ಕರ್ನಾಟಕ

karnataka

ETV Bharat / technology

ಮಾರುಕಟ್ಟೆಗೆ ಬಂದಿದೆ ಹೊಸ ಮೊಟೊರೊಲಾ ಫೋನ್​! ಇದರಲ್ಲಿದೆ Moto AI ಸೂಟ್ - Motorola Edge 50 Neo Launched

Motorola Edge 50 Neo Launched: ಮತ್ತೊಂದು ಹೊಸ ಫೋನ್ ಮಾರುಕಟ್ಟೆ ಪ್ರವೇಶಿಸಿದೆ. Motorola ಕಂಪೆನಿಯು ತನ್ನ ಇತ್ತೀಚಿನ Edge 50 Neo 5G ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

MOTOROLA EDGE 50 NEO  MOTOROLA EDGE 50 NEO FLIPKART  MOTOROLA EDGE 50 NEO PRICE  MOTOROLA EDGE 50 NEO SPECIFICATIONS
Motorola Edge 50 Neo ಫೋನ್ (Motorola)

By ETV Bharat Karnataka Team

Published : Sep 18, 2024, 2:22 PM IST

Motorola Edge 50 Neo Launched:ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಮೊಟೊರೊಲಾ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. Edge 50, Edge 50 Fusion, Edge 50 Ultra ನಂತಹ Edge ಸರಣಿಯ ಫೋನ್‌ಗಳು ಇಲ್ಲಿಯವರೆಗೆ ಬಿಡುಗಡೆಯಾಗಿದೆ. Edge 50 Neo ಮೊಬೈಲ್ ಇತ್ತೀಚೆಗೆ ಬಿಡುಗಡೆಯಾಗಿದೆ. Motorola ಈ ಮೊಬೈಲ್‌ನಲ್ಲಿ ತನ್ನದೇ ಆದ ಕೃತಕ ಬುದ್ಧಿಮತ್ತೆ Moto AI ಸೂಟ್ ಅನ್ನು ನೀಡುತ್ತಿದೆ.

ಸೆಪ್ಟೆಂಬರ್ 24ರಿಂದ ಮಾರಾಟ ಪ್ರಾರಂಭವಾಗಲಿದೆ. ಹೊಸ ಮೊಬೈಲ್‌ಗಳು ಮೊಟೊರೊಲಾ ಇಂಡಿಯಾ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮತ್ತು ಇತರ ಚಿಲ್ಲರೆ ಅಂಗಡಿಗಳಲ್ಲಿ ಲಭ್ಯವಿರುತ್ತವೆ. HDFC ಬ್ಯಾಂಕ್ ಕಾರ್ಡ್‌ಗಳ ಮೇಲೆ 1,000 ರೂ ರಿಯಾಯಿತಿಯ ಜೊತೆಗೆ, ನೀವು ಎಕ್ಸ್‌ಚೇಂಜ್ ಬೋನಸ್‌ನಲ್ಲಿ ಹೆಚ್ಚುವರಿ 1,000 ರೂ ರಿಯಾಯಿತಿ ಪಡೆಯಬಹುದು. ರಿಲಯನ್ಸ್ ಜಿಯೋ ಜೊತೆಗೆ 10 ಸಾವಿರ ರೂ ಮೌಲ್ಯದ ಪ್ರಯೋಜನಗಳನ್ನು ಬಂಡಿಲ್ಡ್​ ಆಫರ್ ಅಡಿಯಲ್ಲಿ ನೀಡಲಾಗುತ್ತಿದೆ.

ಮೊಟೊರೊಲಾ ಎಡ್ಜ್ 50 ನಿಯೋ ವೈಶಿಷ್ಟ್ಯಗಳು:

