Tata Nexon iCNG Car Launched:ಪ್ರಸಿದ್ಧ ಅಟೊಮೊಬೈಲ್ ತಯಾರಕ ಟಾಟಾ ಮೋಟರ್ಸ್ ತನ್ನ ನೆಕ್ಸಾನ್ ಶ್ರೇಣಿಯಲ್ಲಿ ಹೊಸ ಸಬ್‌ಕಾಂಪ್ಯಾಕ್ಟ್ SUVಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನೆಕ್ಸಾನ್ ಈಗಾಗಲೇ ಪೆಟ್ರೋಲ್, ಡೀಸೆಲ್ ಮತ್ತು EV ರೂಪಾಂತರಗಳನ್ನು ಹೊಂದಿದೆ. ಇತ್ತೀಚೆಗೆ CNG ರೂಪಾಂತರವನ್ನೂ ಪರಿಚಯಿಸಿದೆ. ಈ ಕಾರು ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿರುವ ಭಾರತದ ಮೊದಲ CNG ವಾಹನ. ನೆಕ್ಸಾನ್ 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ICNG ಅನ್ನು ರಿಲೀಸ್ ಮಾಡಿದೆ.
ಸುಧಾರಿತ ವೈಶಿಷ್ಟ್ಯಗಳೊಂದಿಗೆ ಡ್ಯುಯಲ್ ಸಿಲಿಂಡರ್ ಸೌಲಭ್ಯ ಇದರಲ್ಲಿದೆ. ಎರಡು ಸ್ಲಿಮ್ ಸಿಲಿಂಡರ್‌ಗಳ ಜೊತೆಗೆ ಕಾರ್ಗೋ ಪ್ರದೇಶ ವಿಶಾಲವಾಗಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ. CNG ಮೋಡ್‌ನಲ್ಲಿ ಇದರ ಮೈಲೇಜ್ 24 kmpl ಎಂದು ಹೇಳಲಾಗಿದೆ. 8 ರೂಪಾಂತರಗಳಲ್ಲಿ ತರಲಾಗಿದೆ. 6 ಏರ್‌ಬ್ಯಾಗ್‌ಗಳನ್ನು ಅದರ ಎಲ್ಲ ರೂಪಾಂತರಗಳಲ್ಲಿ ಸುರಕ್ಷತಾ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಹ್ಯಾರಿಯರ್ ಮತ್ತು ಸಫಾರಿ ಜೊತೆಗೆ, ಹೆಚ್ಚು ಜನಪ್ರಿಯವಾಗಿದ್ದ ರೆಡ್ ಡಾರ್ಕ್ ಆವೃತ್ತಿಯೂ ಹೊರ ಬಿದ್ದಿದೆ.
ಟಾಟಾ ನೆಕ್ಸಾನ್ ICNG ವಿಶೇಷತೆಗಳು:
- 10.25 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ
- ಎಂಜಿನ್: 1.2 ಲೀಟರ್ ಟರ್ಬೊ ಪೆಟ್ರೋಲ್
- ಟಾರ್ಕ್: 98 bhp, 170 Nm
- 6 ಏರ್ ಬ್ಯಾಗ್‌ಗಳು
- ಸನ್‌ರೂಫ್
- 360 ಡಿಗ್ರಿ ಕ್ಯಾಮೆರಾ
- ಲೆದರ್ ಸೀಟ್ಸ್
- ನ್ಯಾವಿಗೇಷನ್ ಡಿಸ್ಪ್ಲೇ