ಕರ್ನಾಟಕ

karnataka

ETV Bharat / technology

ಮತ್ತಷ್ಟು ಸ್ಮಾರ್ಟ್​ ವೈಶಿಷ್ಟ್ಯಗಳೊಂದಿಗೆ ಮೆಟಾ ಎಐ ಈಗ ಹಿಂದಿಯಲ್ಲೂ ಲಭ್ಯ - Meta AI

ಮೆಟಾ ಎಐ ಈಗ ಹಿಂದಿಯಲ್ಲೂ ಲಭ್ಯವಾಗಲಿದೆ ಎಂದು ಮೆಟಾ ತಿಳಿಸಿದೆ.

By ETV Bharat Karnataka Team

Published : Jul 24, 2024, 3:57 PM IST

ಈಗ ಮೆಟಾ ಎಐ ಹಿಂದಿಯಲ್ಲೂ ಲಭ್ಯ
ಈಗ ಮೆಟಾ ಎಐ ಹಿಂದಿಯಲ್ಲೂ ಲಭ್ಯ (IANS)

ನವದೆಹಲಿ: Meta AI ಆರ್ಟಿಫಿಶಿಯಲ್ ಇಂಟೆಲಿಜೆಂಟ್​ ಅಸಿಸ್ಟಂಟ್​ ಮೆಟಾ ಎಐ ಈಗ ಹಿಂದಿ ಸೇರಿದಂತೆ ಏಳು ಹೊಸ ಭಾಷೆಗಳಲ್ಲಿ ಲಭ್ಯವಿದೆ ಮತ್ತು ಹೆಚ್ಚು ಸೃಜನಶೀಲ ಮತ್ತು ಸ್ಮಾರ್ಟ್ ಆಗಿದೆ ಎಂದು ಟೆಕ್ ದೈತ್ಯ ಮೆಟಾ ಬುಧವಾರ ಘೋಷಿಸಿದೆ. ಹಿಂದಿ ಮತ್ತು ಹಿಂದಿ - ರೋಮನೈಸ್ಡ್ ಲಿಪಿಯಲ್ಲದೇ, ಮೆಟಾ ಎಐ ಈಗ ಫ್ರೆಂಚ್, ಜರ್ಮನ್, ಇಟಾಲಿಯನ್, ಪೋರ್ಚುಗೀಸ್ ಮತ್ತು ಸ್ಪ್ಯಾನಿಷ್​ನಂಥ ಇತರ ಭಾಷೆಗಳಲ್ಲಿಯೂ ಲಭ್ಯವಿದೆ.

ಬಳಕೆದಾರರು ವಾಟ್ಸ್​ಆ್ಯಪ್​, ಇನ್ ಸ್ಟಾಗ್ರಾಮ್, ಮೆಸೆಂಜರ್ ಮತ್ತು ಫೇಸ್​ಬುಕ್​ನಲ್ಲಿ ಮೆಟಾ ಎಐನೊಂದಿಗೆ ಈ ಹೊಸ ಭಾಷೆಗಳಲ್ಲಿ ಸಂವಹನ ನಡೆಸಬಹುದು. ಮೆಟಾ ಎಐ ಶೀಘ್ರದಲ್ಲೇ ಇನ್ನೂ ಹೆಚ್ಚಿನ ಭಾಷೆಗಳನ್ನು ಸೇರಿಸುವುದಾಗಿ ಕಂಪನಿ ಹೇಳಿದೆ.

ಮಾರ್ಕ್ ಜುಕರ್ ಬರ್ಗ್ ನೇತೃತ್ವದ ಕಂಪನಿಯಾಗಿರುವ ಮೆಟಾ, ಬಳಕೆದಾರರು ತಮ್ಮ ಆಲೋಚನೆಗಳು ಮತ್ತು ಕಲ್ಪನೆಯನ್ನು ಚಿತ್ರಗಳಾಗಿ ಪರಿವರ್ತಿಸಲು ಹೊಸ ಸೃಜನಶೀಲ ಸಾಧನಗಳನ್ನು ಕೂಡ ಪರಿಚಯಿಸಿದೆ. ಇದಲ್ಲದೇ, ಮೊದಲ ಬಾರಿಗೆ ಇದನ್ನು ಲ್ಯಾಟಿನ್ ಅಮೆರಿಕದ ಏಳು ಹೊಸ ದೇಶಗಳಲ್ಲಿ ಜಾರಿಗೊಳಿಸಲಾಗಿದೆ.

