ನ್ಯೂಯಾರ್ಕ್, ಅಮೆರಿಕ: ನಾಸಾದ ಪ್ರಿಸರ್ವೆನ್ಸ್ ರೋವರ್ ಮಂಗಳ ಗ್ರಹದಲ್ಲಿ ಹೊಸ ಸವಾಲನ್ನು ನಿಭಾಯಿಸುತ್ತಿದೆ. ಆರು ಚಕ್ರಗಳ ರೋವರ್ ಕಳೆದ ಮೂರುವರೆ ವರ್ಷಗಳಿಂದ ಕುಳಿ ಕೆಳಭಾಗದಲ್ಲಿ ಅಧ್ಯಯನ ನಿರತವಾಗಿತ್ತು. ಆಳವಾದ ಕುಳಿಯೊಳಗೆ ಸುತ್ತುತ್ತಾ ಅಲ್ಲಿನ ವಾತಾವರಣದ ಅಧ್ಯಯನವನ್ನು ನಡೆಸುತ್ತಿತ್ತು. ಆಳವಾದ ಕುಳಿಯ ಭಾಗದಿಂದ ಮೇಲಕ್ಕೇರಲು ಇದೀಗ ರೋವರ್ ಸಜ್ಜಾಗಿದೆ.
ಅಲ್ಲಿನ ಕಲ್ಲು ಬಂಡೆಗಳ ಮಾದರಿಗಳ ಅಧ್ಯಯನ ಮಾಡಲು, ಕುಳಿಯ ಸುತ್ತ ಸುತ್ತುತ್ತಿದ್ದ ಪ್ರಿಸರ್ವೆನ್ಸ್ ರೋವರ್ ಜೆಜೆರೊ ಕುಳಿ ಅಂಚಿಗೆ 1,000 ಅಡಿ ಅಂದರೆ 305 ಮೀಟರ್ ಎತ್ತರಕ್ಕೆ ಏರಲಿದೆ. 2021 ರಲ್ಲಿ ಕೆಂಪು ಗ್ರಹದಲ್ಲಿ ಇಳಿದ ನಂತರ, ಪ್ರಿಸರ್ವೆನ್ಸ್ ರೋವರ್ ಕುಳಿಯ ನೆಲ ಭಾಗದಿಂದ 22 ರಾಕ್ ಕೋರ್ ಮಾದರಿಗಳನ್ನು ಸಂಗ್ರಹಿಸಿದೆ. ಈ ಕುಳಿ ಒಮ್ಮೆ ನೀರಿನಿಂದ ತುಂಬಿತ್ತು ಎಂಬ ಅಂಶವನ್ನು ರೋವರ್ ಪತ್ತೆ ಹಚ್ಚಿದೆ.
ರೋವರ್ ಇಲ್ಲಿ ಸಂಗ್ರಹಿಸಿರುವ ಮಾದರಿಗಳು ವಿಜ್ಞಾನಿಗಳಿಗೆ ಹೆಚ್ಚಿನ ಅಧ್ಯಯನಕ್ಕೆ ನೆರವು ನೀಡಿದೆ. ಮಂಗಳನ ಅಂಗಳದಲ್ಲಿ ಶತಕೋಟಿ ವರ್ಷಗಳ ಹಿಂದೆ ಕಾಣಿಸುತ್ತಿರುವುದನ್ನು ಒಟ್ಟಿಗೆ ಜೋಡಿಸಲು ಇದು ಸಹಾಯ ಮಾಡುತ್ತದೆ ಮತ್ತು ಪ್ರಾಚೀನ ಮಂಗಳನ ಜೀವನವು ಸುಪ್ತವಾಗಿದೆಯೇ ಎಂದು ತಿಳಿಯಲು ಸಹಾಯ ಮಾಡುತ್ತದೆ. ಇಲ್ಲಿನ ಕಲ್ಲು ಬಂಡೆಗಳ ಮಾದರಿಗಳನ್ನು ಭೂಮಿಗೆ ತರುವ ಮಾರ್ಗಗಳನ್ನು ನಾಸಾ ಅನ್ವೇಷಣೆ ಮಾಡುತ್ತಿದೆ.