ಕರ್ನಾಟಕ

karnataka

ETV Bharat / technology

ಸುರಕ್ಷತೆ ಪ್ರತಿಯೊಬ್ಬರ ಜವಾಬ್ದಾರಿ! ಗ್ಯಾಸ್ ಸಿಲಿಂಡರ್ ಬಳಕೆಯಲ್ಲಿ ಈ ಮುನ್ನೆಚ್ಚರಿಕೆಗಳು ಕಡ್ಡಾಯ! - LPG CYLINDER SAFETY PRECAUTIONS - LPG CYLINDER SAFETY PRECAUTIONS

LPG Gas Cylinder Safety Precautions: ಪ್ರಸ್ತುತ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಪ್ರತಿ ಮನೆಯಲ್ಲೂ ಬಳಸಲಾಗುತ್ತಿದೆ. ಇದು ಎಷ್ಟು ಉಪಯುಕ್ತವೋ ಅಷ್ಟೇ ಅಪಾಯಕಾರಿಯೂ ಹೌದು. ಗ್ಯಾಸ್ ಸಿಲಿಂಡರ್ ಬಳಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿರುವುದು ದೊಡ್ಡ ಅಪಘಾತಗಳಿಗೆ ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ಸಿಲಿಂಡರ್ ಬಳಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಇಲ್ಲಿ ತಿಳಿಯೋಣ..

LPG GAS CYLINDER SAFETY TIPS  GAS CYLINDER SAFETY GUIDELINES  GAS CYLINDER SAFETY RULES  GAS CYLINDER SAFETY PRECAUTIONS
ಗ್ಯಾಸ್ ಸಿಲಿಂಡರ್ ಬಳಕೆಯಲ್ಲಿ ಈ ಮುನ್ನೆಚ್ಚರಿಕೆಗಳು ಕಡ್ಡಾಯ! (ETV Bharat)

By ETV Bharat Karnataka Team

Published : Sep 5, 2024, 5:30 AM IST

LPG Gas Cylinder Safety Precautions:ಪ್ರಸ್ತುತ, ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬಳಕೆ ಹೆಚ್ಚಾಗಿದೆ. ಪ್ರತಿ ಮನೆಯಲ್ಲೂ ಗ್ಯಾಸ್ ಸಿಲಿಂಡರ್ ಇದೆ. ಆದರೆ ಕೆಲವೊಮ್ಮೆ ಅಡುಗೆ ಮಾಡುವಾಗ ಭಾರಿ ಗ್ಯಾಸ್​ ಸಿಲಿಂಡರ್​ ಬ್ಲಾಸ್ಟ್​ ಆಗುತ್ತಿರುತ್ತವೆ. ಅಂತಹ ಸಮಯದಲ್ಲಿ ಏನು ಮಾಡಬೇಕೆಂದು ತಿಳಿಯದೆ ಮಹಿಳೆಯರು ತುಂಬಾ ಭಯಪಡುತ್ತಾರೆ. ಆದರೆ ಗ್ಯಾಸ್ ಸಿಲಿಂಡರ್ ಬಳಸುವಾಗ ಕೆಲವು ಮುಂಜಾಗ್ರತೆ ವಹಿಸಿದರೆ ಅಪಘಾತಗಳನ್ನು ತಪ್ಪಿಸಬಹುದಾಗಿದೆ. ಅದು ಯಾವರೀತಿ ಎಂಬುದು ತಿಳಿಯೋಣಾ ಬನ್ನಿ..

ಸುರಕ್ಷತಾ ಕ್ರಮಗಳು:

