Most Affordable 400cc Class Bikes:ಯುವಕರಲ್ಲಿ 400 ಸಿಸಿ ಬೈಕ್‌ಗಳ ಕ್ರೇಜ್ ಹೆಚ್ಚುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇಂಥ ಬೈಕ್‌ಗಳು ಬಹಳ ಜನಪ್ರಿಯವಾಗಿವೆ. ಈ ವಿಭಾಗದಲ್ಲಿ ಮೋಟಾರ್‌ಸೈಕಲ್‌ಗಳು ಭಾರಿ ಬೇಡಿಕೆಯೊಂದಿಗೆ ಮಾರಾಟವಾಗುತ್ತಿವೆ.
ಅನೇಕ ಕಂಪನಿಗಳು ತಮ್ಮ ಉತ್ಪನ್ನಗಳನ್ನು 400 ಸಿಸಿ ವಿಭಾಗದಲ್ಲಿ ಮಾರಾಟ ಮಾಡುತ್ತಿವೆ. ಮಾರುಕಟ್ಟೆಯಲ್ಲಿ ಇವುಗಳ ಬೆಲೆ 1.80 ಲಕ್ಷ ರೂ.ಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತಿದೆ. ನೀವೂ ಕೂಡ ಈ ವಿಭಾಗದಲ್ಲಿ ಉತ್ತಮ ಬೈಕ್ ಖರೀದಿಸುವ ಯೋಚನೆಯಲ್ಲಿದ್ದರೆ ಇಲ್ಲಿವೆ ಟಾಪ್ 7 ಆಯ್ಕೆಗಳು.
7. Triumph Speed 400:'ಟ್ರಯಂಫ್ ಸ್ಪೀಡ್ 400' ಕೈಗೆಟುಕುವ ಬೆಲೆಯ ರೋಡ್‌ಸ್ಟರ್ ಅನ್ನು ಬಜಾಜ್ ಮತ್ತು ಟ್ರಯಂಫ್ ಪಾಲುದಾರಿಕೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇತ್ತೀಚೆಗೆ ಇದನ್ನು MY25ಗೆ ನವೀಕರಿಸಲಾಗಿದೆ. '2025 ಸ್ಪೀಡ್ 400' ಬೆಲೆ 2.4 ಲಕ್ಷ ರೂ (ಎಕ್ಸ್ ಶೋ ರೂಂ). ಈ ಬೈಕ್ 398.15cc, ಸಿಂಗಲ್-ಸಿಲಿಂಡರ್ DOHC 4V/ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಿದೆ. 39.5 bhp ಪವರ್ ಮತ್ತು 37.5 Nm ಟಾರ್ಕ್ ಉತ್ಪಾದಿಸುತ್ತದೆ.
6. Harley-Davidson X440: ಹಾರ್ಲೆ-ಡೇವಿಡ್ಸನ್ ತನ್ನ ಪ್ರೀಮಿಯಂ ಮತ್ತು ದುಬಾರಿ ಬೈಕ್‌ಗಳಿಗೆ ಹೆಸರುವಾಸಿಯಾಗಿದ್ದರೂ ಕಂಪನಿಯು 'Harley-Davidson X440' ಬಿಡುಗಡೆಯೊಂದಿಗೆ ಸಂಪೂರ್ಣವಾಗಿ ಹೊಸ ಬೆಲೆ ವಿಭಾಗವನ್ನು ಪ್ರವೇಶಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ 'X440' ಬೈಕ್ ಅನ್ನು 2.39 ಲಕ್ಷ ರೂ.ಯಿಂದ 2.79 ಲಕ್ಷ ರೂ (ಎಕ್ಸ್ ಶೋ ರೂಂ)ಯಲ್ಲಿ ಮಾರಾಟಕ್ಕಿಟ್ಟಿದೆ. ಇದು 440 ಸಿಸಿ ಆಯಿಲ್ ಕೂಲ್ಡ್ ಎಂಜಿನ್ ಹೊಂದಿದೆ. 27 bhp ಪವರ್, 38 Nm ಟಾರ್ಕ್ ಉತ್ಪಾದಿಸುತ್ತದೆ.
5. Royal Enfield Guerrilla 450: 'ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450' ಬೈಕ್ ಅನ್ನು 2024ರ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. ಇದು ಬಹುನಿರೀಕ್ಷಿತ ಮೋಟಾರ್‌ಸೈಕಲ್‌ಗಳಲ್ಲಿ ಒಂದು. ಈ ಮೋಟಾರ್ ಸೈಕಲ್ ಅನ್ನು ಹೊಸ 'ಶೆರ್ಪಾ 450' ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಿದೆ. ಇದರಿಂದಾಗಿ ಬೆಲೆ 2.39 ಲಕ್ಷ ರೂ.ಯಿಂದ 2.54 ಲಕ್ಷ ರೂ (ಎಕ್ಸ್ ಶೋ ರೂಂ) ಇದೆ. 'ಹಿಮಾಲಯನ್ 450' ಮಾದರಿಯ ಪ್ರಮುಖ ವೈಶಿಷ್ಟ್ಯಗಳಿಗೆ ಹೋಲಿಸಿದರೆ, 'ಗೆರಿಲ್ಲಾ 450' ಕಡಿಮೆ ತೂಕ ಮತ್ತು ಕೈಗೆಟುಕುವ ಬೆಲೆ ಹೊಂದಿದೆ.