ನವದೆಹಲಿ: ಮೈಕ್ರೊಸಾಫ್ಟ್ ತನ್ನ ಮೂರನೇ ತ್ರೈಮಾಸಿಕದಲ್ಲಿ 61.9 ಬಿಲಿಯನ್ ಡಾಲರ್ ಆದಾಯವನ್ನು ದಾಖಲಿಸಿದೆ. ಇದು ಶೇಕಡಾ 17 ರಷ್ಟು ಏರಿಕೆಯಾಗಿದೆ. ಕಂಪನಿಯು 21.9 ಬಿಲಿಯನ್ ಡಾಲರ್ ನಿವ್ವಳ ಆದಾಯ ಗಳಿಸಿದ್ದು, ಇದು ಶೇಕಡಾ 20 ರಷ್ಟು ಏರಿಕೆಯಾಗಿದೆ.
"ಮೈಕ್ರೊಸಾಫ್ಟ್ನ ಕೋಪೈಲಟ್ ಮತ್ತು ಕೋಪೈಲಟ್ ಸ್ಟ್ಯಾಕ್ ಎಐ ತಂತ್ರಜ್ಞಾನಗಳು ಹೊಸ ಯುಗಕ್ಕೆ ಮುನ್ನುಡಿ ಬರೆಯುತ್ತಿವೆ. ನಮ್ಮ ಎಐ ಆವಿಷ್ಕಾರಗಳು ನಮ್ಮ ವ್ಯೂಹಾತ್ಮಕ ಪಾಲುದಾರ ಕಂಪನಿಯಾದ ಓಪನ್ ಎಐ ನೊಂದಿಗೆ ಬೆಳವಣಿಗೆ ಹೊಂದಲಿವೆ. ಫಾರ್ಚೂನ್ 500ರ ಪಟ್ಟಿಯಲ್ಲಿರುವ ಶೇ 65ಕ್ಕಿಂತಲೂ ಹೆಚ್ಚು ಕಂಪನಿಗಳು ಈಗ ಮೈಕ್ರೊಸಾಫ್ಟ್ನ ಅಜುರ್ ಓಪನ್ ಎಐ ಸರ್ವೀಸ್ ಅನ್ನು ಬಳಸುತ್ತಿವೆ" ಎಂದು ಮೈಕ್ರೋಸಾಫ್ಟ್ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾದೆಲ್ಲಾ ಹೇಳಿದರು.
ಮಾರ್ಚ್ 31 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಮೈಕ್ರೋಸಾಫ್ಟ್ ಕ್ಲೌಡ್ ಆದಾಯವು 35.1 ಬಿಲಿಯನ್ ಡಾಲರ್ ಆಗಿದ್ದು, ವರ್ಷದಿಂದ ವರ್ಷಕ್ಕೆ ಶೇಕಡಾ 23 ರಷ್ಟು ಹೆಚ್ಚಾಗಿದೆ. ಮೈಕ್ರೋಸಾಫ್ಟ್ ಈಗ 3,50,000 ಕ್ಕೂ ಹೆಚ್ಚು ಪಾವತಿಸಿದ ಗ್ರಾಹಕರನ್ನು ಹೊಂದಿದೆ. ಗಿಟ್ ಹಬ್ ಕೋಪೈಲೆಟ್ನಲ್ಲಿ 1.8 ಮಿಲಿಯನ್ ಪಾವತಿಸಿದ ಚಂದಾದಾರರಿದ್ದು, ಇದರ ಬೆಳವಣಿಗೆಯು ತ್ರೈಮಾಸಿಕದಲ್ಲಿ ಶೇಕಡಾ 35 ಕ್ಕಿಂತ ಹೆಚ್ಚಾಗಿದೆ.