ಕರ್ನಾಟಕ

karnataka

ಆದಷ್ಟು ಬೇಗ ಭಾರತದ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಹೊಸ ಕಿಯಾ ಕಾರ್ನಿವಲ್, ಬುಕ್ಕಿಂಗ್​ ಆರಂಭ, ಬೆಲೆ ಎಷ್ಟು!? - New Kia Carnival Booking Starts

By ETV Bharat Karnataka Team

Published : Sep 14, 2024, 2:02 PM IST

New Kia Carnival booking starts: ಹೊಸ ಕಿಯಾ ಕಾರ್ನಿವಲ್ ಅಕ್ಟೋಬರ್ 3 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಗೆ ಮುಂಚಿತವಾಗಿ ಕಂಪನಿಯು ಹೊಸ ಕಾರ್ನಿವಲ್ MPV ಗಾಗಿ ಬುಕಿಂಗ್ ಪ್ರಾರಂಭ ದಿನಾಂಕವನ್ನು ಪ್ರಕಟಿಸಿದೆ. ಅದರಂತೆ, ಈ ಕಾರನ್ನು ಸೆಪ್ಟೆಂಬರ್ 16 ರಿಂದ ಬುಕ್ ಮಾಡಬಹುದು. ಹೊಸ ಕಿಯಾ ಕಾರ್ನಿವಲ್ ಯಾವ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ನೋಡೋಣ ಬನ್ನಿ..

NEW KIA CARNIVAL BOOKING STARTS  KIA CARNIVAL FEATURES  KIA CARNIVAL BOOKING
ಹೊಸ ಕಿಯಾ ಕಾರ್ನಿವಲ್ (Kia)

New Kia Carnival booking starts: ಕಿಯಾ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಕಾರ್ನಿವಲ್ ಅನ್ನು ಪ್ರಾರಂಭಿಸಲಿದೆ. ಈ ಕಾರು ಅಕ್ಟೋಬರ್ 3 ರಂದು ಭಾರತೀಯ ಗ್ರಾಹಕರಿಗೆ ಲಭ್ಯವಾಗಲಿದೆ. ಆದರೆ, ಅದಕ್ಕೂ ಮುನ್ನ ಕಂಪನಿಯಿಂದ ಕಾರನ್ನು ಬುಕ್ ಮಾಡಲಾಗುತ್ತಿದೆ. ಹೊಸ ಕಾರ್ನಿವಲ್ MPV ಗಾಗಿ ಬುಕಿಂಗ್ ಪ್ರಾರಂಭ ದಿನಾಂಕವನ್ನು ಸಹ ಘೋಷಿಸಲಾಗಿದೆ. ಅದರಂತೆ ಸೆಪ್ಟೆಂಬರ್ 16 ರಿಂದ ಕಿಯಾ ಕಾರ್ನಿವಲ್ ಬುಕ್ಕಿಂಗ್ ಆರಂಭವಾಗಲಿದೆ. ಹೊಸ ಕಿಯಾ ಕಾರ್ನಿವಲ್ ಭಾರತದಲ್ಲಿ ಯಾವ ವೈಶಿಷ್ಟ್ಯಗಳನ್ನು ಪ್ರಾರಂಭಿಸಲಿದೆ, ಅದರ ವಿಶೇಷತೆ ಏನುಮ ಅನ್ನೋದರ ಮಾಹಿತಿ ಇಲ್ಲಿದೆ..

ಹೊಸ ಕಿಯಾ ಕಾರ್ನಿವಲ್ ಬುಕಿಂಗ್: ಕಂಪನಿಯಿಂದ ಹೊಸ ಕಿಯಾ ಕಾರ್ನಿವಲ್‌ಗಾಗಿ ಬುಕಿಂಗ್​ ಸೆಪ್ಟೆಂಬರ್ 16 ರಿಂದ ಪ್ರಾರಂಭವಾಗಲಿದೆ. ಇದಕ್ಕಾಗಿ ಕಂಪನಿಯು ಎರಡು ಲಕ್ಷಗಳ ಬುಕಿಂಗ್ ಬೆಲೆಯನ್ನು ನಿಗದಿಪಡಿಸಿದೆ.

