUNCH UPGRADE MODEL  TATA PUNCH LAUNCHED IN INDIA  NEW TATA PUNCH 2024  TATA PUNCH CNG WITH SUNROOF PRICE
ಟಾಟಾ ಪಂಚ್ ಅಪ್‌ಗ್ರೇಡ್ ಮಾಡೆಲ್ ಲಾಂಚ್ (Tata motors)

By ETV Bharat Karnataka Team

Published : Sep 18, 2024, 1:12 PM IST

Upgraded Tata Punch Launched:ಟಾಟಾ ಮೋಟಾರ್ಸ್ ಭಾರತದ ಪ್ರಸಿದ್ಧ ಅಟೋಮೊಬೈಲ್ ಕಂಪನಿ. ಇತ್ತೀಚೆಗೆ ತನ್ನ ಕರ್ವ್ ಐಸ್​ (ICE) ಮಾದರಿಯ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಹೊಸ ಟಾಟಾ ಪಂಚ್ ಅನ್ನು ಸೆಗ್ಮೆಂಟ್​ ಲೀಡಿಂಗ್​ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೊಳಿಸಿದೆ. 10 ರೂಪಾಂತರಗಳಲ್ಲಿ ಆಕರ್ಷಕ ಲುಕ್​ನಲ್ಲಿ ವಿನ್ಯಾಸಗೊಳಿಸಲಾಗಿದೆ. ಟಾಟಾ ಮೋಟಾರ್ಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಗ್ರಾಹಕರು ಈ ಕಾರು ಬುಕ್ ಮಾಡಬಹುದು.

ಟಾಟಾ ಪಂಚ್ ಅಪ್‌ಗ್ರೇಡ್ ಮಾಡೆಲ್ ಬಿಡುಗಡೆ (Tata motors)

ಟಾಟಾ ಪಂಚ್ ಸನ್‌ರೂಫ್: ಹೊಸ ಟಾಟಾ ಪಂಚ್‌ನಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ. ಅಡ್ವೆಂಚರ್ ರೂಪಾಂತರದಲ್ಲಿ, ಅಟೋ ಕಂಪನಿಯು ಹೊಸ ಪಂಚ್‌ನಲ್ಲಿ ಸನ್‌ರೂಫ್ ಇದೆ. ಆಸಕ್ತಿದಾಯಕ ವಿಷಯವೆಂದರೆ, ಯಾವುದೇ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿಲ್ಲ. ಪವರ್‌ಟ್ರೇನ್ ಮತ್ತು ಬಣ್ಣದ ಆಯ್ಕೆಗಳಲ್ಲಿಯೂ ಬದಲಾವಣೆ ಇಲ್ಲ.

ಟಾಟಾ ಪಂಚ್ ಅಪ್‌ಗ್ರೇಡ್ ಮಾಡೆಲ್ ಬಿಡುಗಡೆ (Tata motors)

ಟಾಟಾ ಪಂಚ್ ಎಂಜಿನ್:ಹೊಸ ಟಾಟಾ ಪಂಚ್ 1.2-ಲೀಟರ್ ಮೋಟಾರ್‌ನಿಂದ ಪವರ್​ ಪಡೆಯುತ್ತದೆ. ಇದು ಮೂರು ಸಿಲಿಂಡರ್, NA ಪೆಟ್ರೋಲ್ ಎಂಜಿನ್ ಹೊಂದಿದೆ. ಐದು-ಸ್ಪೀಡ್ ಮ್ಯಾನುವಲ್, AMT ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಇದಲ್ಲದೆ ಸಿಎನ್‌ಜಿ ಟ್ರಿಮ್‌ನಲ್ಲಿ ಲಭ್ಯವಿದೆ.

ಟಾಟಾ ಪಂಚ್ ಅಪ್‌ಗ್ರೇಡ್ ಮಾಡೆಲ್ ಬಿಡುಗಡೆ (Tata motors)

ಹೊಸ ಟಾಟಾ ಪಂಚ್ ವೈಶಿಷ್ಟ್ಯಗಳು:

  • Android Auto ಜೊತೆಗೆ 10.25-ಇಂಚಿನ ಟಚ್‌ಸ್ಕ್ರೀನ್
  • ಇನ್ಫೋಟೈನ್ಮೆಂಟ್ ಸಿಸ್ಟಮ್
  • ವೈರ್ಲೆಸ್ ಆ್ಯಪಲ್ ಕಾರ್ಪ್ಲೇ
  • ವೈರ್‌ಲೆಸ್ ಫೋನ್ ಚಾರ್ಜರ್
  • ರಿಯರ್​ ಎಸಿ ವೆಂಟ್ಸ್​
  • ಆರ್ಮ್‌ರೆಸ್ಟ್‌ನೊಂದಿಗೆ ಗ್ರ್ಯಾಂಡ್ ಕನ್ಸೋಲ್
  • ಟೈಪ್-ಸಿ ವೇಗದ USB ಚಾರ್ಜಿಂಗ್ ಪೋರ್ಟ್
  • CNG ಟ್ರಿಮ್
  • ಟ್ರಾನ್ಸ್​ಮಿಷನ್​:ಮ್ಯಾನುಯಲ್, AMT ಗೇರ್ ಬಾಕ್ಸ್

ಟಾಟಾ ಪಂಚ್ ಎಂಜಿನ್ ಆಯ್ಕೆಗಳು:

  • ಪೆಟ್ರೋಲ್
  • ಡೀಸೆಲ್

ಬೆಲೆ:6.12 ಲಕ್ಷ (ಎಕ್ಸ್ ಶೋ ರೂಂ)

ಟಾಟಾ ಪಂಚ್ ಅಪ್‌ಗ್ರೇಡ್ ಮಾಡೆಲ್ ಬಿಡುಗಡೆ (Tata motors)

ಮಾರುಕಟ್ಟೆಯಲ್ಲಿ ಸ್ಪರ್ಧೆ:ಟಾಟಾ ಪಂಚ್ ತನ್ನ ವಿಭಾಗದಲ್ಲಿ ಸಿಟ್ರೊಯೆನ್ C3 ಮತ್ತು ಹ್ಯುಂಡೈ ಎಕ್ಸೆಟರ್‌ನೊಂದಿಗೆ ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ:ಯೂಟ್ಯೂಬ್​ ಬಳಿಕ ಈಗ ಪೋಷಕರ ಕೈಯಲ್ಲಿ ಇನ್​ಸ್ಟಾ ಟೀನ್​ ಅಕೌಂಟ್​ ಕಂಟ್ರೋಲ್ - Insta Teen Accounts

ABOUT THE AUTHOR

...view details