ETV Bharat / technology

ಗ್ರಾಹಕರ ಮಾತು ಕದ್ದಾಲಿಸಿತಾ ಸಿರಿ?; 95 ಮಿಲಿಯನ್ ಡಾಲರ್​ ಸೆಟಲ್ಮೆಂಟ್​ಗೆ ಮುಂದಾದ ಆಪಲ್​ - DID SIRI SPY ON YOU

ಸಿರಿ ರಹಸ್ಯವಾಗಿ ಗ್ರಾಹಕರ ಮಾತನ್ನು ಕದ್ದಾಲಿಸುತ್ತಿದೆ ಎಂಬ ಮೊಕದ್ದಮೆಯಲ್ಲಿ ಹಣದ ಸೆಟಲ್ಮೆಂಟ್​ಗೆ ಮುಂದಾಗಿರುವ ಆಪಲ್​ 95 ಮಿಲಿಯನ್​ ಡಾಲರ್​ ಪಾವತಿಸಲು ಸಮ್ಮತಿಸಿದೆ.

did-siri-spy-on-you-apple-usd-95-million-settlement-explained
ಸಾಂದರ್ಭಿಕ ಚಿತ್ರ (ಐಎಎನ್​ಎಸ್​)
author img

By ETV Bharat Karnataka Team

Published : Jan 6, 2025, 4:57 PM IST

ಐಫೋನ್​ ಗೌಪತ್ಯೆ ಕಾಯ್ದುಕೊಳ್ಳುವ ದೀರ್ಘಕಾಲಿಕ ಬದ್ಧತೆಗೆ ದ್ರೋಹ ಬಗೆದು ಕದ್ದಾಲಿಸಿದೆ ಎಂಬ ಆರೋಪವೊಂದು ಆಪಲ್​ ವಿರುದ್ಧ ಕೇಳಿ ಬಂದಿದೆ. ಐಫೋನ್​ನ ವರ್ಚುಯಲ್​ ಅಸಿಸ್ಟೆಂಟ್​ ಸಿರಿ ಬಳಕೆ ಮಾಡಿಕೊಂಡು ಕದ್ದಾಲಿಕೆ ಮಾಡುತ್ತಿದೆ ಎಂದು ಆರೋಪಿಸಿ, 95 ಮಿಲಿಯನ್ ಡಾಲರ್​ ಪಾವತಿಸಬೇಕು ಎಂಬ ಮೊಕದ್ದಮೆಗೆ ಆ್ಯಪಲ್ ಸಮ್ಮತಿ ಸೂಚಿಸಿದೆ. ಈ ರೀತಿಯ ಪ್ರಸ್ತಾಪವೊಂದು ಈ ವಾರದ ಆರಂಭದಲ್ಲಿ ಫೆಡರಲ್​ ಕೋರ್ಟ್​ ಮುಂದೆ ಬಂದಿದ್ದು, ಇದರ ತೀರ್ಪು ಬಾಕಿ ಉಳಿದಿದೆ. ಈ ಗೌಪ್ಯತೆ ವಿಚಾರ ಮತ್ತು ಈ ಪ್ರಕರಣ ಸಂಬಂಧ ತಿಳಿದುಕೊಳ್ಳಬೇಕಿರುವ ಪ್ರಮುಖ ಅಂಶ ಇಲ್ಲಿದೆ.

