One Crore fraud numbers disconnected:ಫ್ರಾಡ್ ಮೊಬೈಲ್ ಕನೆಕ್ಷನ್ಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಸಂಚಾರ ಸಾಥಿ ನೆರವಿನಿಂದ 1 ಕೋಟಿಗೂ ಹೆಚ್ಚು ಮೊಬೈಲ್ ಸಂಪರ್ಕಗಳನ್ನು ಬಂದ್ ಮಾಡಲಾಗಿದೆ ಎಂದು ಸಂವಹನ ಸಚಿವಾಲಯ ತಿಳಿಸಿದೆ. ದೂರಸಂಪರ್ಕ ಸೇವೆಗಳನ್ನು ಸುಧಾರಿಸಲು TRAI ಮತ್ತು DoT ಕ್ರಮಗಳನ್ನು ಕೈಗೊಂಡಿವೆ. ಸಂಚಾರ್ ಸಾಥಿ ಪೋರ್ಟಲ್ ಸೈಬರ್ ವಂಚನೆಯ ವಿರುದ್ಧ ಹೋರಾಡಲು ರಚಿಸಲಾದ ನಾಗರಿಕ-ಕೇಂದ್ರಿತ ವೆಬ್ ಪೋರ್ಟಲ್ ಆಗಿದ್ದು, ನಾಗರಿಕರಿಗೆ ಅನುಮಾನಾಸ್ಪದ ಕರೆಗಳು ಮತ್ತು ಸಂದೇಶಗಳನ್ನು ವರದಿ ಮಾಡಲು ಅನುವು ಮಾಡಿಕೊಡುತ್ತದೆ.
"ಸಂಚಾರ್ ಸಾಥಿ ಮೂಲಕ 1 ಕೋಟಿಗೂ ಅಧಿಕ ಫ್ರಾಡ್ ನಂಬರ್ಗಳ ಸಂಖ್ಯೆಗಳ ಸಂಪರ್ಕ ಕಡಿತಗೊಳಿಸಲಾಗಿದೆ" ಎಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ DoT ಪೋಸ್ಟ್ ಮಾಡಿದೆ. ಸ್ಪ್ಯಾಮ್ ಕರೆಗಳ ಬೆದರಿಕೆಯನ್ನು ತಡೆಯುವ ಪ್ರಯತ್ನದ ಸಂಬಂಧ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಸಹ ಫ್ರಾಡ್ ಸಂಖ್ಯೆಗಳ ಸಂಪರ್ಕ ಕಡಿತಗೊಳಿಸಲು ಮತ್ತು ಯೂನಿಟ್ಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಟೆಲಿಕಾಂ ಆಪರೇಟರ್‌ಗಳಿಗೆ ನಿರ್ದೇಶನ ನೀಡಿದೆ.
ದೂರಸಂಪರ್ಕ ಸೇವೆಯನ್ನು ಸುಧಾರಿಸಲು TRAI ಮತ್ತು DoT ಈ ನಿರ್ಧಾರವನ್ನು ತೆಗೆದುಕೊಂಡಿದೆ. ಸಚಿವಾಲಯವು ನೆಟ್‌ವರ್ಕ್ ಲಭ್ಯತೆ, ಕರೆ ಡ್ರಾಪ್ ದರಗಳು ಮತ್ತು ಪ್ಯಾಕೆಟ್ ಡ್ರಾಪ್ ದರಗಳನ್ನು ಹೈಲೈಟ್ ಮಾಡಿದೆ. ಅವುಗಳನ್ನು ಸುಧಾರಿಸಲು ಸಾಧ್ಯ ಇರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇಲ್ಲಿಯವರೆಗೆ 1 ಕೋಟಿಗೂ ಹೆಚ್ಚು ಮೊಬೈಲ್ ಸಂಪರ್ಕಗಳನ್ನು ಮುಚ್ಚಲಾಗಿದೆ ಎಂದು ಸಚಿವಾಲಯ ಹೇಳಿದೆ.
ರೋಬೋ ಕರೆಗಳು ಮತ್ತು ಪ್ರಿ - ರೆಕಾರ್ಡ್ ಕರೆಗಳು ಸಹ ಇದರಲ್ಲಿ ಸೇರಿದ್ದಾವೆ. ಇತ್ತೀಚಿನ ದಿನಗಳಲ್ಲಿ ಸುಮಾರು ಮೂರೂವರೆ ಲಕ್ಷ ಸಂಖ್ಯೆಗಳು ಸ್ವಿಚ್ಡ್ ಆಫ್ ಆಗಿವೆ. ಇದರಲ್ಲಿ 50 ಯೂನಿಟ್ಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಸುಮಾರು 3.5 ಲಕ್ಷ ಪರಿಶೀಲಿಸದ SMS ಹೆಡರ್‌ಗಳು ಮತ್ತು 12 ಲಕ್ಷ ಕಂಟೆಂಟ್ ಟೆಂಪ್ಲೇಟ್‌ಗಳನ್ನು ನಿರ್ಬಂಧಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.