ಕರ್ನಾಟಕ

karnataka

ETV Bharat / technology

ಕೈಲಾಕ್​ನ ಎಲ್ಲ ರೂಪಾಂತರಗಳ ಬೆಲೆ ರಿವೀಲ್​ ಮಾಡಿದ ಸ್ಕೋಡಾ ಆಟೋ ಇಂಡಿಯಾ! - SKODA KYLAQ FULL PRICE LIST

SKODA KYLAQ FULL PRICE LIST: ಸ್ಕೋಡಾ ಆಟೋ ಇಂಡಿಯಾ ತನ್ನ ಎಸ್‌ಯುವಿ ಸ್ಕೋಡಾ ಕೈಲಾಕ್‌ನ ಎಲ್ಲಾ ರೂಪಾಂತರಗಳ ಬೆಲೆಯ ಬಗ್ಗೆ ಮಾಹಿತಿ ಬಹಿರಂಗಪಡಿಸಿದೆ. ಅವುಗಳ ವಿಶೇಷತೆ ಮತ್ತು ಬೆಲೆಗಳ ಬಗ್ಗೆ ಮಾಹಿತಿ ಇಲ್ಲಿದೆ..

SKODA KYLAQ SPECIFICATIONS  SKODA KYLAQ PRICE LIST REVEALED  SKODA KYLAQ FULL PRICE LIST  SKODA AUTO INDIA
ಕೈಲಾಕ್​ನ ಎಲ್ಲ ರೂಪಾಂತರಗಳ ಬೆಲೆ ರಿವೀಲ್ (Skoda Auto India)

By ETV Bharat Tech Team

Published : Dec 3, 2024, 11:34 AM IST

SKODA KYLAQ FULL PRICE LIST:ಸ್ಕೋಡಾ ಆಟೋ ಇಂಡಿಯಾ ತನ್ನ ಅತ್ಯಂತ ಚಿಕ್ಕ​ ಕಾಂಪ್ಯಾಕ್ಟ್ ಎಸ್‌ಯುವಿ ಸ್ಕೋಡಾ ಕೈಲಾಕ್‌ನ ಎಲ್ಲಾ ರೂಪಾಂತರಗಳ ಬೆಲೆಗಳ ಮಾಹಿತಿಯನ್ನು ನೀಡಿದೆ. ಡಿಸೆಂಬರ್​ 2 ರಿಂದ ಅಂದ್ರೆ ಕಳೆದ ಸೋಮವಾರದಿಂದ ಸ್ಕೋಡಾ ಕೈಲಾಕ್ ಬುಕ್ಕಿಂಗ್ ಆರಂಭವಾಗಿದೆ.

ಸ್ಕೋಡಾ ಕೈಲಾಕ್ ಅನ್ನು ಒಟ್ಟು ನಾಲ್ಕು ಟ್ರಿಮ್‌ಗಳಲ್ಲಿ ನೀಡಲಾಗಿದೆ. ಇದರಲ್ಲಿ ಕ್ಲಾಸಿಕ್, ಸಿಗ್ನೇಚರ್, ಸಿಗ್ನೇಚರ್+ ಮತ್ತು ಪ್ರೆಸ್ಟೀಜ್ ಸೇರಿವೆ. ಈ ಕಾರು ಟೊರ್ನಾಡೊ ರೆಡ್, ಬ್ರಿಲಿಯಂಟ್ ಸಿಲ್ವರ್, ಕ್ಯಾಂಡಿ ವೈಟ್, ಕಾರ್ಬನ್ ಸ್ಟೀಲ್, ಲಾವಾ ಬ್ಲೂ, ಡೀಪ್ ಬ್ಲ್ಯಾಕ್ ಮತ್ತು ಆಲಿವ್ ಗೋಲ್ಡ್ ಸೇರಿದಂತೆ ಏಳು ಬಣ್ಣಗಳಲ್ಲಿ ಲಭ್ಯವಿವೆ. ಕಂಪನಿಯು ಈ ಕಾರಿನೊಂದಿಗೆ 3 ವರ್ಷಗಳು/ಒಂದು ಲಕ್ಷ ಕಿ.ಮೀ. ಪ್ರಮಾಣಿತ ವಾರಂಟಿಯನ್ನು ಸಹ ನೀಡುತ್ತಿದೆ.

Skoda Kylaq ಟ್ರಿಮ್​ ಪೆಟ್ರೋಲ್​ ಎಂಟಿ ಪೆಟ್ರೋಲ್​ ಎಂಟಿ
Classic 7.89 ಲಕ್ಷ ರೂ. -
Signature 9.59 ಲಕ್ಷ ರೂ. 10.59 ಲಕ್ಷ ರೂ.
Signature+ 11.40 ಲಕ್ಷ ರೂ. 12.40 ಲಕ್ಷ ರೂ.
Prestige 13.35 ಲಕ್ಷ ರೂ. 14.40 ಲಕ್ಷ ರೂ.

