ಪುಣೆ :ಭಾರತದ ವಿಡಿಯೋ ಗೇಮಿಂಗ್ ವಲಯವು ಗಮನಾರ್ಹ ಬೆಳವಣಿಗೆಗೆ ಸಜ್ಜಾಗಿರುವ ಮಧ್ಯೆ ಇ ಸ್ಪೋರ್ಟ್ಸ್ ಮತ್ತು ಗೇಮ್ ಡೆವಲಪ್ಮೆಂಟ್ ಉದ್ಯಮದಲ್ಲಿ ದೇಶದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು ಎಂದು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ತಜ್ಞರು ಹೇಳಿದ್ದಾರೆ. "ಬೌದ್ಧಿಕ ಆಸ್ತಿಯ ಬೆಳವಣಿಗೆಯಲ್ಲಿ ಹೊಸ ಮಾರ್ಗಗಳನ್ನು ರೂಪಿಸಲು ಭಾರತಕ್ಕೆ ಅಪಾರ ಸಾಮರ್ಥ್ಯವಿದೆ. ಇದು ಇ - ಸ್ಪೋರ್ಟ್ಸ್ ಮತ್ತು ಗೇಮಿಂಗ್ ಡೆವಲಪ್ಮೆಂಟ್ ನಲ್ಲಿ ಹೆಚ್ಚಿನ ಉದ್ಯೋಗಗಳ ಸೃಷ್ಟಿಗೆ ದಾರಿ ಮಾಡಿಕೊಡುತ್ತದೆ" ಎಂದು ಸಿಐಐ ಅಧ್ಯಕ್ಷ ಆರ್ ದಿನೇಶ್ ಇತ್ತೀಚೆಗೆ ಪುಣೆಯಲ್ಲಿ ಮುಕ್ತಾಯಗೊಂಡ ಇಂಡಿಯಾ ಗೇಮಿಂಗ್ ಶೋನಲ್ಲಿ ಹೇಳಿದರು.
ಬೆಳೆಯುತ್ತಿರುವ ಈ ಕ್ಷೇತ್ರದ ಮಹತ್ವವನ್ನು ದಿನೇಶ್ ಒತ್ತಿಹೇಳಿದರು ಮತ್ತು ಮುಂಬರುವ ವರ್ಷಗಳಲ್ಲಿ ಈ ವಲಯದಲ್ಲಿ ಅಗಾಧ ಬೆಳವಣಿಗೆಯಾಗಲಿದೆ ಎಂದು ಅವರು ನಿರೀಕ್ಷೆ ವ್ಯಕ್ತಪಡಿಸಿದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ರಂಗಗಳಲ್ಲಿ ವಿಡಿಯೋ ಗೇಮ್ ಮತ್ತು ಇ- ಸ್ಪೋರ್ಟ್ಸ್ ಕ್ಷೇತ್ರದ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಅವರು ಪ್ರತಿಪಾದಿಸಿದರು.
ಇಂಡಿಯಾ ಗೇಮಿಂಗ್ ಶೋನ ಆರನೇ ಆವೃತ್ತಿಯಲ್ಲಿ 10 ದೇಶಗಳನ್ನು ಪ್ರತಿನಿಧಿಸುವ 70 ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಿದ್ದರು. ಇಂಡೋನೇಷ್ಯಾ ಅತಿಥಿ ದೇಶವಾಗಿ ಇಂಡಿಯಾ ಗೇಮಿಂಗ್ ಶೋನಲ್ಲಿ ಇದೇ ಪ್ರಥಮ ಬಾರಿಗೆ ಪದಾರ್ಪಣೆ ಮಾಡಿತು.