ಏನಿದು ಮೊಕದ್ಧಮೆ?: ಬಳಕೆದಾರರಿಗೆ ಯಾವುದೇ ಮಾಹಿತಿ ತಿಳಿಯದಂತೆ ಅವರ ಮಾತುಕತೆಗಳನ್ನು ಸಿರಿ ಮೈಕ್ರೋಫೋನ್​ ದಾಖಲಿಸುತ್ತಿದೆ ಎಂಬ ಕುರಿತು ದಿ ಗಾರ್ಡಿಯನ್​ ಸುದ್ದಿ ಪತ್ರಿಕೆ ಪ್ರಕಟಿಸಿದ ಲೇಖನ ಆರೋಪಿಸಿತು. ಇದರ ಬೆನ್ನಲ್ಲೇ ವರ್ಗ - ಕ್ರಮದಲ್ಲಿ ನೈಪುಣ್ಯತೆ ಹೊಂದಿರುವ ದಿ ವುಡ್​ ಲಾ ಘಟಕವೂ 2019ರ ಆಗಸ್ಟ್​​ನಲ್ಲಿ ಆಪಲ್​ ವಿರುದ್ಧ ದೂರು ದಾಖಲಿಸಿದೆ. 2014ರ ಸೆಪ್ಟೆಂಬರ್ ಕೇವಲ ಹೇ ಸಿರಿ ಎಂಬ ಶಬ್ಧವನ್ನು ವರ್ಚುಯಲ್​ ಅಸಿಸ್ಟಂಟ್​ ಮಾಡುವ ಉದ್ದೇಶಕ್ಕಾಗಿ ಸಾಫ್ಟ್​ವೇರ್​ ಅಪ್​ಡೇಟ್​ ಮಾಡಲಾಗಿದೆ ಎಂದು ಆಪಲ್​ ತಿಳಿಸಿದೆ. ಆದರೆ, ಗಾರ್ಡಿಯನ್​ ಲೇಖನದಲ್ಲಿ ಕದ್ದಾಲಿಕೆ ಮತ್ತು ಮಾತುಕತೆ ರೆಕಾರ್ಡ್​​ ಮಾಡಲು ಸಂಸ್ಥೆ ಸಿರಿ ತಂತ್ರಜ್ಞಾನವನ್ನು ಸುಧಾರಿಸಿತು ಎಂದು ಆರೋಪಿಸಲಾಗಿದೆ.

ಈ ಸುದ್ದಿಯೂ ಮೊಕದ್ದಮೆ ದಾಖಲಾತಿಗೆ ಕಾರಣವಾಗಿದೆ. ಅಲ್ಲದೇ ಗ್ರಾಹಕರು ಕೊಳ್ಳಬೇಕು ಎಂದಿರುವ ಉತ್ಪನ್ನ ಮತ್ತು ಸೇವೆಗಳ ಸಂಪರ್ಕಿಸುವ ಜಾಹೀರಾತಿಗೆ ಸಂಪರ್ಕಿಸಲು ಮಾಡುವ ಮಾತುಕತೆಯನ್ನು ಆಪಲ್​ ಸಿರಿ ರಹಸ್ಯವಾಗಿ ದಾಖಲಿಸುತ್ತಿದೆ ಎಂಬ ಆರೋಪ ಎದುರಿಸುತ್ತಿದೆ.

ಯಾರು ಈ ಪರಿಹಾರಕ್ಕೆ ಅರ್ಹರು: ಸೆಪ್ಟೆಂಬರ್​ 17, 2014 ರಿಂದ ಐಫೋನ್​ ಖರೀದಿಸಿದ ಮತ್ತು ಸಿರಿ ಅಪ್ಲಿಕೇಷನ್​ ಹೊಂದಿರುವ ಇತರ ಸಾಧನಗಳನ್ನು ಅಳವಡಿಸಿಕೊಂಡಿರುವ 10 ಮಿಲಿಯನ್​ ಅಮೆರಿಕನ್​ ಗ್ರಾಹಕರು, ಈ ವರ್ಷಾಂತ್ಯದಲ್ಲಿ ಈ ಕುರಿತು ಕ್ಲೈಮ್​ ಮಾಡಲು ಅರ್ಹರಾಗಿರುತ್ತಾರೆ.

