ಕರ್ನಾಟಕ

karnataka

ETV Bharat / technology

ಸ್ಯಾಮ್​ಸಂಗ್​ ಗ್ಯಾಲೆಕ್ಸಿ ಎಸ್​ 25 ಸೀರಿಸ್​ಗೂ ಎಸ್​24ಗೂ ವ್ಯತ್ಯಾಸವೇನು? - GALAXY S25 SERIES UPDATE

Samsung Galaxy S25 Series: ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಸ್ಯಾಮ್​ಸಂಗ್​ ಗ್ಯಾಲೆಕ್ಸಿ ಎಸ್​25 ಸೀರಿಸ್​​ 12GB RAM ನ ಅಪ್‌ಗ್ರೇಡ್ ಬರಲಿದೆ. ಇದು ಹಿಂದಿನ S24 ಸರಣಿಯ 8GB RAM ಗಿಂತ ಹೆಚ್ಚು ಶಕ್ತಿಶಾಲಿ.

2025 SAMSUNG GALAXY UNPACKED  SAMSUNG S25 SERIES EXPECTED PRICES  GALAXY UNPACKED 2025 PRODUCTS
ಸ್ಯಾಮ್​ಸಂಗ್​ ಗ್ಯಾಲೆಕ್ಸಿ ಎಸ್​25 (Photo Credit: Itel)

By ETV Bharat Tech Team

Published : 5 hours ago

Samsung Galaxy S25 Series Update:ಇನ್ನು ಕೆಲವೇ ದಿನಗಳಲ್ಲಿ ಸ್ಯಾಮ್​ಸಂಗ್​ ಗ್ಯಾಲೆಕ್ಸಿ ಎಸ್​25 ಸೀರಿಸ್ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಕಂಪನಿಯು ಜನವರಿ 22 ರಂದು ಈ ಸೀರಿಸ್​ ಅನ್ನು ಪ್ರಾರಂಭಿಸಬಹುದು. ಈ ಸೀರಿಸ್​ ಸ್ಯಾಮ್​ಸಂಗ್​ ಗ್ಯಾಲೆಕ್ಸಿ ಎಸ್​25, ಸ್ಯಾಮ್​ಸಂಗ್​ ಗ್ಯಾಲೆಕ್ಸಿ ಎಸ್​25+ ಮತ್ತು ಸ್ಯಾಮ್​ಸಂಗ್​ ಗ್ಯಾಲೆಕ್ಸಿ ಅಲ್ಟ್ರಾ ಫೋನ್‌ಗಳನ್ನು ಒಳಗೊಂಡಿರುತ್ತದೆ. ಈ ಬಾರಿ ಸ್ಯಾಮ್​ಸಂಗ್​ ಗ್ಯಾಲೆಕ್ಸಿ ಎಸ್​25 ಬಿಗ್​ RAM ಪಡೆಯಲಿದೆ ಎಂದು ಬಹಿರಂಗಪಡಿಸಿದೆ. ಅಸ್ತಿತ್ವದಲ್ಲಿರುವ S24 ಸರಣಿಗೆ ಹೋಲಿಸಿದರೆ ಇದು ದೊಡ್ಡ ಬದಲಾವಣೆಯಾಗಿದೆ.

Samsung Galaxy S25: ಗ್ಯಾಲೆಕ್ಸಿ​ ಎಸ್​25 ಸೀರಿಸ್​ 12GB RAM ಪ್ರಮಾಣಿತವಾಗಿರುತ್ತದೆ ಎಂದು ಇತ್ತೀಚಿನ ಮಾಹಿತಿಗಳು ಬಹಿರಂಗಪಡಿಸಿವೆ. ಈ ಸೀರಿಸ್​ ಯಾವುದೇ ಮಾದರಿಯು ಪ್ರಸ್ತುತ ಎಸ್​24 ಸರಣಿಯಂತೆ 8GB RAM ಅನ್ನು ಹೊಂದಿರುವುದಿಲ್ಲ. ಕಂಪನಿಯು ಪ್ರಸ್ತುತ ಎಸ್​24 ನಲ್ಲಿ 8GB RAM ಹೊಂದಿದ್ದು, ಇದು 128GB, 256GB ಮತ್ತು 512GB ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ. ಆದರೆ, S24 ಪ್ಲಸ್ ಮತ್ತು ಅಲ್ಟ್ರಾ ಮಾದರಿಗಳು 12GB RAM ನೊಂದಿಗೆ ಬರುತ್ತವೆ. ಎಸ್​25ನ ಮೂಲ ರೂಪಾಂತರವು 12GB RAM ಮತ್ತು 256GB ಸ್ಟೋರೇಜ್​ ಬರಲಿದೆ ಎಂದು ವರದಿಯಾಗಿದೆ.

