ಕರ್ನಾಟಕ

karnataka

ETV Bharat / technology

50 MP ಕ್ಯಾಮೆರಾದೊಂದಿಗೆ ಸ್ಯಾಮ್​ಸಂಗ್ Galaxy F 55 ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು ಗೊತ್ತಾ? - Samsung launches Galaxy F55 - SAMSUNG LAUNCHES GALAXY F55

ಸ್ಯಾಮ್​ಸಂಗ್ ತನ್ನ ಹೊಸ ಸ್ಮಾರ್ಟ್​ಫೋನ್ ಗ್ಯಾಲಕ್ಸಿ ಎಫ್ 55 5ಜಿ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಸ್ಯಾಮ್​ಸಂಗ್ Galaxy F 55 ಸ್ಮಾರ್ಟ್​ಫೋನ್ ಬಿಡುಗಡೆ
ಸ್ಯಾಮ್​ಸಂಗ್ Galaxy F 55 ಸ್ಮಾರ್ಟ್​ಫೋನ್ ಬಿಡುಗಡೆ (IANS image)

By ETV Bharat Karnataka Team

Published : May 27, 2024, 5:05 PM IST

ನವದೆಹಲಿ: ಸ್ಯಾಮ್ ಸಂಗ್ ಸೋಮವಾರ ತನ್ನ ಗ್ಯಾಲಕ್ಸಿ ಎಫ್ ಸರಣಿಯ ಎಫ್ 55 5ಜಿ ಹೆಸರಿನ ಅಡಿ 50 ಎಂಪಿ ಕ್ಯಾಮೆರಾ ಹೊಂದಿರುವ ಹೊಸ ಸ್ಮಾರ್ಟ್​ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಗ್ಯಾಲಕ್ಸಿ ಎಫ್ 55 5ಜಿ ಮೂರು ರೀತಿಯ ಸ್ಟೋರೇಜ್ ಮಾದರಿಗಳಲ್ಲಿ ಲಭ್ಯವಿದೆ. 8 ಜಿಬಿ + 128 ಜಿಬಿ, 8 ಜಿಬಿ + 256 ಜಿಬಿ ಮತ್ತು 12 ಜಿಬಿ + 256 ಜಿಬಿ ಈ ಸ್ಟೋರೇಜ್​ ಮಾದರಿಗಳ ಪೈಕಿ ಯಾವುದನ್ನಾದರೂ ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದು.

ಫ್ಲಿಪ್ ಕಾರ್ಟ್, Samsung ಡಾಟ್ com ಮತ್ತು ಆಯ್ದ ಚಿಲ್ಲರೆ ಅಂಗಡಿಗಳಲ್ಲಿ 26,999 ರೂ.ಗಳ ಆರಂಭಿಕ ಬೆಲೆಯಲ್ಲಿ ಹೊಸ ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್ ಅನ್ನು ಖರೀದಿಸಬಹುದು. ಈ ಡಿವೈಸ್ ಏಪ್ರಿಕಾಟ್ ಕ್ರಶ್ ಮತ್ತು ರೈಸಿನ್ ಬ್ಲ್ಯಾಕ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ.

