Meet Ai-Da:ಎಐ(ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಈಗಂತೂ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಪ್ರಭಾವ ಬೀರುತ್ತಿದೆ. ಇದೀಗ ಪೇಂಟಿಂಗ್ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ಎಐ ರೋಬೋಟ್ ಬಿಡಿಸಿರುವ ಪೇಂಟ್ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಬಿಕರಿಯಾಗಿದೆ.
ಹೌದು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ)ನ ಪಿತಾಮಹರಲ್ಲಿ ಒಬ್ಬರೆಂದು ಪರಿಗಣಿಸಲಾದ ಅಲನ್ ಟ್ಯೂರಿಂಗ್ ಅವರ ಭಾವಚಿತ್ರ ಇತ್ತೀಚಿಗೆ ನಡೆದ ಹರಾಜಿನಲ್ಲಿ ಮಿಲಿಯನ್ ಡಾಲರ್‌ಗಳಿಗೆ ಮಾರಾಟವಾಗಿದೆ. ಈ ಚಿತ್ರವನ್ನು ಪ್ರಪಂಚದ ಮೊದಲ ಹುಮನಾಯ್ಡ್ ರೋಬೋಟ್ ಆರ್ಟಿಸ್ಟ್ ಐ-ಡಾ ಬಿಡಿಸಿದೆ.
'ಎಐ ದೇವರು' ಎಂದೇ ಪ್ರಸಿದ್ಧರಾಗಿದ್ದ ಬ್ರಿಟಿಷ್ ಗಣಿತಜ್ಞರ ಚಿತ್ರ ಸೋಥೆಬಿಸ್ ಡಿಜಿಟಲ್ ಆರ್ಟ್ ಸೇಲ್‌ನಲ್ಲಿ 1,084,800 (ಸುಮಾರು 9.15 ಕೋಟಿ ರೂ.) ಡಾಲರ್ಗೆ ಬಿಕರಿಯಾಯಿತು. ಈ ಚಿತ್ರವು ಸಂಘಟಕರ ಆರಂಭಿಕ ಅಂದಾಜು ಮೊತ್ತವಾದ 180,000 ಡಾಲರ್ (ರೂ. 5 ಕೋಟಿ) ಅನ್ನು ಮೀರಿಸಿದೆ.
ಹರಾಜಿನಲ್ಲಿ ಎಐ ಗಾಡ್ ಎಂದೇ ಪ್ರಸಿದ್ಧಿ ಪಡೆದಿರುವ ಟ್ಯೂರಿಂಗ್ ಚಿತ್ರಕ್ಕೆ ಭಾರೀ ಬೇಡಿಕೆ ಕಂಡು ಬಂದಿತ್ತು. ಸುಮಾರು 27ಕ್ಕೂ ಹೆಚ್ಚು ಬಿಡ್ಗಳನ್ನು ಇದು ಸ್ವೀಕರಿಸಿತ್ತು. ಕೊನೆಯದಾಗಿ ಅಮೆರಿಕದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಇದನ್ನು ಖರೀದಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಏನಿದು ಐ-ಡಾ?: ಪ್ರಪಂಚದ ಮೊದಲ ಕಂಪ್ಯೂಟರ್ ಪ್ರೋಗ್ರಾಮರ್ ಎಂದೇ ಗುರುತಿಸಲ್ಪಟ್ಟ 19ನೇ ಶತಮಾನದ ಗಣಿತಶಾಸ್ತ್ರಜ್ಞ ಅದಾ ಲವ್ಲೇಸ್ ಅವರ ಹೆಸರನ್ನು ಐ-ಡಾ ಎನ್ನಲಾಗುತ್ತದೆ. ಯುಕೆಯ ಆಕ್ಸ್‌ಫರ್ಡ್ ಮತ್ತು ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯಗಳ ಎಐ ಸಂಶೋಧಕರೂ ಸೇರಿದಂತೆ 30 ಜನರ ತಂಡದೊಂದಿಗೆ ಮಾಜಿ ಗ್ಯಾಲರಿ ಮಾಲೀಕರು ಮತ್ತು ಆಧುನಿಕ ಕಲೆಯಲ್ಲಿ ಪರಿಣಿತರಾದ ಏಡನ್ ಮೆಲ್ಲರ್ 2019ರಲ್ಲಿ ಹುಮನಾಯ್ಡ್ ರೋಬೋಟ್ ಅಭಿವೃದ್ಧಿಪಡಿಸಿದ್ದಾರೆ.