  • ಪ್ಯಾನಲ್​: 6.4 ಇಂಚಿನ ಫ್ಲಾಟ್ LTPO OLED
  • ಪ್ರೊಸೆಸರ್: ಮೀಡಿಯಾ ಟೆಕ್ ಡೈಮೆನ್ಸಿಟಿ 7300
  • 1.5K ರೆಸಲ್ಯೂಶನ್ ಸ್ಕ್ರೀನ್
  • 3000 ನಿಟ್ಸ್ ಬ್ರೈಟ್ಸ್​ನೆಸ್​
  • ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್​
  • ರಿಯರ್​ ಕ್ಯಾಮೆರಾ: 50 MP
  • ಫ್ರಂಟ್​ ಕ್ಯಾಮೆರಾ: 32 MP
  • ಆ್ಯಗಲ್ ಕ್ಯಾಮೆರಾ: 13 MP ಅಲ್ಟ್ರಾ ವೈಡ್
  • ಟೆಲಿಫೋಟೋ ಲೆನ್ಸ್: 10 MP
  • ಬ್ಯಾಟರಿ: 4310 mAh
  • 68W ಟರ್ಬೊ ಪವರ್ ಸೂಪರ್ ಫಾಸ್ಟ್ ಚಾರ್ಜಿಂಗ್
  • RAM ಆ್ಯಂಡ್​ ROM: 8GB+256GB ಇಂಟರ್ನಲ್​ ಸ್ಟೋರೇಜ್​
  • ರೂಪಾಂತರಗಳು: ಎಡ್ಜ್ 50 ನಿಯೋ ಒಂದೇ ರೂಪಾಂತರದಲ್ಲಿ ಮಾತ್ರ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಬಣ್ಣದ ಆಯ್ಕೆಗಳು:

  • ಪ್ಯಾಂಟೋನ್-ಸರ್ಟಿಫೈಡ್​ ನಾಟಿಕಲ್ ಬ್ಲೂ
  • ಲ್ಯಾಟೆ
  • ಗ್ರಿಸೈಲ್
  • Poinciana ವೆಗನ್​ ಲೆದರ್​ ಎಂಡ್​
  • ಬೆಲೆ: ₹23,999

ಕೃತಕ ಬುದ್ಧಿಮತ್ತೆ: ಮೊಟೊರೊಲಾ ಈ ಮೊಬೈಲ್‌ನಲ್ಲಿ ತನ್ನದೇ ಆದ ಕೃತಕ ಬುದ್ಧಿಮತ್ತೆ Moto AI ಸೂಟ್ ಅನ್ನು ನೀಡುತ್ತಿದೆ. ಈ Moto AI ಸೂಟ್‌ನ ಸಹಾಯದಿಂದ, ಫೋಟೋ ಪ್ರೊಸೆಸಿಂಗ್, ಸ್ಟೈಲ್ ಸಿಂಕ್, ಅಡಾಪ್ಟಿವ್ ಸ್ಟೆಬಿಲೈಸೇಶನ್ ಮತ್ತು 30x ಸೂಪರ್ ಜೂಮ್‌ನಂತಹ ಕ್ಯಾಮೆರಾ ವೈಶಿಷ್ಟ್ಯಗಳನ್ನು ಕಾಣಬಹುದು. ಈ ಸ್ಮಾರ್ಟ್‌ಫೋನ್‌ನಲ್ಲಿ ವರ್ಚುವಲ್ RAM ಅನ್ನು 8GB ವರೆಗೆ ಹೆಚ್ಚಿಸಬಹುದು. ಆಂಡ್ರಾಯ್ಡ್ 14 ಔಟ್ ಆಫ್ ದಿ ಬಾಕ್ಸ್‌ನೊಂದಿಗೆ ಬರುತ್ತಿದೆ. ಇದು ಐದು ವರ್ಷಗಳ ಕಾಲ OS ಅಪ್‌ಡೇಟ್​ಗಳನ್ನು ಮತ್ತು ಐದು ವರ್ಷಗಳವರೆಗೆ ಸೆಕ್ಯೂರಿಟಿ ಅಪ್​ಡೇಟ್​ ಒದಗಿಸುತ್ತದೆ ಎಂದು ಮೊಟೊರೊಲಾ ಹೇಳಿದೆ.

ಇದನ್ನೂ ಓದಿ:ಆ್ಯಪಲ್‌ಪ್ರಿಯರಿಗೆ ಅಮೆಜಾನ್​ನಿಂದ ಬಂಪರ್ ಆಫರ್: 39,999 ರೂಪಾಯಿಗೆ ಐಫೋನ್​ 13 - iPhone 13

ABOUT THE AUTHOR

...view details