"ನಾವು ನಮ್ಮ ಅಪ್ಲಿಕೇಶನ್​​ಗಳು ಮತ್ತು ಸಾಧನಗಳಲ್ಲಿನ ಮೆಟಾ ಎಐ ಅಸಿಸ್ಟಂಟ್​ನ ಲಭ್ಯತೆಯನ್ನು ವಿಸ್ತರಿಸುತ್ತಿದ್ದೇವೆ ಮತ್ತು ಉತ್ತರಗಳು, ಆಲೋಚನೆಗಳು ಮತ್ತು ಸ್ಫೂರ್ತಿಯೊಂದಿಗೆ ನಿಮಗೆ ಸಹಾಯ ಮಾಡಲು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದ್ದೇವೆ. ಮೆಟಾ ಎಐ ಈಗ 22 ದೇಶಗಳಲ್ಲಿ ಲಭ್ಯವಿದೆ. ಇಂದು ಹೊಸದಾಗಿ ಅರ್ಜೆಂಟೀನಾ, ಚಿಲಿ, ಕೊಲಂಬಿಯಾ, ಈಕ್ವೆಡಾರ್, ಮೆಕ್ಸಿಕೊ, ಪೆರು ಮತ್ತು ಕ್ಯಾಮರೂನ್​ ಈ ದೇಶಗಳಲ್ಲಿ ಮೆಟಾ ಎಐ ಲಭ್ಯವಾಗುತ್ತಿದೆ" ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ಮೆಟಾ 405 ಬಿ ನಿಯತಾಂಕಗಳೊಂದಿಗೆ ಲಾಮಾ 3.1 (Llama 3.1) ಎಐ ಮಾದರಿ ಅನಾವರಣಗೊಳಿಸಿತು. ಇದು ಜಗತ್ತಿನ ಅತಿದೊಡ್ಡ ಮತ್ತು ಅತ್ಯಧಿಕ ಸಾಮರ್ಥ್ಯದ ಓಪನ್ - ಸೋರ್ಸ್ ಎಐ ಮಾದರಿಯಾಗಿದೆ. "ಲಾಮಾ 405 ಬಿ ಯ ಸುಧಾರಿತ ತಾರ್ಕಿಕ ಸಾಮರ್ಥ್ಯಗಳು ಮೆಟಾ ಎಐ ನಿಮ್ಮ ಹೆಚ್ಚು ಸಂಕೀರ್ಣ ಪ್ರಶ್ನೆಗಳನ್ನು ಅರ್ಥಮಾಡಿಕೊಂಡು ಉತ್ತರಿಸುವ ಸಾಮರ್ಥ್ಯ ಹೊಂದಿದೆ. ವಿಶೇಷವಾಗಿ ಗಣಿತ ಮತ್ತು ಕೋಡಿಂಗ್ ವಿಷಯಗಳಲ್ಲಿ ಇದರ ಸಾಮರ್ಥ್ಯ ಅತ್ಯಧಿಕವಾಗಿದೆ" ಎಂದು ಕಂಪನಿ ಹೇಳಿದೆ.

ಹೊಸ ಎಐ ಮಾಡೆಲ್, ನಿಮ್ಮ ಗಣಿತದ ಹೋಂ ವರ್ಕ್ ಮಾಡಲು ಸಹಾಯ ಮಾಡಬಹುದು, ಡೀ ಬಗ್ಗಿಂಗ್ ಬೆಂಬಲ ಮತ್ತು ಆಪ್ಟಿಮೈಸೇಶನ್ ಸಲಹೆಗಳೊಂದಿಗೆ ಕೋಡ್ ಅನ್ನು ವೇಗವಾಗಿ ಬರೆಯಬಹುದು ಮತ್ತು ತಜ್ಞರ ಸೂಚನೆಯೊಂದಿಗೆ ಸಂಕೀರ್ಣ ತಾಂತ್ರಿಕ ಮತ್ತು ವೈಜ್ಞಾನಿಕ ಪರಿಕಲ್ಪನೆಗಳನ್ನು ಕರಗತ ಮಾಡಿಕೊಳ್ಳಬಹುದು" ಎಂದು ಅದು ಹೇಳಿದೆ. ಮೆಟಾ ಎಐ ಮುಂದಿನ ತಿಂಗಳಿನಿಂದ ಅಮೆರಿಕ ಮತ್ತು ಕೆನಡಾದ ಮೆಟಾ ಕ್ವೆಸ್ಟ್ ನಲ್ಲಿ ಪ್ರಾಯೋಗಿಕ ಮೋಡ್ ನಲ್ಲಿ "ರೇ-ಬಾನ್ ಮೆಟಾ ಸ್ಮಾರ್ಟ್ ಕನ್ನಡಕಗಳಲ್ಲಿ" ಲಭ್ಯವಿರುತ್ತದೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ : ಕೀಟ ನಿಯಂತ್ರಣ, ಸ್ವಚ್ಛತೆ ಕಾಪಾಡುವ ಮೂಲಕ ಚಂಡಿಪುರ ವೈರಸ್​ ನಿಯಂತ್ರಣ ಸಾಧ್ಯ: ತಜ್ಞರ ಸಲಹೆ - Chandipura virus

ABOUT THE AUTHOR

...view details