Reliance Jio Updates Rs 949 Recharge Plan:ಜಿಯೋ ತನ್ನ 949 ರೂ. ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಅನ್ನು ಅಪ್ಡೇಟ್ ಮಾಡಿದೆ. ಇತ್ತೀಚಿನ ಪ್ಲಾನ್ 'JioHotstar'ಗೆ ಉಚಿತ ಸಬ್‌ಸ್ಕ್ರಿಪ್ಷನ್ ಒಳಗೊಂಡಿದೆ.
ಇತ್ತೀಚೆಗೆ ಎರಡು ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ಜಿಯೋಸಿನಿಮಾ ಮತ್ತು ಡಿಸ್ನಿ+ಹಾಟ್‌ಸ್ಟಾರ್ 'ಜಿಯೋಹಾಟ್‌ಸ್ಟಾರ್' ಎಂಬ ಒಂದೇ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗೆ ವಿಲೀನಗೊಂಡಿರುವುದು ಗೊತ್ತಿರುವ ಸಂಗತಿ. ಜಿಯೋಹಾಟ್‌ಸ್ಟಾರ್ ಈ ಎರಡು ಕಂಪನಿಗಳ ಕಟೆಂಟ್ ಲೈಬ್ರರಿ ಅನ್ನು ಕಂಬೈನ್ ಮಾಡುತ್ತದೆ. ಇದರರ್ಥ ಈಗ ನೀವು ಜಿಯೋಸಿನಿಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ನ ಎಲ್ಲಾ ವಿಷಯವನ್ನು ಒಂದೇ ಸ್ಥಳದಲ್ಲಿ ವೀಕ್ಷಿಸಬಹುದು.
ಇದು ವಿವಿಧ ಅಂತಾರಾಷ್ಟ್ರೀಯ ಸ್ಟುಡಿಯೋಗಳು ಮತ್ತು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ಕಂಟೆಂಟ್ ನೀಡುತ್ತದೆ. ಈ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಾಗಿ ಚಂದಾದಾರಿಕೆ ಯೋಜನೆಗಳು 149 ರೂ.ಯಿಂದ ಪ್ರಾರಂಭವಾಗುತ್ತವೆ. ಹೊಸ ಸೇವೆಯ ಚಂದಾದಾರಿಕೆ ಯೋಜನೆಗಳಲ್ಲಿ ಜಾಹೀರಾತು-ಬೆಂಬಲಿತ ಮತ್ತು ಜಾಹೀರಾತು-ಮುಕ್ತ ವಿಷಯಕ್ಕಾಗಿ ಪ್ರೀಮಿಯಂ ಯೋಜನೆಗಳು ಸೇರಿವೆ. ಚಂದಾದಾರಿಕೆ ಯೋಜನೆಗಳು 3 ತಿಂಗಳ ಮಾನ್ಯತೆಯೊಂದಿಗೆ ಮೂಲ ಯೋಜನೆಗೆ 149 ರೂ.ಯಿಂದ ಪ್ರಾರಂಭವಾಗುತ್ತವೆ ಮತ್ತು ಪ್ರೀಮಿಯಂ ಪ್ಯಾಕ್ ತಿಂಗಳಿಗೆ 299 ರೂ.ಯಿಂದ ಪ್ರಾರಂಭವಾಗುತ್ತದೆ.
ಬಳಕೆದಾರರು ಕಂಟೆಂಟ್ ವೀಕ್ಷಿಸಲು ಮಾಸಿಕ ಮತ್ತು ವಾರ್ಷಿಕ ಚಂದಾದಾರಿಕೆ ಯೋಜನೆಗಳನ್ನು ಹೊಂದಿದ್ದರೂ ಜಿಯೋ ಈಗ ತನ್ನ ನವೀಕರಿಸಿದ 949 ರೂ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯ ಮೂಲಕ 'ಜಿಯೋಹಾಟ್‌ಸ್ಟಾರ್' ಜಾಹೀರಾತು-ಬೆಂಬಲಿತ ಮೂಲ ಯೋಜನೆಗೆ ಉಚಿತ ಪ್ರವೇಶವನ್ನು ನೀಡುತ್ತದೆ. ಜಿಯೋಸಿನಿಮಾ ಮತ್ತು ಡಿಸ್ನಿ+ಹಾಟ್‌ಸ್ಟಾರ್‌ನ ಪ್ರಸ್ತುತ ಚಂದಾದಾರರು ಆಟೋಮೆಟಿಕ್ ಆಗಿ 'ಜಿಯೋಹಾಟ್‌ಸ್ಟಾರ್'ಗೆ ಬದಲಾಗುತ್ತಾರೆ. ಆದರೂ ಈ ಫ್ರೀ ಎಂಟ್ರಿ 'ಜಿಯೋಹಾಟ್‌ಸ್ಟಾರ್' ಬಳಕೆದಾರರ ನೆಲೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಕಂಪನಿ ಆಶಿಸಿದೆ.
