ವಾಷಿಂಗ್ಟನ್: ಸ್ಮಾರ್ಟ್ಫೋನ್ ಪ್ರಿಯರಿಗೆ ಹೊಸ ಸುದ್ದಿಯೊಂದನ್ನು ಮೊಟೊರೊಲಾ ನೀಡಿದೆ. ಬಹುನಿರೀಕ್ಷೆಯ ಮೊಟೊರೊಲಾ ರೇಜರ್ 50 ವಿನ್ಯಾಸ ಮತ್ತು ಅದರ ವೈಶಿಷ್ಟಗಳ ಕುರಿತ ಅನೇಕ ಊಹಾಪೋಹಗಳ ನಡುವೆ ಇದೀಗ ಟಿಇಎನ್ಎಎಎ ಸರ್ಟಿಫೀಕೆಟ್ ಸೈಟ್ನಲ್ಲಿ ಕಾಣಲಿದೆ. ರೇಜರ್ನ ಹೊಸ ಎಡಿಷನ್ ಇದಾಗಿದ್ದು, ಕವರ್ ಸ್ಕ್ರೀನ್ ಮತ್ತು ಅಡ್ವಾನ್ಸ್ ಫೀಚರ್ನಿಂದಾಗಿ ಇದು ಮೋಡಿ ಮಾಡಲಿದ್ದು, ಮಾರುಕಟ್ಟೆಯಲ್ಲಿ ಗಮನ ಸೆಳೆಯಲಿದೆ ಎಂದು ಜಿಎಸ್ಎಂ ಅರೆನಾ ತಿಳಿಸಿದೆ.
ಟಿಇಎನ್ಎಎಎ ರೇಜರ್ 50 ಸ್ಮಾರ್ಟ್ಫೋನ್ ಅನ್ನು ಲಿಸ್ಟ್ ಮಾಡಿರುವುದಾಗಿ ದೃಢೀಕರಿಸಿದೆ. ಫೋನ್ 3.6 ಇಂಚ್ ಕವರ್ ಸ್ಕ್ರೀನ್ ಹೊಂದಿದೆ. ಎರಡು ಕ್ಯಾಮೆರಾ ಮತ್ತು ಎಲ್ಇಡಿ ಫ್ಲಾಶ್ ಹೊಂದಿರಲಿದೆ. ಇನ್ನು ಒಳಾಂಗಣ ಡಿಸ್ಫ್ಲೇ ನಲ್ಲಿ 6.9 ಇಂಚ್ನ ಮಡಚಬಹುದಾದ ಒಲೆಡ್ ಪ್ಯಾನೆಲ್, ಬೊಸ್ಟಿಂಗ್ ಫುಲ್ ಎಚ್ಡಿ+ ರೆಸಲ್ಯೂಷನ್ ಮತ್ತು 32 ಎಂಪಿ ಮುಂಭಾಗದ ಕ್ಯಾಮೆರಾವೂ ವಿಶಾಲ ದೃಶ್ಯ ಮತ್ತು ಉತ್ತಮ ಸೆಲ್ಫಿಯನ್ನು ಹೊಂದಿದೆ.
ಅಪರೂಪದ ಸೆಟ್ಅಪ್ನೊಂದಿಗೆ ರೇಜರ್ 50 ಮುಖ್ಯ ಕ್ಯಾಮೆರಾ, 13 ಎಂಪಿ ಅಲ್ಟ್ರಾವೆಡ್ ಶೂಟರ್ 50 ಎಂಪಿ ಕ್ಯಾಮೆರಾ ಹೊಂದಿದೆ. ಡ್ಯುಯೆಲ್ ಒಎಲ್ಇಡಿ ಪ್ಯಾನೆಲ್ ಹೊರತಾಗಿ, ಮೊಟೊರೊಲಾ ಸೈಡ್- ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್, ಸ್ಲೀಮ್ ಮತ್ತು ಸ್ಲಮ್ಲೇಸ್ ವಿನ್ಯಾಸವನ್ನು ಹೊಂದಿದೆ.
ಮಿಡ್ರೇಜ್ ಚಿಪ್ಸೆಟ್ ಹೊಂದಿದ್ದು, ರೇಜರ್ 40 ರೀತಿ ಅಲ್ಲದೇ, ಇದರಲ್ಲಿ ಸ್ನಾಪ್ಡ್ರಾಗಲ್ 7 ಜೆನ್1 ಬಳಕೆ ಮಾಡಲಾಗಿದೆ. ರೇಜರ್ 50 ಮೀಡಿಯಾ ಟೆಕ್ ಪ್ರೊಸೆಸರ್ಗೆ ಬದಲಾಗಲಿದೆ ಎಂಬ ಗಾಳಿ ಸುದ್ದಿಯೂ ಇದೆ.