ಹೈದರಾಬಾದ್:ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಕಂಪನಿಯು ತನ್ನ ಲೇಟೆಸ್ಟ್ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯನ್ನು ಬುಧವಾರ ಅದ್ಧೂರಿ ಕಾರ್ಯಕ್ರಮದ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. S-ಸರಣಿಯ ಮುಂದುವರೆದ ಭಾಗ ಇದಾಗಿದ್ದು, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದೆ.
ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ಪ್ರೊಸೇಸರ್, 200MP ಕ್ಯಾಮರಾ ಮತ್ತು ವಿಶೇಷವಾಗಿ AI ಆಧಾರಿತ ಅನೇಕ ಜಬರದಸ್ತ್ ಫೀಚರ್ಗಳೊಂದಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 (Samsung Galaxy S25), ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ (Samsung Galaxy S25+) ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ (Samsung Galaxy S25 Ultra) ಎಂಬ ಮೂರು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಗೊಳಿಸಿದೆ. ಸ್ಮಾರ್ಟ್‌ಫೋನ್ ಪ್ರಿಯರ ಕಾಯುವಿಕೆಗೆ ಸದ್ಯಕ್ಕೆ ಸ್ಟಾಪ್ ನೀಡಿದೆ.
ಆಂಡ್ರಾಯ್ಡ್ 15 ಆಧಾರಿತ ಹಾಗೂ AI - ಸಂಯೋಜಿತದ ಜೊತೆಗೆ One UI 7 ವೈಶಿಷ್ಟ್ಯಗಳೊಂದಿಗೆ ರಿಫ್ರೆಶ್ ವಿನ್ಯಾಸವನ್ನು ಈ ಸ್ಮಾರ್ಟ್‌ಫೋನ್‌ಗಳು ಹೊಂದಿರಲಿವೆ. ಹೆಚ್ಚುವರಿಯಾಗಿ ಸ್ಯಾಮ್‌ಸಂಗ್ ವರ್ಧಿತ Bixby AI ಸಹಾಯಕದೊಂದಿಗೆ ಅನಾವರಣಗೊಂಡಿದ್ದು, ಈ ಸ್ಮಾರ್ಟ್‌ಫೋನ್‌ಗಳ ವಿಶೇಷ. ಲೈನ್‌ಅಪ್ ಸರ್ಕಲ್ ಟು ಸರ್ಚ್, ಕಾಲ್ ಟ್ರಾನ್ಸ್‌ಕ್ರಿಪ್ಟ್‌ಗಳು, ಬರವಣಿಗೆ ಸಹಾಯ ಮತ್ತು ಹಿಂದೆ ಲಭ್ಯವಿರುವ ಇತರ AI ವೈಶಿಷ್ಟ್ಯಗಳಂತಹ ಇತರ AI-ಚಾಲಿತ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ. ಹಾಗಾದರೆ ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್‌ಗಳ ಬೆಲೆ ಎಷ್ಟು? ಇತರ ವೈಶಿಷ್ಟ್ಯಗಳೇನು? ಎಲ್ಲವನ್ನು ಈ ಕೆಳಗೆ ತಿಳಿದುಕೊಳ್ಳಬಹುದು.
ಭಾರತೀಯ ಮಾರುಕಟ್ಟೆಯಲ್ಲಿ ಇವುಗಳ ಬೆಲೆ:ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಬೆಲೆಯನ್ನು ನೋಡುವುದಾರೆ ಆರಂಭಿಕ ಫೋನ್ 12GB + 256GB ಸ್ಟೋರೇಜ್ ರೂಪಾಂತರಕ್ಕಾಗಿ ನೀವು 80,999 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಅದರ 12GB + 512GB ಸ್ಟೋರೇಜ್ ರೂಪಾಂತರದ ಬೆಲೆ 92,999 ರೂ.ಗಳಾಗಿದೆ. ಐಸಿಬ್ಲೂ, ಸಿಲ್ವರ್ ಶ್ಯಾಡೋ, ನೇವಿ ಮತ್ತು ಮಿಂಟ್ ಬಣ್ಣದ ಆಯ್ಕೆಗಳಲ್ಲಿ ನೀವು ಫೋನ್‌ಗಳನ್ನು ಖರೀದಿಸಬಹುದು.