ಜಿಯೋ 949 ರೂ ರೀಚಾರ್ಜ್ ಯೋಜನೆ:ರಿಲಯನ್ಸ್ ಜಿಯೋ 949 ರೂ ರೀಚಾರ್ಜ್ ಯೋಜನೆಯು ಅನ್ಲಿಮಿಟೆಡ್ ವಾಯ್ಸ್ ಕಾಲ್ಸ್, ದಿನಕ್ಕೆ 100 SMS, ದಿನಕ್ಕೆ 2GB ಹೈ-ಸ್ಪೀಡ್ 4G ಡೇಟಾ ಮತ್ತು ಅನ್ಲಿಮಿಟೆಡ್ 5G ಡೇಟಾ ನೀಡುತ್ತದೆ. ಮಾನ್ಯತೆ 84 ದಿನಗಳು. ಆದರೂ ಇತ್ತೀಚಿನ ಅಪ್ಡೇಟ್ ನಂತರ ಇವುಗಳ ಜೊತೆಗೆ ಈ ರೀಚಾರ್ಜ್ ಪ್ಲಾನ್ ಈಗ 149 ರೂ ಮೌಲ್ಯದ 'ಜಿಯೋಹಾಟ್‌ಸ್ಟಾರ್' ಆ್ಯಡ್-ಸಪೋರ್ಟ್ಡ್ ಮೂಲ ಯೋಜನೆಗೆ ಫ್ರೀ ಎಂಟ್ರಿ ಒಳಗೊಂಡಿದೆ.
ಈ ಪ್ಲಾನ್ ಅಡಿಯಲ್ಲಿ ಬಳಕೆದಾರರು 3 ತಿಂಗಳ ಕಾಲ ಲೈವ್ ಸ್ಪೋರ್ಟ್ಸ್, ಡಿಸ್ನಿ ಒರಿಜಿನಲ್ಸ್ ಮತ್ತು ಇತ್ತೀಚಿನ ಚಲನಚಿತ್ರಗಳನ್ನು ಉಚಿತವಾಗಿ ವೀಕ್ಷಿಸಬಹುದು. ಆದರೂ ಈ ಯೋಜನೆಯು ನೀಡುವ ಈ ವೈಶಿಷ್ಟ್ಯವು ಮೊಬೈಲ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಗಮನಿಸಬೇಕು. ಇದರರ್ಥ ವಿಷಯವನ್ನು 720 ಪಿಕ್ಸೆಲ್‌ಗಳ ರೆಸಲ್ಯೂಶನ್ವರೆಗೆ ಮಾತ್ರ ವೀಕ್ಷಿಸಬಹುದು.
ಉತ್ತಮ ಸ್ಟ್ರೀಮಿಂಗ್ ಗುಣಮಟ್ಟ ಮತ್ತು ಹೆಚ್ಚುವರಿ ವೈಶಿಷ್ಟ್ಯಗಳಿಗಾಗಿ ಜಿಯೋಹಾಟ್‌ಸ್ಟಾರ್ ಬಳಕೆದಾರರು ಉನ್ನತ ಮಟ್ಟದ ಯೋಜನೆಗಳಿಗೆ ಅಪ್‌ಗ್ರೇಡ್ ಮಾಡಬಹುದು. ಈ ಹೊಸ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ 3 ತಿಂಗಳವರೆಗೆ ರೂ. 299 ಬೆಲೆಯ ಅಗ್ಗದ ಆ್ಯಡ್-ಸಪೋರ್ಟ್ಡ್ ಸೂಪರ್ ಪ್ಲಾನ್ ಅನ್ನು ಸಹ ನೀಡುತ್ತದೆ. ಈ ಸಬ್ಸ್ಕ್ರಿಪ್ಶನ್ ಬಳಕೆದಾರರಿಗೆ ಮೊಬೈಲ್, ಟ್ಯಾಬ್ಲೆಟ್/ಲ್ಯಾಪ್‌ಟಾಪ್/ಪಿಸಿ ಮತ್ತು ಸ್ಮಾರ್ಟ್ ಟಿವಿಯಲ್ಲಿ 1080 ಪಿಕ್ಸೆಲ್‌ಗಳಲ್ಲಿ ಏಕಕಾಲದಲ್ಲಿ ಗರಿಷ್ಠ 2 ಸಾಧನಗಳಲ್ಲಿ ಸ್ಟ್ರೀಮ್ ಮಾಡಲು ಅನುಮತಿಸುತ್ತದೆ.