ಸ್ಕೋಡಾ ಕೈಲಾಕ್‌ನ ವೈಶಿಷ್ಟ್ಯಗಳು: ಸ್ಕೋಡಾ ಕೈಲಾಕ್ ಲೈನ್-ಅಪ್‌ನ ಆರಂಭಿಕ ಬೆಲೆ ರೂ 7.89 ಲಕ್ಷ. ಇದು ಪ್ರವೇಶ ಮಟ್ಟದ ಕ್ಲಾಸಿಕ್ ಟ್ರಿಮ್ ಆಗಿದೆ. ಈ ಟ್ರಿಮ್‌ನಲ್ಲಿ ಆರು ಏರ್‌ಬ್ಯಾಗ್‌ಗಳು, ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟೀರಿಂಗ್ ವ್ಹೀಲ್, ಎಲೆಕ್ಟ್ರಿಕಲ್ ಅಡ್ಜೆಸ್ಟ್ ಮಾಡಬಹುದಾದ ವಿಂಗ್ ಮಿರರ್‌ಗಳು, ಎಲ್ಲಾ ಎಲ್‌ಇಡಿ ಲೈಟ್‌ಗಳು ಮತ್ತು ಇತರ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಈ ರೂಪಾಂತರದಲ್ಲಿ ಆಟೋಮೆಟಿಕ್​ ಗೇರ್ ಬಾಕ್ಸ್ ಆಯ್ಕೆ ಇಲ್ಲ.

ಸ್ಕೋಡಾ ಕೈಲಾಕ್ ಸಿಗ್ನೇಚರ್ ಮ್ಯಾನುವಲ್ ಗೇರ್ ಬಾಕ್ಸ್​ಗೆ 9.59 ಲಕ್ಷ ರೂ. ಮತ್ತು ಆಟೋಮ್ಯಾಟಿಕ್ ಗೇರ್​ ಬಾಕ್ಸ್​ಗೆ ಬೆಲೆ 10.59 ಲಕ್ಷ ರೂ. ಪಾವತಿಸಬೇಕಾಗಿದೆ. ಇದು 16-ಇಂಚಿನ ಅಲಾಯ್​ ವ್ಹೀಲ್​, ಕ್ರೂಸ್ ಕಂಟ್ರೋಲ್, ಟೈರ್ ಪ್ರೆಶರ್​ ಮಾನಿಟರಿಂಗ್, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್​ ಮತ್ತು ಬ್ಯಾಕ್​ ಎಸಿ ವೆಂಟ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಪ್-ಸ್ಪೆಕ್ ಸ್ಕೋಡಾ ಕೈಲಾಕ್ ಪ್ರೆಸ್ಟೀಜ್ ಮ್ಯಾನುವಲ್ ಆವೃತ್ತಿಗೆ ರೂ. 13.35 ಲಕ್ಷ ಮತ್ತು ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಆಟೋಮ್ಯಾಟಿಕ್​ ಆವೃತ್ತಿಗೆ ರೂ. 14.40 ಲಕ್ಷ ನಿಗದಿಪಡಿಸಲಾಗಿದೆ. ಇದು ಸಿಂಗಲ್-ಪೇನ್ ಸನ್‌ರೂಫ್, 17-ಇಂಚಿನ ಡ್ಯುಯಲ್-ಟೋನ್ ಅಲಾಯ್​ ವ್ಹೀಲ್ಸ್​, ಆಟೋಮ್ಯಾಟಿಕ್​ ಹೆಡ್‌ಲ್ಯಾಂಪ್ಸ್​ ಮತ್ತು ವೈಪರ್ಸ್​, ಕಾರ್ನರಿಂಗ್ ಫಂಕ್ಷನ್‌ನೊಂದಿಗೆ LED ಫಾಗ್ ಲ್ಯಾಂಪ್ಸ್​, LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್​ ಮತ್ತು ಆಂಬಿಯೆಂಟ್ ಲೈಟಿಂಗ್‌ನಂತಹ ಇತರ ವೈಶಿಷ್ಟ್ಯಗಳನ್ನು ಹೊಂದಿದೆ.

ಸ್ಕೋಡಾ ಕೈಲಾಕ್ ಪವರ್‌ಟ್ರೇನ್ ಮತ್ತು ವಿಶೇಷತೆಗಳು:ಈ ಕಾರನ್ನು ಕೇವಲ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಪರಿಚಯಿಸಲಾಗಿದೆ. ಇದು ಸ್ಕೋಡಾ ಮತ್ತು ವೋಕ್ಸ್‌ವ್ಯಾಗನ್‌ನ ಇತರ ಕೆಲವು ಕಾರುಗಳಲ್ಲಿಯೂ ಕಂಡುಬರುತ್ತದೆ. ಈ ಎಂಜಿನ್ 114bhp ಪವರ್ ಮತ್ತು 178nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್-ಕನ್ವರ್ಟರ್ ಆಟೋಮ್ಯಾಟಿಕ್​ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ. ಈ ಕಾರು 10.5 ಸೆಕೆಂಡುಗಳಲ್ಲಿ 0-100 km/h ವೇಗವನ್ನು ಪಡೆದುಕೊಳ್ಳುತ್ತದೆ ಎಂದು ಸ್ಕೋಡಾ ಹೇಳಿಕೊಂಡಿದೆ.

ಓದಿ:ವಾಹನ​ ಪ್ರಿಯರಿಗೆ ಗುಡ್​ ನ್ಯೂಸ್​: ಕೆಟಿಎಂ ಇಂಡಿಯಾ ಬೈಕ್​ ಮೇಲೆ ಭಾರೀ ಡಿಸ್ಕೌಂಟ್​!

ABOUT THE AUTHOR

...view details