ಎಷ್ಟು ಹಣವನ್ನು ಗ್ರಾಹಕರು ಹೊಂದಲು ಅರ್ಹರಾಗಿದ್ದಾರೆ?: ಸದ್ಯ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲದಿದ್ದರೂ, ಸಿರಿ ಚಾಲಿತ ಸಾಧನ ಹೊಂದಿರುವವರು ಗರಿಷ್ಠ ಅಂದಾಜು 20 ಡಾಲರ್​ ಪಡೆಯುವ ಸಾಧ್ಯತೆ ಇದೆ. ಅಂತಿಮವಾಗಿ ಈ ಹಣದಲ್ಲಿ ಎರಡು ಅಂಶದ ಮೇಲೆ ವ್ಯತ್ಯಯವಾಗುವ ಸಾಧ್ಯತೆ ಇದೆ. ಅದರಲ್ಲಿ ಮೊದಲ ಅಂಶ ಎಂದರೆ ಕ್ಲೈಮ್​ಗಳ ಸಂಖ್ಯೆ ಮತ್ತು ಕಾನೂನಾತ್ಮಕ ಶುಲ್ಕ ಮತ್ತು ವೆಚ್ಚ ಭರಿಸಿ ಎಷ್ಟು ಮೊತ್ತವನ್ನು ಸೆಟಲ್​ಮಂಟ್​ ನಿಧಿಗೆ ಇಳಿಕೆ ಮಾಡುವುದು ಎಂಬುದು ಈಗ ಚರ್ಚೆಯ ವಿಷಯವಾಗಿದೆ. ಕ್ಲೈಮ್‌ಗಳ ನಿರ್ವಾಹಕರು ಕೇವಲ 3ರಿಂದ 5ರಷ್ಟು ಅರ್ಹ ಗ್ರಾಹಕರು ಕ್ಲೈಮ್​‌ಗಳನ್ನು ಸಲ್ಲಿಸುತ್ತಾರೆ ಎಂದು ಅಂದಾಜಿಸಿದ್ದಾರೆ. ಈ ಪ್ರಕರಣದಲ್ಲಿ 30 ಮಿಲಿಯನ್​ ಡಾಲರ್​ ವಕೀಲರು ಶುಲ್ಕ ಮತ್ತು ವೆಚ್ಚವಾಗಿ ಕೋರಿದ್ದಾರೆ. ಈ ಹಣವು ಅಮೆರಿಕ ಜಿಲ್ಲಾ ತೀರ್ಪು ಜೆಫ್ರಿ ವೈಟ್​​ಗಿಂತ ಕಡಿಮೆಯಾಗಿದೆ. ಈ ಸೆಟಲ್​ಮೆಂಟ್​ ಟರ್ಮ್ಸ್​ ಅನ್ನು ಪರಿಶೀಲಿಸಲು ಫೆ 14ರಂದು ನಡೆಸಲು ಪ್ರಸ್ತಾಪಿಸಲಾಗಿದೆ.

ಕಾನೂನು ಉಲ್ಲಂಘಿಸಿತಾ ಆಪಲ್​?: ಈ ಆರೋಪವೂ ಸತ್ಯವಾಗಿದ್ದಲ್ಲಿ, ಆಪಲ್ ಜನರ ಖಾಸಗಿತನ ರಕ್ಷಿಸಲು ವಿನ್ಯಾಸ ಮಾಡಲಾಗಿರುವ​ ಫೆಡರಲ್​ ವೈರ್ ​ಟ್ಯಾಪಿಂಗ್​ ಕಾನೂನು ಮತ್ತು ಇತರ ಸ್ಟೇಟಸ್​ ಉಲ್ಲಂಘಿಸಿದೆ. ಆದರೆ, ಆಪಲ್​​ ಈ ಆರೋಪ ತಳ್ಳಿ ಹಾಕಿದ್ದು, ಯಾವುದೇ ತಪ್ಪು ಮಾಡಿಲ್ಲ. ಕೇವಲ ನಿರ್ವಹಣೆಗಾಗಿ ನಡೆಸಲಾಗಿದ್ದು, ಈ ಟ್ರಯಲ್​ ಅಲ್ಲಿ ಯಾವುದೇ ತಪ್ಪಿಕ್ರಿಯೆ ನಡೆಸಿಲ್ಲ ಎಂದಿದೆ. ಆದರೆ, ಗ್ರಾಹಕರನ್ನು ಪ್ರತಿನಿಧಿಸಿರುವ ವಕೀಲರು ಮಾತ್ರ ಆಪಲ್​ ತಪ್ಪು ನಡೆಸಿದ್ದು, ಸಂಸ್ಥೆಯು ಈ ನಷ್ಟ ಭರಿಸಲು 1.5 ಬಿಲಿಯನ್​ ಡಾಲರ್​ ಪರಿಹಾರವಾಗಿ ನೀಡಬೇಕು ಎಂದಿದೆ.