ಈ ಸ್ಟ್ರೀಮಿಂಗ್ ಸೇವೆಯ ಪ್ರೀಮಿಯಂ ಆ್ಯಡ್-ಫ್ರೀ ಪ್ಲಾನ್ಸ್ ರೂ.299 ರಿಂದ ಪ್ರಾರಂಭವಾಗುತ್ತವೆ. ಈ ಮೂಲ ಯೋಜನೆಯು ಮೊಬೈಲ್, ಪಿಸಿ/ಲ್ಯಾಪ್‌ಟಾಪ್ ಮತ್ತು ಟಿವಿ ಸೇರಿದಂತೆ 4 ಸಾಧನಗಳಲ್ಲಿ 'ಜಿಯೋಹಾಟ್‌ಸ್ಟಾರ್'ಗೆ ಒಂದು ತಿಂಗಳ ಪ್ರವೇಶವನ್ನು ಒದಗಿಸುತ್ತದೆ. ಇದಲ್ಲದೆ 499 ರೂ.ಗಳ ಮತ್ತೊಂದು ಕಡಿಮೆ-ವೆಚ್ಚದ ಪ್ರೀಮಿಯಂ ಚಂದಾದಾರಿಕೆ ಯೋಜನೆ ಇದ್ದು, ಇದು 3 ತಿಂಗಳವರೆಗೆ 4K ರೆಸಲ್ಯೂಶನ್‌ನಲ್ಲಿ ಜಾಹೀರಾತು-ಮುಕ್ತ ಸ್ಟ್ರೀಮಿಂಗ್ ಅನುಭವ ನೀಡುತ್ತದೆ.
ಜಿಯೋ ಹಾಟ್‌ಸ್ಟಾರ್ ಸಬ್ಸ್ಕ್ರಿಪ್ಶನ್ ಪ್ಲಾನ್ಗಳ ವಿವರ:
ಯೋಜನೆಯ ಹೆಸರು
ಬೆಲೆ (ರೂಪಾಯಿಗಳಲ್ಲಿ)
ವ್ಯಾಲಿಡಿಟಿ
ಎಷ್ಟು ಸಾಧನಗಳಲ್ಲಿ ನೋಡಬಹುದು?
ಜಾಹೀರಾತುಗಳೊಂದಿಗೆ ಸೇವೆಗಳು
ಮೊಬೈಲ್
₹149
3 ತಿಂಗಳು
1 ಸಾಧನ (ಮೊಬೈಲ್‌ನಲ್ಲಿ ಮಾತ್ರ)
ಮೊಬೈಲ್
₹499
1 ವರ್ಷ
1 ಸಾಧನ (ಮೊಬೈಲ್‌ನಲ್ಲಿ ಮಾತ್ರ)
ಸೂಪರ್
₹299
3 ತಿಂಗಳು
2 ಸಾಧನಗಳು (ಏಕಕಾಲದಲ್ಲಿ ಮೊಬೈಲ್, ಪಿಸಿ/ಲ್ಯಾಪ್‌ಟಾಪ್ ಮತ್ತು ಟಿವಿ)
ಸೂಪರ್
₹899
1 ವರ್ಷ
2 ಸಾಧನಗಳು (ಏಕಕಾಲದಲ್ಲಿ ಮೊಬೈಲ್, ಪಿಸಿ/ಲ್ಯಾಪ್‌ಟಾಪ್ ಮತ್ತು ಟಿವಿ)
ಜಾಹೀರಾತು ಇಲ್ಲದ ಯೋಜನೆಗಳು:
ಪ್ರೀಮಿಯಂ
₹299
1 ತಿಂಗಳು
4 ಸಾಧನಗಳು (ಏಕಕಾಲದಲ್ಲಿ ಮೊಬೈಲ್, ಪಿಸಿ/ಲ್ಯಾಪ್‌ಟಾಪ್ ಮತ್ತು ಟಿವಿ)
ಪ್ರೀಮಿಯಂ
₹499
3 ತಿಂಗಳು
4 ಸಾಧನಗಳು (ಏಕಕಾಲದಲ್ಲಿ ಮೊಬೈಲ್, ಪಿಸಿ/ಲ್ಯಾಪ್‌ಟಾಪ್ ಮತ್ತು ಟಿವಿ)
ಪ್ರೀಮಿಯಂ
₹1,499
1 ವರ್ಷ
4 ಸಾಧನಗಳು (ಏಕಕಾಲದಲ್ಲಿ ಮೊಬೈಲ್, ಪಿಸಿ/ಲ್ಯಾಪ್‌ಟಾಪ್ ಮತ್ತು ಟಿವಿ)