ಕಿಯಾ ಕಾರ್ನಿವಲ್ ವೈಶಿಷ್ಟ್ಯಗಳು:ಹೊಸ ಕಾರ್ನಿವಲ್ ಅನ್ನು ಪ್ರಾರಂಭಿಸುವ ಮೊದಲು, ಕಂಪನಿಯು ಟೀಸರ್ ಅನ್ನು ಸಹ ಬಿಡುಗಡೆ ಮಾಡಿದೆ. ಇದರಲ್ಲಿ ಕಾರಿನ ಕೆಲವು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ. ಇದರಲ್ಲಿ ಡ್ಯುಯಲ್ ಸನ್‌ರೂಫ್, ವೆಂಟಿಲೇಶನ್, ಲೆಗ್ ಸಪೋರ್ಟ್, ಎಲೆಕ್ಟ್ರಿಕಲ್ ಅಡ್ಜೆಸ್ಟ್ ಮಾಡಬಹುದಾದ ಸೀಟುಗಳು, ಪವರ್ ಸ್ಲೈಡಿಂಗ್ ಡೋರ್‌ಗಳು, 12-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, 12.3-ಇಂಚಿನ ಡ್ಯುಯಲ್ ಕರ್ವ್ಡ್ ಡಿಸ್ಪ್ಲೇ, ಎಡಿಎಎಸ್ ಲೆವೆಲ್ 2 ನಂತಹ ವೈಶಿಷ್ಟ್ಯಗಳನ್ನು ಈ ಕಾರು ಹೊಂದಿದೆ. ಇದಲ್ಲದೆ, ಇದು ಹೆಡ್-ಅಪ್ ಡಿಸ್​ಪ್ಲೇ, ಡಿಜಿಟಲ್ ರಿಯರ್-ವ್ಯೂ ಮಿರರ್, ಫಿಂಗರ್‌ಪ್ರಿಂಟ್ ರೆಕಗ್ನೇಷನ್​ ಅಪ್​ಡೇಟ್​ ಮಾಡಿದ ಡಿಜಿಟಲ್ ಕೀ ಮತ್ತು ಡ್ಯಾಶ್‌ಬೋರ್ಡ್‌ನಲ್ಲಿ ಆಂಬಿಯೆಂಟ್ ಲೈಟಿಂಗ್ ಅನ್ನು ಸಹ ಹೊಂದಿದೆ.

ಬಣ್ಣ ಆಯ್ಕೆಗಳು: ಹೊಸ ಕಾರ್ನಿವಲ್ ಅನ್ನು ಕೇವಲ ಒಂದು ಪೂರ್ಣ ಲೋಡ್ ರೂಪಾಂತರದಲ್ಲಿ ಪ್ರಾರಂಭಿಸಲಾಗುವುದು. ಬಣ್ಣ ಆಯ್ಕೆಗಳ ಬಗ್ಗೆ ಮಾತನಾಡುವುದಾದ್ರೆ, ಇದನ್ನು ಎರಡು ಅಥವಾ ಮೂರು ಬಣ್ಣ ಆಯ್ಕೆಗಳಲ್ಲಿ ಮೂಡಿಬರಬಹುದು.

ಎಂಜಿನ್:ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರ್ನಿವಲ್ 2.2-ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದೆ. ಅಂತಾರಾಷ್ಟ್ರೀಯವಾಗಿ ಲಭ್ಯವಿರುವ ಕಾರ್ನಿವಲ್ 1.6-ಲೀಟರ್ ಟರ್ಬೊ ಪೆಟ್ರೋಲ್ ಹೈಬ್ರಿಡ್ ಮತ್ತು 3.5-ಲೀಟರ್ V6 ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿದೆ.

ಕಿಯಾ ಕಾರ್ನಿವಲ್ ಬೆಲೆ: ಭಾರತದಲ್ಲಿ ಬಿಡುಗಡೆಯಾದ ಕಾರ್ನಿವಲ್‌ನ ಬೆಲೆ ಸುಮಾರು ₹ 50 ಲಕ್ಷದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ. ಭಾರತದಲ್ಲಿ, ಇದು ಇನ್ನೋವಾ ಹಿಕ್ರಾಸ್ ಮತ್ತು ಟೊಯೋಟಾ ವೆಲ್‌ಫೈರ್‌ನೊಂದಿಗೆ ಸ್ಪರ್ಧಿಸುತ್ತದೆ.

ಓದಿ:ಸ್ಪೋರ್ಟ್ಸ್​ ಕಾರ್ ಖರೀದಿಸಿದ ನಟ ಅಜೀತ್​; 4.39 ಕೋಟಿ ಬೆಲೆಯ ಈ ಪೋರ್ಷೆ ಕಾರಿನ ವಿಷೇತೆಗಳೇನು? - Actor Ajith Porsche Sports Car

ABOUT THE AUTHOR

...view details