ಊಹಾಪೋಹ: ಎಸ್​25 ಅಲ್ಟ್ರಾದಲ್ಲಿ 16GB RAM ಅನ್ನು ಕಾಣಬಹುದು ಎಂಬ ಊಹಾಪೋಹಗಳೂ ಇವೆ. ಹೆಚ್ಚಿದ RAM ಜೊತೆಗೆ, AI ವೈಶಿಷ್ಟ್ಯಗಳನ್ನು ಈ ಫೋನ್‌ಗಳಲ್ಲಿ ಉತ್ತಮವಾಗಿ ಸಂಯೋಜಿಸಬಹುದು. ಆದರೆ, ಈ ಬಗ್ಗೆ ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ವೈಶಿಷ್ಟ್ಯಗಳು ಮತ್ತು ಬೆಲೆ: Qualcomm ನ Snapdragon 8 Elite ಚಿಪ್‌ಸೆಟ್ ಮುಂಬರುವ ಸರಣಿಯಲ್ಲಿ ಕಾಣಬಹುದು. 5G ಕನೆಕ್ಟಿವಿ ಹೊಂದಿರುವ ಎಲ್ಲ ಮೂರು ಫೋನ್‌ಗಳು Android 15 ನಲ್ಲಿ ರನ್ ಆಗುತ್ತವೆ. ಎಸ್​24 ಸರಣಿಗೆ ಹೋಲಿಸಿದರೆ, S25 ಸರಿಣಿ ಉತ್ತಮ ಕ್ಯಾಮೆರಾ ಹೊಂದಿರುತ್ತದೆ. ಪ್ರಸ್ತುತ 12MP ಗೆ ಬದಲಾಗಿ ಗ್ಯಾಲೆಕ್ಸಿ ಎಸ್​25 ಅಲ್ಟ್ರಾದಲ್ಲಿ 50MP ಅಲ್ಟ್ರಾ-ವೈಡ್ ಸೆನ್ಸಾರ್​ ಕಾಣಬಹುದು.

ಬೆಲೆಯ ಬಗ್ಗೆ ಮಾತನಾಡುವುದಾದರೆ ಹೊಸ ಗ್ಯಾಲೆಕ್ಸಿ ಎಸ್​25 ಸರಣಿಯ ಫೋನ್‌ಗಳ ಬೆಲೆಯು ಗ್ಯಾಲೆಕ್ಸಿ ಎಸ್​24 ಸರಣಿಗಿಂತ 5,000-7,000 ಹೆಚ್ಚು ದುಬಾರಿಯಾಗಬಹುದು. ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ನ ಮೂಲ ಮಾದರಿಯು 12GB + 128GB ರೂಪಾಂತರಕ್ಕಾಗಿ ಸುಮಾರು $799 (ಅಂದಾಜು ರೂ. 68,000) ರಿಂದ ಪ್ರಾರಂಭವಾಗಬಹುದು. Galaxy S25+ ಸುಮಾರು $999 ರಿಂದ ಪ್ರಾರಂಭವಾಗಬಹುದು (ಸುಮಾರು ರೂ. 85,000) ಜೊತೆಗೆ 256GB ಸ್ಟೋರೇಜ್​ ಹೊಂದಿದೆ. ಪ್ರಮುಖ ಮಾದರಿ, Galaxy S25 Ultra, 12GB + 256GB ಬೇಸ್ ಕಾನ್ಫಿಗರೇಶನ್‌ಗಾಗಿ ಸುಮಾರು $1,299 (ಅಂದಾಜು ರೂ. 1.10 ಲಕ್ಷ) ರಿಂದ ಪ್ರಾರಂಭವಾಗಬಹುದು.

ಸ್ಯಾಮ್​ಸಂಗ್​ ಗ್ಯಾಲೆಕ್ಸಿ ಎಸ್​25 ಜನವರಿ 22, 2025 ರಂದು ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿರುವ ಬ್ರ್ಯಾಂಡ್‌ನ ಪ್ರಧಾನ ಕಚೇರಿಯಿಂದ ತನ್ನ X ಪೋಸ್ಟ್ ಮೂಲಕ ಪೋಸ್ಟ್ ಬಿಡುಗಡೆ ಮಾಡಲಾಗುವುದು ಎಂದು ಹೇಳಿಕೊಂಡಿದೆ.

ಓದಿ:ಎಲೆಕ್ಟ್ರಿಕ್​ ವಾಹನಗಳ ಸಮುದ್ರಕ್ಕೆ ಅಪ್ಪಳಿಸಿದ ಬಜಾಜ್!: ಹೇಗಿವೆ ಗೊತ್ತಾ ಚೇತಕ್ ಇವಿ ಸ್ಕೂಟರ್​ಗಳ ಬೆಲೆ, ವೈಶಿಷ್ಟ್ಯಗಳು?

ABOUT THE AUTHOR

...view details