MG M9 EV: ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ ತನ್ನ ಅಪ್ಕಮಿಂಗ್ ಲಕ್ಷುರಿ ಎಂಪಿವಿ 'ಎಂಜಿ ಎಂ9' ಕಾರನ್ನು 2025ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಿದೆ. ಐಷಾರಾಮಿ ಎಂಪಿವಿ ಅನ್ನು 'ದಿ ಎಂಜಿ ಸೆಲೆಕ್ಟ್' ಶೋ ರೂಂ ಮೂಲಕ ಆಲ್-ಎಲೆಕ್ಟ್ರಿಕ್ ಟೂ-ಡೋರ್ ಸ್ಪೋರ್ಟಿ ಸೈಬರ್‌ಸ್ಟರ್ ಜೊತೆಗೆ ಮಾರಾಟ ಮಾಡಲಾಗುತ್ತದೆ.
ಕಾರಿನ ಸೆಕೆಂಡ್ ಲೈನ್ನಲ್ಲಿ ಅಂದ್ರೆ ಡ್ರೈವರ್ ಹಿಂದಿನ ಸಾಲಿನಲ್ಲಿ ಒಟ್ಟೋಮನ್ ಸೀಟ್ಸ್ ಮತ್ತು ಅದರ ಹ್ಯಾಂಡ್ರೈಲ್ನಲ್ಲಿ ಟಚ್‌ಸ್ಕ್ರೀನ್ ಪ್ಯಾನೆಲ್ ನೀಡಲಾಗಿದೆ. ಇದರ ಮೂಲಕ ನೀವು ತ್ರಿ-ಝೋನ್ ಕ್ಲೈಮೆಟ್ ಕಂಟ್ರೋಲ್ ಮಾಡಬಹುದು.
ಎಂಜಿ ಎಂ9 ನಿರೀಕ್ಷಿತ ವಿನ್ಯಾಸ:ಎಂ9 ಇವಿ ಈಗಾಗಲೇ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿದೆ. ಸದ್ಯ ಈ ಮಾಡೆಲ್ ಇಂಡಿಯನ್ ಸ್ಪೆಸಿಫಿಕೇಶನ್ಗಳ ಜೊತೆ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಎಂಬ ಮಾಹಿತಿ ಇದೆ.
- ಎಂಪಿವಿ ಮಾಡೆಲ್ 5,270mm ಉದ್ದ, 2,000mm ಅಗಲ ಮತ್ತು 1,840mm ಎತ್ತರ
- ವೀಲ್‌ಬೇಸ್ 3,200mm
- ಗ್ರಿಲ್-ಲೆಸ್ ವಿನ್ಯಾಸ
- 19-ಇಂಚಿನ CONTI SEAL ಟೈರ್‌ಗಳು, LED ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್‌ಲೈಟ್‌ಗಳು
- ಗ್ರಾನೈಟ್ ಗ್ರೇ, ಪರ್ಲ್ ವೈಟ್ ಮತ್ತು ಬ್ಲ್ಯಾಕ್ ನೈಟ್ ಎಂಬ ಮೂರು ಕಲರ್ಗಳ ಆಯ್ಕೆಗಳಲ್ಲಿ ಲಭ್ಯ.
- 90kWh ಬ್ಯಾಟರಿ ಪ್ಯಾಕ್
- WLTP ಕ್ಲೈಮ್ಡ್ 580 ಕಿ.ಮೀ ರೇಂಜ್
- 11kW ಚಾರ್ಜರ್ ಎಂಪಿವಿ ಅನ್ನು ಶೇಕಡಾ 5 ರಿಂದ 100 ರಷ್ಟು ಚಾರ್ಜ್ ಮಾಡಲು 8.5 ಗಂಟೆಗಳು ಬೇಕಾಗುತ್ತವೆ.
- ಡಿಸಿ ಫಾಸ್ಟ್ ಚಾರ್ಜರ್ ಬ್ಯಾಟರಿಯನ್ನು 30 ನಿಮಿಷಗಳಲ್ಲಿ 30 ಪ್ರತಿಶತದಿಂದ 80 ಪ್ರತಿಶತಕ್ಕೆ ಚಾರ್ಜ್ ಮಾಡುತ್ತದೆ.
- 241 bhp ಪವರ್ ಮತ್ತು 350 Nm ಟಾರ್ಕ್ ಉತ್ಪಾದಿಸುತ್ತದೆ.