ಯಾವೆಲ್ಲ ವಿಶೇಷತೆಗಳನ್ನು ಹೊಂದಿದೆ ಫೋನ್​?:"ಗ್ಯಾಲಕ್ಸಿ ಎಫ್ 55 5ಜಿ ಯೊಂದಿಗೆ ಸ್ಯಾಮ್ ಸಂಗ್ ಎಫ್ ಸರಣಿಯಲ್ಲಿ ಮೊದಲ ಬಾರಿಗೆ ಸ್ಯಾಡಲ್ ಸ್ಟಿಚ್ಡ್​​ ಮಾದರಿಯೊಂದಿಗೆ ಕ್ಲಾಸಿ ವೆಗನ್ ಚರ್ಮದ ವಿನ್ಯಾಸವನ್ನು ಹೊಂದಿದೆ. ಸ್ಯಾಡಲ್ ಸ್ಟಿಚ್ ಪ್ಯಾಟರ್ನ್ ಹೊಂದಿರುವ ಕ್ಲಾಸಿ ವೆಗನ್ ಲೆದರ್ ಬ್ಯಾಕ್ ಪ್ಯಾನಲ್ ಮತ್ತು ಚಿನ್ನದ ಬಣ್ಣದಲ್ಲಿ ಕ್ಯಾಮೆರಾ ಡೆಕೊ ಪ್ರೀಮಿಯಂ ಸೌಂದರ್ಯವನ್ನು ಹೆಚ್ಚಿಸುತ್ತದೆ" ಎಂದು ಸ್ಯಾಮ್ ಸಂಗ್ ಇಂಡಿಯಾದ ಎಂಎಕ್ಸ್ ವಿಭಾಗದ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಏನೇನು ಹೊಸತಿದೆ?:ಹೊಸ ಸ್ಮಾರ್ಟ್ ಫೋನ್ 6.7 ಇಂಚಿನ ಫುಲ್ ಎಚ್​ಡಿ ಪ್ಲಸ್ ಸೂಪರ್ ಅಮೋಲೆಡ್ ಪ್ಲಸ್ ಡಿಸ್ ಪ್ಲೇ ಹೊಂದಿದ್ದು, ಇದು 1000 ಬಿಟ್​ನಷ್ಟು ಹೆಚ್ಚಿನ ಪ್ರಕಾಶಮಾನತೆ ಒಳಗೊಂಡಿದೆ. ಇದು ಕೇವಲ 180 ಗ್ರಾಂ ತೂಕ ಮತ್ತು 7.8 ಎಂಎಂ ಅಗಲ ಇದೆ ಮತ್ತು ಬಳಸಲು ತುಂಬಾ ಆರಾಮದಾಯಕವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಫೋನ್ 120Hz ರಿಫ್ರೆಶ್ ರೇಟ್ ಹೊಂದಿದ್ದು, ಸಾಮಾಜಿಕ ಮಾಧ್ಯಮ ಫೀಡ್​ಗಳನ್ನು ಸ್ಕ್ರಾಲ್ ಮಾಡುವುದನ್ನು ಸುಗಮಗೊಳಿಸುತ್ತದೆ. ಹೆಚ್ಚಿನ ರೆಸಲ್ಯೂಶನ್ ಮತ್ತು ಶೇಕ್-ಫ್ರೀ ವೀಡಿಯೊಗಳು ಮತ್ತು ಫೋಟೋಗಳನ್ನು ಶೂಟ್ ಮಾಡಲು ಸಾಧನವು 50 ಎಂಪಿ (ಒಐಎಸ್) 'ನೋ ಶೇಕ್ ಕ್ಯಾಮೆರಾ' ಅನ್ನು ಹೊಂದಿದೆ.

ಕ್ಯಾಮೆರಾ ಸೆಟಪ್ 8 ಎಂಪಿ ಅಲ್ಟ್ರಾ-ವೈಡ್ ಸೆನ್ಸಾರ್ ಅನ್ನು ಸಹ ಒಳಗೊಂಡಿದೆ. ಇದು ಮುಂಭಾಗದಲ್ಲಿ 50 ಎಂಪಿ ಹೈ ರೆಸಲ್ಯೂಶನ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಗ್ಯಾಲಕ್ಸಿ ಎಫ್ 55 5ಜಿ ಕ್ವಾಲ್ ಕಾಮ್ ಸ್ನ್ಯಾಪ್ ಡ್ರಾಗನ್ 7 ಜೆನ್ 1 ಪ್ರೊಸೆಸರ್​ನಿಂದ ನಿಯಂತ್ರಿಸಲ್ಪಡುತ್ತದೆ. ಸಾಧನವು 5000 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ ಮತ್ತು 45 ವ್ಯಾಟ್ ಸೂಪರ್-ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಇದನ್ನೂ ಓದಿ : ಒಂಟಿತನ ಕಾಡುತ್ತಿದೆಯಾ? ನಿಮಗೆ ಸಂಗಾತಿಯಾಗಬಲ್ಲದು ಎಐ; ಹೊಸ ಆವಿಷ್ಕಾರ - AI For Mental Health

ABOUT THE AUTHOR

...view details