  • ISI ಗುರುತು ಇರುವ LPG ಗ್ಯಾಸ್ ಸಿಲಿಂಡರ್‌ಗಳನ್ನು ಮಾತ್ರ ಬಳಸಬೇಕು. ಗ್ಯಾಸ್ ಸಿಲಿಂಡರ್ ವಿತರಣೆಯ ಸಮಯದಲ್ಲಿ, ಸಿಲಿಂಡರ್ ಸೀಲ್ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ.
  • ಬಳಕೆಗೆ ಮುನ್ನ LPG ಸಿಲಿಂಡರ್ ಸೋರಿಕೆಯ ಬಗ್ಗೆ ಮೊದಲು ಗಮನಹರಿಸಿ. ಸಿಲಿಂಡರ್ ಅನ್ನು ಯಾವಾಗಲೂ ಗಾಳಿ ಇರುವ ಪ್ರದೇಶದಲ್ಲಿ ಇಡಬೇಕು.
  • ಗ್ಯಾಸ್ ಸಿಲಿಂಡರ್ ಇರುವ ಕೋಣೆಯಲ್ಲಿ ಗ್ಯಾಸ್ ಡಿಟೆಕ್ಟರ್ ಅಳವಡಿಸುವುದು ಉತ್ತಮ. ಸಿಲಿಂಡರ್ ನಿಂದ ಗ್ಯಾಸ್ ಲೀಕೇಜ್ ಆಗಿದ್ದರೆ ಅದು ನಿಮಗೆ ಎಚ್ಚರಿಕೆ ನೀಡುತ್ತದೆ.
  • ಗ್ಯಾಸ್​ ಸೋರಿಕೆಯನ್ನು ತಡೆಗಟ್ಟಲು LPG ಸ್ಟೌವ್ ಮತ್ತು ಸಂಪರ್ಕಗಳನ್ನು ನಿಯಮಿತವಾಗಿ ಪರೀಕ್ಷಿಸಿ ಮತ್ತು ನಿರ್ವಹಿಸಿ.
  • ಅಡುಗೆ ಮಾಡಿದ ತಕ್ಷಣ ಅನಿಲ ಪೂರೈಕೆಯನ್ನು ಆಫ್ ಮಾಡಿ. ಹಾಗೆಯೇ ಹೊರಗೆ ಹೋಗುವಾಗ ರಾತ್ರಿ ಮಲಗುವ ಮುನ್ನ ಗ್ಯಾಸ್ ಆಫ್ ಆಗಿದೆಯೇ ಎಂದು ಪರೀಕ್ಷಿಸಿಕೊಳ್ಳುವುದು ಉತ್ತಮ.
  • ಗ್ಯಾಸ್ ಸೋರಿಕೆಯನ್ನು ತಪ್ಪಿಸಲು LPG ಸ್ಟೌವ್ ಮತ್ತು ಸಂಪರ್ಕಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು. ಅಡುಗೆ ಮನೆ ಮತ್ತು ಎಲ್‌ಪಿಜಿ ಸಿಲಿಂಡರ್‌ನಿಂದ ಮಕ್ಕಳನ್ನು ಯಾವಾಗಲೂ ದೂರವಿಡಿ.
  • ಆಕಸ್ಮಿಕ ಅನಿಲ ಸೋರಿಕೆಯ ಸಂದರ್ಭದಲ್ಲಿ ಕಿಟಕಿಗಳನ್ನು ತೆರೆಯಿರಿ. LPG ಪೂರೈಕೆದಾರ ಅಥವಾ ತುರ್ತು ಸೇವೆಗಳನ್ನು ಸಂಪರ್ಕಿಸಿ.

ಡೆಲಿವೆರಿ ಚಾರ್ಜ್​ ಇಲ್ಲ:

  • ಮನೆಗೆ ತಲುಪಿಸುವ ಎಲ್‌ಪಿಜಿ ಸಿಲಿಂಡರ್‌ಗಳಿಗೆ ವಿತರಣಾ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಇದನ್ನು ಎಚ್‌ಪಿಸಿಎಲ್ ಸ್ಪಷ್ಟಪಡಿಸಿದೆ.
  • ನೆಲ ಮಹಡಿ ಆಗಲಿ, ಅಪಾರ್ಟ್‌ಮೆಂಟ್‌ಗಳಾಗಲಿ.. ಗ್ರಾಹಕರ ಮನೆಯವರೆಗೆ ಗ್ಯಾಸ್​ ತಲುಪಿಸುವುದು ಗ್ಯಾಸ್​ ಸಿಬ್ಬಂದಿಯ ಕರ್ತವ್ಯವಾಗಿದೆ.
  • ವಿತರಣಾ ವ್ಯಕ್ತಿಯು ಹೆಚ್ಚುವರಿ ಶುಲ್ಕಗಳನ್ನು ಕೇಳಿದರೆ ಪಾವತಿಯನ್ನು ನಿರಾಕರಿಸುವ ಹಕ್ಕನ್ನು ಗ್ರಾಹಕರು ಹೊಂದಿರುತ್ತಾರೆ.
  • ಹೈದರಾಬಾದಿನ ಕರೀಂ ಅನ್ಸಾರಿ ಎಂಬ ವ್ಯಕ್ತಿ ಈ ವಿಷಯವಾಗಿ ಎಚ್‌ಪಿಸಿಎಲ್ ವಿರುದ್ಧ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು.
  • ಈ ಕುರಿತು ಪ್ರತಿಕ್ರಿಯಿಸಿರುವ ಎಚ್‌ಪಿಸಿಎಲ್, ಸಿಲಿಂಡರ್ ವಿತರಣೆಗೆ ಗ್ರಾಹಕರು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಓದಿ:ಎಲ್​ಪಿಜಿ ಸಿಲಿಂಡರ್​ ಬಗ್ಗೆ ನೀವು ತಿಳಿದಿರಲೇಬೇಕಾದ 10 ಸಂಗತಿಗಳಿವು - Facts About LPG

ABOUT THE AUTHOR

...view details