ಇದರ ರೂಪವನ್ನು ಮಹಿಳೆಗೆ ಹೋಲಿಸಲಾಗಿದೆ. ರೋಬೋಟ್ ಕಂದು ಬಣ್ಣದ ಕೂದಲುಗಳನ್ನು ಹೊಂದಿದೆ. ಕಣ್ಣುಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ಎಐ ಅಲ್ಗಾರಿದಮ್‌ಗಳು ಮತ್ತು ತನ್ನ ರೊಬೊಟಿಕ್ ಕೈಗಳನ್ನು ಬಳಸಿಕೊಂಡು ಚಿತ್ರ ಬಿಡಿಸುತ್ತದೆ ಎಂದು ಹುಮನಾಯ್ಡ್‌ನ ಅಧಿಕೃತ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.
"ವಿಶ್ವಸಂಸ್ಥೆಯಲ್ಲಿ ಆಯೋಜಿಸಿದ ಎಐ ಸಮ್ಮೇಳನಕ್ಕಾಗಿ ಏನನ್ನಾದರೂ ಚಿತ್ರಿಸಲು ಹುಮನಾಯ್ಡ್ಗೆ ಸೂಚಿಸಿದ್ದೆ. ಐ-ಡಾ 1950ರ ದಶಕದಲ್ಲಿ ಎಐನ ಶಕ್ತಿಯನ್ನು ಊಹಿಸಲು ತಿಳಿದಿರುವ ಟ್ಯೂರಿಂಗ್ ಭಾವಚಿತ್ರವನ್ನು ಬಿಡಿಸುವ ಮೂಲಕ ರೋಬೋಟ್ ಪ್ರತಿಕ್ರಿಯಿಸಿತು" ಎಂದು ಐ-ಡಾ ಸೃಷ್ಟಿಕರ್ತ ಮೆಲ್ಲರ್ ಹೇಳಿದ್ದಾರೆ.
ಇದು ಚಿತ್ರ ಬಿಡಿಸುವುದು ಹೇಗೆ?:ಭಾವಚಿತ್ರ ನಿಜ ಸ್ವರೂಪಕ್ಕೆ ಬರುವಾಗ, ಐ-ಡಾ ಮೊದಲು ಟ್ಯೂರಿಂಗ್ ಅವರ ಫೋಟೋಗಳಲ್ಲಿ ಒಂದನ್ನು ವಿಶ್ಲೇಷಿಸಿತು. ಮುಖದ ವಿವಿಧ ಭಾಗಗಳ ಸುಮಾರು 15 ವಿವಿಧ ವರ್ಣಚಿತ್ರಗಳನ್ನು ಬಿಡಿಸಿತು. ಇದರಲ್ಲಿ ಮೂರು ಭಾವಚಿತ್ರಗಳು ಮತ್ತು ಟ್ಯೂರಿಂಗ್ ಬಳಸಿದ ಡೀಕ್ರಿಪ್ಶನ್ ಯಂತ್ರದ ಪೇಂಟಿಂಗ್ ಅನ್ನು ಸ್ಕ್ಯಾನ್ ಮಾಡಿ ಕಂಪ್ಯೂಟರ್‌ಗೆ ಅಪ್‌ಲೋಡ್ ಮಾಡಿದೆ. ಐ-ಡಾನ ಆಧಾರವಾಗಿರುವ ಭಾಷಾ ಮಾದರಿಯನ್ನು ಒಂದೇ ವರ್ಣಚಿತ್ರವನ್ನು ಒಟ್ಟುಗೂಡಿಸಲು ಬಳಸಲಾಯಿತು ಮತ್ತು 3-D ಟೆಕ್ಸ್ಚರ್ಡ್ ಪ್ರಿಂಟರ್ ಬಳಸಿ ಮುದ್ರಿಸಲಾಗಿದೆ.
ಇದನ್ನೂ ಓದಿ:ಸ್ಮಾರ್ಟ್ಫೋನ್ ಯುಗದಲ್ಲಿ ಮಕ್ಕಳ ಬಗ್ಗೆ ಆತಂಕ: ಸರ್ವೇಯಲ್ಲಿ ಪೋಷಕರು ಹೇಳಿದ್ದೇನು ಗೊತ್ತಾ?