- 12GB + 256GB ಸ್ಟೋರೇಜ್ ಮೊಬೈಲ್ - 80,999 ರೂ.
- 12GB+512GB ಸ್ಟೋರೇಜ್ ಮೊಬೈಲ್ - 92,999 ರೂ.
ಇನ್ನು 12GB + 256GB ಸ್ಟೋರೇಜ್ ಹೊಂದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ ಫೋನ್ ಬೆಲೆ 99,999 ರೂ. ಆಗಿದೆ. 12GB + 512GB ಸ್ಟೋರೇಜ್ ಇರುವ ಮೊಬೈಲ್ಗೆ 1,29,999 ರೂ. ದರ ನಿಗದಿ ಮಾಡಲಾಗಿದೆ. ನೀವು ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ ಅನ್ನು ನೇವಿ ಮತ್ತು ಸಿಲ್ವರ್ ಶ್ಯಾಡೋ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.
- 12GB + 256GB ಸ್ಟೋರೇಜ್ ಮೊಬೈಲ್ - 99,999 ರೂ.
- 12GB + 512GB ಸ್ಟೋರೇಜ್ ಮೊಬೈಲ್ - 1,29,999 ರೂ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ 12GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆಯು 1,29,999 ರೂ.ಗಳಾಗಿದೆ. ಅದರ 12GB + 512GB ಸ್ಟೋರೇಜ್ ರೂಪಾಂತರದ ಬೆಲೆ 1,41,999 ರೂ.ಗಳಾಗಿವೆ. 12GB + 1TB ಸ್ಟೋರೇಜ್ ರೂಪಾಂತರದ ಬೆಲೆ 1,65,999 ರೂ.ಗಳಾಗಿವೆ. ಟೈಟಾನಿಯಂ ಸಿಲ್ವರ್ ಬ್ಲೂ, ಟೈಟಾನಿಯಂ ಗ್ರೇ, ಟೈಟಾನಿಯಂ ವೈಟ್‌ಸಿಲ್ವರ್ ಮತ್ತು ಟೈಟಾನಿಯಂ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿದೆ.
- 12GB RAM ಮತ್ತು 256GB ಸ್ಟೋರೇಜ್ ಮೊಬೈಲ್ - 1,29,999 ರೂ.
- 12GB + 512GB ಸ್ಟೋರೇಜ್ ಮೊಬೈಲ್ - 1,41,999 ರೂ.
- 12GB + 1TB ಸ್ಟೋರೇಜ್ ಮೊಬೈಲ್ - 1,65,999 ರೂ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S25, ಗ್ಯಾಲಕ್ಸಿ S25+ ವಿಶೇಷಣಗಳು:
ಡಿಸ್ಪ್ಲೇ: ಸ್ಯಾಮ್‌ಸಂಗ್ ಗ್ಯಾಲಕ್ಸಿ S25 6.2-ಇಂಚಿನ ಪೂರ್ಣ HD+ ಡೈನಾಮಿಕ್ AMOLED 2X ಸ್ಕ್ರೀನ್ ಅನ್ನು ಹೊಂದಿದ್ದು, 120Hz ರಿಫ್ರೆಶ್ ದರ ಮತ್ತು 2,600nits ಗರಿಷ್ಠ ಹೊಳಪನ್ನು ಬೆಂಬಲಿಸುತ್ತದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ ಮೊಬೈಲ್ ಸ್ವಲ್ಪ ದೊಡ್ಡದಾದ 6.7-ಇಂಚಿನ ಡೈನಾಮಿಕ್ AMOLED 2X ಸ್ಕ್ರೀನ್ ಹೊಂದಿದ್ದು ಸ್ಟ್ಯಾಂಡರ್ಡ್ ಮಾದರಿಯಂತೆಯೇ ಅದೇ ವಿಶೇಷಣಗಳೊಂದಿಗೆ ಹೊಂದಿದೆ.