ಆದಾಗ್ಯೂ ಆಪಲ್​ ಈ ಸೆಟಲ್ಮೆಂಟ್​ ಕಾರಣದ ಕುರಿತು ಯಾವುದೇ ವಿವರಣೆ ನೀಡಿಲ್ಲ. ಅಲ್ಲದೇ ಪ್ರಮುಖ ಸಂಸ್ಥೆಗಳು ಇದು ಕ್ಲಾಸ್​ ಆಕ್ಷನ್​ ಪ್ರಕರಣದಿಂದ ಪರಿಹಾರ ಪಡೆಯುವ ಮಾರ್ಗವಾಗಿದ್ದು, ಕೆಟ್ಟ ಪ್ರಚಾರ ತಪ್ಪಿಸಿಕೊಂಡು ಕಾನೂನಾತ್ಮಕ ವೆಚ್ಚ ಮತ್ತು ಅಪಾಯ ತಪ್ಪಿಸಿಕೊಳ್ಳುವ ಮಾರ್ಗ ಎಂದಿದೆ. ಈ ಮೊಕದ್ದಮೆಯಲ್ಲಿ ಆಪಲ್​ ಕೋರ್​​ ಮೂಲಭೂತ ಮಾನವ ಹಕ್ಕು ಖಾಸಗಿತನ ರಚಿಸಲಾಗಿದೆ. ಆದಾಗ್ಯೂ 95 ಮಿಲಿಯನ್​ ಡಾಲರ್​ ದೊಡ್ಡ ಮೊತ್ತದ ಹಣವಾಗಿದ್ದು, ಇದು ಆಪಲ್​ಗೆ ಅತ್ಯಲ್ಪವಾಗಿದೆ. ಸೆಪ್ಟೆಂಬರ್​ 2014ರಲ್ಲಿ ಕಂಪನಿಯ ಒಟ್ಟಾರೆ ಲಾಭವೂ 700 ಬಿಲಿಯನ್​ ಡಾಲರ್​ ಹೆಚ್ಚಿದೆ.

ಮೈಕ್ರೋಫೋನ್​ಗಳು ನಮ್ಮ ಮೇಲೆ ಗೂಢಾಚಾರಿಕೆ ಮಾಡುತ್ತಿದ್ದರೆ ಚಿಂತಿಸಬೇಕಾ? : ಸಿರಿ ವಿರುದ್ಧ ದಾಖಲಾಗಿರುವ ಪ್ರಕರಣದಂತೆ, ಗೂಗಲ್​ ಆಥವಾ ಆಂಡ್ರಾಯ್ಡ್​​ ಸಾಫ್ಟ್​ವೇರ್​ನ ಇತರ ವರ್ಚುಯಲ್​ ಅಸಿಸ್ಟೆಂಟ್​​ಗಳ ಮೇಲೆ ಕೂಡ ಪ್ರಕರಣ ದಾಖಲಾಗಿದೆ

ಸಿರಿಯನ್ನು ಡಿಸೆಬಲ್​ ಮಾಡುವುದು ಹೇಗೆ?

  • ಆಪಲ್​ನ ವರ್ಚುಯಲ್​ ಅಸಿಸ್ಟೆಂಟ್​ ಸಿರಿಯನ್ನು ಟರ್ನ್​ ಆಫ್​ ಮಾಡುವ ಕ್ರಮ
  • ಸಿರಿ ಮತ್ತು ಸರ್ಚ್​ಗೆ ಹೋಗಿ
  • ಅಲ್ಲಿ ಲಿಸನ್​ ಫಾರ್​ ಹೇ ಸಿರಿ ಟಾಗಲ್​ ಆಫ್​ ಮಾಡಿ ಮತ್ತು ಸಿರಿ ಸೈಡ್​ ಬಟನ್​ ಅನ್ನು ಪ್ರೆಸ್​ ಮಾಡಿ
  • ಬಳಿಕ ಸಿರಿಯನ್ನು ಆಫ್​ ಮಾಡಿ ಬಟನ್​ ಕ್ಲಿಕ್​ ಮಾಡಿ

ಐಫೋನ್​ ಮೈಕ್​ನಲ್ಲಿ ಕೂಡ ಸೆಟ್ಟಿಂಗ್​ಗಎ ಹೋಗಿ, ಸೆಲೆಟಕ್ಟ್​ ಆಪ್​ ಕ್ಲಿ ಮಾಡಿ, ಮೈಕ್ರೋಫೋನ್​ ಆಫ್​ ಮಾಡಿ.

ಇದನ್ನೂ ಓದಿ: ಆಪಲ್​ ಪ್ರಿಯರಿಗೆ ಗುಡ್ ನ್ಯೂಸ್; ಐಫೋನ್​ 16 ಸೀರಿಸ್​ ಮೇಲೆ ಆಫರ್‌ಗಳ ಸುರಿಮಳೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.