ಕರ್ನಾಟಕ

karnataka

ETV Bharat / technology

Samsung Galaxy Z Fold ಸ್ಪೇಷಲ್​ ಆವೃತ್ತಿ ಅನಾವರಣ: ಭಾರತಕ್ಕೆ ಈಗಲೇ ಲಗ್ಗೆಯಿಡುವುದು ಡೌಟ್​!

Samsung Smartphone Unveiled: ಸ್ಯಾಮ್​ಸಂಗ್​ ಮತ್ತೊಂದು ಫೋಲ್ಡಬಲ್​ ಸ್ಮಾರ್ಟ್​ಫೋನ್ ಪರಿಚಯಿಸಿದೆ. ಸದ್ಯ ಇದು ದಕ್ಷಿಣ ಕೊರಿಯಾದಲ್ಲಿ ಲಭ್ಯವಿದ್ದು, ಚೀನಾದಾದ್ಯಂತ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಇದರ ಬೆಲೆ ಮತ್ತು ವೈಶಿಷ್ಟ್ಯಗಳು ಹೀಗಿವೆ.

Z FOLD SPECIAL EDITION  SAMSUNG GALAXY Z FOLD  SAMSUNG GALAXY Z FOLD PRICE  SAMSUNG GALAXY Z FOLD FEATURES
Samsung Galaxy Z Fold ಸ್ಪೇಷಲ್​ ಆವೃತ್ತಿ ಅನಾವರಣ (Samsung)

By ETV Bharat Tech Team

Published : 4 hours ago

Samsung Foldable Smartphone Unveiled: Samsung ತನ್ನ Z Fold 6ನ ಸುಧಾರಿತ ರೂಪಾಂತರವನ್ನು ಪರಿಚಯಿಸಿದೆ. Galaxy Z ಫೋಲ್ಡ್ ವಿಶೇಷ ಆವೃತ್ತಿಯಾಗಿದ್ದು, ಇದು ಸುಲಭವಾಗಿ ಫೋಲ್ಡಿಂಗ್​ ಮಾಡಬಹುದಾದ ಫೋನ್ ಆಗಿದೆ. Galaxy Z ಫೋಲ್ಡ್ ವಿಶೇಷ ಆವೃತ್ತಿಯು Galaxy Z Fold 6 ಹೋಲುತ್ತದೆ. ಇತ್ತೀಚಿನ ಸಣ್ಣಪುಟ್ಟ ಅಪ್​ಡೇಟ್​ನೊಂದಿಗೆ ಈ ಫೋನ್​ ಸ್ವಲ್ಪ ಹಗುರವಾಗಿದೆ ಮತ್ತು ಸ್ಲಿಮ್​ ಆಗಿದೆ. ಒಟ್ಟಾರೆ ಈ ಫೋನ್​ ಬಳಕೆದಾರರ ಅನುಭವವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಇದರ ಬೆಲೆ ಎಷ್ಟು: ಪ್ರಸ್ತುತ ದಕ್ಷಿಣ ಕೊರಿಯಾದಲ್ಲಿ ಈ ಸ್ಮಾರ್ಟ್​ಫೋನ್​ ಲಭ್ಯವಿದೆ. Samsung ತನ್ನ ಲಭ್ಯತೆಯನ್ನು ಚೀನಾಕ್ಕೆ ವಿಸ್ತರಿಸಬಹುದು. ಈ ಸಾಧನವು ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಿಗೆ ಬರದಿರಬಹುದು. ಇದರ ಬೆಲೆ ಭಾರತದ ರೂಪಾಯಿಗಳಲ್ಲಿ ಹೇಳೋದಾದರೆ ಸುಮಾರು ರೂ 1,70,207 ಇರಬಹುದು ಎಂದು ಅಂದಾಜಿಸಲಾಗಿದೆ. ಇದು Galaxy Z Fold 6 ಗಿಂತ ಸ್ವಲ್ಪ ಹೆಚ್ಚು ದುಬಾರಿಯಾಗಿದೆ.

ಈ ಮಡಚಬಹುದಾದ ಫೋನ್​​​​​ನ ವೈಶಿಷ್ಟ್ಯಗಳು ಹೀಗಿವೆ: ಇದು 200MP ವೈಡ್-ಆಂಗಲ್ ಕ್ಯಾಮೆರಾ, 6.5-ಇಂಚಿನ ಕವರ್ ಡಿಸ್​ಪ್ಲೇ ಮತ್ತು 8.0-ಇಂಚಿನ ಫೋಲ್ಡಬಲ್ ಡಿಸ್​ಪ್ಲೇ ಒಳಗೊಂಡಂತೆ ಸ್ವಲ್ಪ ಹೆಚ್ಚು ಪ್ಯಾಕ್ ಮಾಡುತ್ತದೆ. Galaxy Z ಫೋಲ್ಡ್ ವಿಶೇಷ ಆವೃತ್ತಿಯನ್ನು ಅತಿದೊಡ್ಡ ಫೋಲ್ಡಿಂಗ್​ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಆಗಿದೆ. ರೆಂಡರ್‌ಗಳ ಪ್ರಕಾರ, ಈ ಫೋನ್​ ಫೋಲ್ಡ್​ ಮಾಡಿದಾಗ ಸ್ವಲ್ಪ ಕಡಿಮೆ ಗೋಚರ ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇದು ಇನ್ನೂ 16GB RAM ಮತ್ತು 512 GB ಸ್ಟೋರೇಜ್​ ಹೊಂದಿದೆ. ಅದೇ Snapdragon 8 Gen 3 SoC ಪ್ರೋಸೆಸರ್​ ಆಧರಿಸಿದೆ. ಆದರೂ, ಅಂಡರ್-ಡಿಸ್​ಪ್ಲೇ ಕ್ಯಾಮೆರಾ, S-ಪೆನ್‌ಗೆ ಬೆಂಬಲದಂತಹ ಕೆಲವು ವಿಷಯಗಳಲ್ಲಿ ಇದು ಕಳೆದುಕೊಳ್ಳುತ್ತದೆ ಮತ್ತು ಬ್ಲ್ಯಾಕ್​ ಶಾಡೋದಲ್ಲಿ ಮಾತ್ರ ಲಭ್ಯವಿದೆ.

Samsung Galaxy Z Fold ವಿಶೇಷ ಆವೃತ್ತಿಯು ದಕ್ಷಿಣ ಕೊರಿಯಾದಲ್ಲಿ ಅಕ್ಟೋಬರ್ 25 ರಿಂದ ಮಾರಾಟವಾಗಲಿದೆ. ಅಕ್ಟೋಬರ್ 31ರ ಮೊದಲು ಈ ಮೊಬೈಲ್​ ಖರೀದಿದಾರರು Galaxy Ring, Galaxy Watch Ultra, Galaxy Buds3 Pro ಮತ್ತು Galaxy Tab S10 Ultra ಉತ್ಪನ್ನಗಳಲ್ಲಿ ಕೆಲವು ರಿಯಾಯಿತಿ ಕೂಪನ್‌ಗಳನ್ನು ಪಡೆಯಬಹುದಾಗಿದೆ.

ಓದಿ:ಮದರ್​ಬೋರ್ಡ್​ ವೈಫಲ್ಯ, ಗ್ರೀನ್​ ಲೈನ್ಸ್​ ಸಮಸ್ಯೆ, ಉಚಿತ ಪರಿಹಾರಕ್ಕೆ ಮುಂದಾದ OnePlus​!

ABOUT THE AUTHOR

...view details