Paytm Goes International UPI Payments:ಜನಪ್ರಿಯ ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್‌ಗಳಲ್ಲೊಂದಾದ ಪೇಟಿಎಂ ಬಳಕೆದಾರರು ಈಗ ಭಾರತದ ಹೊರಗಿನ ಆಯ್ದ ಸ್ಥಳಗಳಿಂದ ಯುಪಿಐ ಪಾವತಿಗಳನ್ನು ಮಾಡಬಹುದು ಎಂದು One97 ಕಮ್ಯುನಿಕೇಷನ್ಸ್ ಲಿಮಿಟೆಡ್ ಘೋಷಿಸಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಸಿಂಗಾಪುರ್, ಫ್ರಾನ್ಸ್, ಮಾರಿಷಸ್, ಭೂತಾನ್ ಮತ್ತು ನೇಪಾಳಕ್ಕೆ ಹೋಗುವ ಭಾರತೀಯ ಪ್ರಯಾಣಿಕರು ಪೇಟಿಎಂ ಮೂಲಕ ಶಾಪಿಂಗ್, ಊಟ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಹಣ ಪಾವತಿಸಲು ಸಾಧ್ಯವಾಗುತ್ತದೆ ಎಂದು ಪೇಟಿಎಂ ಹೇಳಿದೆ. ಈ ಕಾರ್ಯವನ್ನು ಸಕ್ರಿಯಗೊಳಿಸುವುದಕ್ಕೆ ಬಳಕೆದಾರರ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಲು "ಒನ್-ಟೈಂ ಆ್ಯಕ್ಟಿವೇಶನ್" ಮಾಡುವ ಅಗತ್ಯವಿದೆ. ನೀವು ಅಂತಾರಾಷ್ಟ್ರೀಯ ಯುಪಿಐ ಪಾವತಿಗಳನ್ನು ಸೆಟ್ ಮಾಡಲು ಮರೆತಿದ್ದರೆ, ಈ ಫೀಚರ್ ಅನ್ನು ಆ್ಯಕ್ಟಿವೇಶನ್ ಮಾಡಲು ಆ್ಯಪ್ ಆಟೋಮೆಟಿಕ್ ಆಗಿ ಬಳಕೆದಾರರನ್ನು ಪ್ರೇರೇಪಿಸುತ್ತದೆ.
ಅಷ್ಟೇ ಅಲ್ಲ, ಈ ಫೀಚರ್ ಅನ್ನು ಮ್ಯಾನುವಲ್ ಆಗಿ ಆ್ಯಕ್ಟಿವೆಟ್ ಮಾಡಲು ಇಚ್ಛಿಸಿದ್ರೆ, ಸರ್ಚ್ ವಿಭಾಗಕ್ಕೆ ಹೋಗಿ ‘International UPI’ ಎಂದು ಟೈಪ್ ಮಾಡಿ. ಆಗ ಸರ್ವೀಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಕಾಣಿಸುವ ಸ್ಕ್ರೀನ್ ಮೇಲೆ, ಭಾರತದ ಹೊರಗೆ ಪಾವತಿಗಳನ್ನು ಮಾಡಲು ನಿಮ್ಮ ಯಪಿಐ ಐಡಿಯನ್ನು ಕನೆಕ್ಟ್ ಮಾಡಿ ಎಂದು ಪೇಟಿಎಂ ನಿಮಗೆ ಸೂಚಿಸುತ್ತದೆ.