Nothing Phone 3a Series Launch:ನಥಿಂಗ್ ಫೋನ್ 3ಎ ಸೀರಿಸ್ ಮಾರ್ಚ್ 4ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ ಲೋಕಾರ್ಪಣೆಗೊಳ್ಳಲಿದೆ. ಕಂಪನಿಯು ಈ ಸೀರಿಸ್ನಲ್ಲಿ 'ನಥಿಂಗ್ ಫೋನ್ 3ಎ' ಮತ್ತು 'ನಥಿಂಗ್ ಫೋನ್ 3ಎ ಪ್ರೊ' ಎಂಬ ಎರಡು ಫೋನ್‌ಗಳನ್ನು ಪರಿಚಯಿಸಬಹುದು.
ಕಂಪನಿ ಕೆಲವು ವಾರಗಳ ಹಿಂದೆ ಈ 'ನಥಿಂಗ್ ಫೋನ್ 3ಎ' ಸೀರಿಸ್ ಬಿಡುಗಡೆಯನ್ನು ಘೋಷಿಸಿತ್ತು. ಈ ವೇಳೆ ತನ್ನ ಕ್ಯಾಮೆರಾ ಡಿಸೈನ್ ಬಹಿರಂಗಪಡಿಸಿತ್ತು. ಇದೀಗ ಮುಂಬರುವ ಫೋನ್ ಸೀರಿಸ್ ಡಿಸೈನ್ ಅನ್ನು ಅಧಿಕೃತವಾಗಿ ಬಹಿರಂಗಪಡಿಸಿದೆ.
ಫೋನ್ 3ಎ ಸೀರಿಸ್ ಟೀಸರ್: ನಥಿಂಗ್ ತನ್ನ ಹೊಸ ಸೀರಿಸ್ನ ಟೀಸರ್ ಅನ್ನು ಅದರ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಈ ಪೋಸ್ಟ್ ಫೋನಿನ ರಿಯರ್ ಡಿಸೈನ್ ಅನ್ನು ಬಹಿರಂಗಪಡಿಸುತ್ತದೆ. ಫೋನ್‌ನ ಹಿಂಭಾಗದ ಮಧ್ಯದಲ್ಲಿ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಕಾಣಬಹುದು. ನಥಿಂಗ್ ಹಳೆಯ ಮಾದರಿಯ ಫೋನ್‌ಗಳಲ್ಲಿರುವಂತೆ ಮೂರು ಗ್ಲಿಫ್ ಎಲ್‌ಇಡಿಗಳೊಂದಿಗೆ ಬರುತ್ತಿದೆ.
ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಮೂರು ಕ್ಯಾಮೆರಾ ಸೆನ್ಸರ್‌ಗಳಿವೆ. ಇದು ಪೆರಿಸ್ಕೋಪ್ ಲೆನ್ಸ್ ಹೊಂದಿರುವ ಕ್ಯಾಮೆರಾ ಸೆನ್ಸಾರ್ ಜೊತೆ ಬರುತ್ತಿದೆ. ಫೋನ್‌ನ ಹಿಂಭಾಗದಲ್ಲಿ LED ಫ್ಲ್ಯಾಷ್ ಯುನಿಟ್ ಇದೆ. ಇವುಗಳ ಜೊತೆಗೆ ಈ ಫೋನಿನ ಬಲಭಾಗದಲ್ಲಿ ವಾಲ್ಯೂಮ್ ರಾಕರ್ ಮತ್ತು ಪವರ್ ಬಟನ್ ಕಾಣಬಹುದು. ಕಂಪನಿ ತನ್ನ ಅಧಿಕೃತ ವಿಡಿಯೋವೊಂದರಲ್ಲಿ, 'ನಥಿಂಗ್ ಫೋನ್ 3ಎ' ಸೀರಿಸ್ನ ಗ್ಲಾಸ್ನ ಬ್ಯಾಕ್ ಪ್ಯಾನೆಲ್ ಜೊತೆ ಬರಲಿದೆ ಎಂದು ದೃಢಪಡಿಸಿದೆ.