ಕರ್ನಾಟಕ

karnataka

ETV Bharat / technology

ಫೆಬ್ರವರಿಯಲ್ಲಿ ಭಾರತಕ್ಕೆ ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾದೆಲ್ಲಾ ಭೇಟಿ.. ಹಲವರೊಂದಿಗೆ ಮಹತ್ವದ ಚರ್ಚೆ - ಎಐ ಕುರಿತಾದ ಹೊಸ ಅವಕಾಶ

ಈ ವಾರ್ಷಿಕ ಭೇಟಿ ವೇಳೆ ಅವರು ಎಐ ಕುರಿತಾದ ಹೊಸ ಅವಕಾಶಗಳ ಕುರಿತು ಮಾತನಾಡಲಿದ್ದಾರೆ.

Microsoft CEO Satya Nadella india  visit
Microsoft CEO Satya Nadella india visit

By IANS

Published : Jan 29, 2024, 4:09 PM IST

Updated : Jan 29, 2024, 5:23 PM IST

ನವದೆಹಲಿ: ಮೈಕ್ರೋಸಾಫ್ಟ್​​ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾದೆಲ್ಲಾ ಫೆ 7 ಮತ್ತು 8ರಂದು ಭಾರತಕ್ಕೆ ಆಗಮಿಸಲಿದ್ದಾರೆ. ಈ ಭೇಟಿಯು ಅವರ ವಾರ್ಷಿಕ ಪ್ರವಾಸದ ಭಾಗವಾಗಿದ್ದು, ಈ ವೇಳೆ ಅವರು ಕೃತಕ ಬುದ್ದಿಮತ್ತೆ (ಎಐ) ಹೊಸ ಅವಕಾಶಗಳ ಕುರಿತು ಎಐ ಸ್ಟಾರ್ಟ್​​ಅಪ್​ಗಳ ಮುಖ್ಯಸ್ಥರನ್ನು ಭೇಟಿಯಾಗಿ, ಚರ್ಚಿಸುವ ಸಾಧ್ಯತೆ ಇದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಸಂಸ್ಥೆ, ಮೈಕ್ರೋಸಾಫ್ಟ್​​ ಸಿಇಒ, ಅಧ್ಯಕ್ಷ ಸತ್ಯ ನಾದೆಲ್ಲಾ, ಭಾರತದ ಎಐ ಜೊತೆಗಿನ ಹೊಸ ಅವಕಾಶಗಳ ಅನ್ವೇಷಣೆ ಕುರಿತು ಭಾರತದ ಡೆವಲಪರ್​ ಸಮುದಾಯ ಮತ್ತು ಟೆಕ್ನಾಲಾಜಿಸ್ಟ್​​​ ಜೊತೆಗೆ ಮಾತನಾಡಲಿದ್ದಾರೆ ಎಂದು ತಿಳಿಸಿದೆ. ದಕ್ಷಿಣ ಏಷ್ಯಾ ಮತ್ತು ಮೈಕ್ರೋಸಾಫ್ಟ್​​ ಭಾರತದ ಅಧ್ಯಕ್ಷ ಪುನೀತ್​ ಚಂದೊಕ್​, ವಾರಗಳ ಹಿಂದೆ ಆಂತರಿಕ ಮೇಲ್​ನಲ್ಲಿ ಈ ಕುರಿತು ತಿಳಿಸಿದ್ದ ಅವರು, ನಾದೆಲ್ಲಾ ಅವರ ಭಾರತದ ಭೇಟಿಯು ದೇಶದಲ್ಲಿ ತಂತ್ರಜ್ಞಾನ ಬಳಕೆಯ ಅವಕಾಶ ಹೆಚ್ಚಿಸಲಿದೆ ಎಂದಿದ್ದಾರೆ.

ಕಳೆದ ವರ್ಷ ಜೂನ್​ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮೆರಿಕ ಭೇಟಿ ವೇಳೆ, ಅಮೆರಿಕ ಮತ್ತು ಭಾರತದ ತಂತ್ರಜ್ಞಾನ ಕಾರ್ಯದರ್ಶಿಗಳು ಸೇರಿದಂತೆ ನಾದೆಲ್ಲಾ, ಅಲ್ಫಾಬೆಟ್​​ ಮತ್ತು ಗೂಗಲ್​ ಸಿಇಒ ಸುಂದರ್​ ಪಿಚ್ಚೈ ಮತ್ತು ಆ್ಯಪಲ್​ ಸಿಇಒ ಟಿಮ್​ ಕುಕ್​ ಅವರನ್ನು ಭೇಟಿಯಾಗಿದ್ದರು. ಭಾರತವೂ ಜಗತ್ತಿನಲ್ಲಿಯೇ ಸ್ಟಾರ್ಟ್​​ಅಪ್​ ಪೂರಕ ವ್ಯವಸ್ಥೆ ಹೊಂದಿದೆ. ಮೈಕ್ರೋಸಾಫ್ಟ್​​​ ಭಾರತ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಆಳವಾದ ಬದ್ದತೆ ಹೊಂದಿದೆ. ಇದು ಭಾರತ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಪರಿಣಾಮ ಬೀರಲಿದೆ ಎಂದು ಸಂಸ್ಥೆ ತಿಳಿಸಿದೆ

ಈ ನಡುವೆ ಮೈಕ್ರೋಸಾಫ್ಟ್​​​ ಮೂರು ಟ್ರಿಲಿಯನ್​ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಆಪಲ್​ ನಂತರ ಈ ಸಾಧನೆ ತೋರಿದ ಎರಡನೇ ಸಂಸ್ಥೆಯಾಗಿ ಮೈಕ್ರೋಸಾಫ್ಟ್​ ಸಂಸ್ಥೆ ಹೊರ ಹೊಮ್ಮಿದೆ. 48 ವರ್ಷಗಳ ಸಂಸ್ಥೆಯ ಇತಿಹಾಸದಲ್ಲಿ ಮೈಕ್ರೋಸಾಫ್ಟ್​​​​ ಮೊದಲ ಬಾರಿಗೆ 3 ಟ್ರಿಲಿಯನ್​ ಮಾರುಕಟ್ಟೆ ಮೌಲ್ಯವನ್ನು ಪಡೆಯುವ ಮೂಲಕ ಸುದ್ದಿಯಾಗಿದೆ.

ಕೋವಿಡ್​ ಬಳಿಕ ಕಳೆದೆರಡು ವರ್ಷದಿಂದ ಜನವರಿ - ಫೆಬ್ರವರಿಯಲ್ಲಿ ಅವರು ಭಾರತಕ್ಕೆ ಪ್ರತಿ ವರ್ಷ ಭೇಟಿ ನೀಡುತ್ತಿದ್ದಾರೆ. ಕಳೆದ ವರ್ಷ ಅಂದರೆ 2023ರ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಪ್ರಧಾನಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಬೆಂಗಳೂರಿನಲ್ಲಿ ನಡೆದ ಫ್ಯೂಚರ್​ ರೆಡಿ ಟೆಕ್ನಾಲಜಿ ಶೃಂಗಸಭೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: 3 ಟ್ರಿಲಿಯನ್ ಡಾಲರ್ ತಲುಪಿದ ಮೈಕ್ರೋಸಾಫ್ಟ್​ ಮಾರುಕಟ್ಟೆ ಮೌಲ್ಯ

Last Updated : Jan 29, 2024, 5:23 PM IST

ABOUT THE AUTHOR

...view details