Mercedes-Benz G580 EQ:ಮರ್ಸಿಡಿಸ್ ಬೆಂಝ್‌ನ ಹೊಸ ಎಲೆಕ್ಟ್ರಿಕ್ ಜಿ-ಕ್ಲಾಸ್ ಕಾರು ದೇಶೀಯ ಮಾರುಕಟ್ಟೆಗೆ ಬಂದಿದೆ. ಇದನ್ನು ಇಕ್ಯೂ ಟೆಕ್ನಾಲಾಜಿಯೊಂದಿಗೆ ಬಿಡುಗಡೆ ಮಾಡಲಾಗಿದೆ. ಜಿ580 ಎಂಬುದು ಕಾರಿನ ಹೆಸರು. ಭಾರತದ ಆಫ್-ರೋಡರ್ ವೆಹಿಕಲ್ ಲಿಸ್ಟ್ನಲ್ಲಿ ಇದನ್ನು ಸೇರಿಸಲಾಗಿದೆ. ಕಾರಿನ ನಾಲ್ಕು ವ್ಹೀಲ್ಗಳಲ್ಲಿ ತಲಾ ಒಂದೊಂದು ಎಲೆಕ್ಟ್ರಿಕಲ್ ಮೋಟರ್ ಅಳವಡಿಸಲಾಗಿದೆ.
ಕೀ ಪಾಯಿಂಟ್ಸ್:
- 116 kWh ಯೂನಿಟ್‌ನ ಬ್ಯಾಟರಿ ಪ್ಯಾಕ್ ಹೊಂದಿದೆ.
- 470 ಕಿಲೋಮೀಟರ್ ರೇಂಜ್ ನೀಡುತ್ತದೆ.
- 587 hp ಪವರ್ ಹೊಂದಿದೆ.
- 1165 Nm ಟಾರ್ಕ್ ಉತ್ಪಾದಿಸುತ್ತದೆ.
- ಇಂಡಿಪೆಂಡೆಂಟ್ ಫ್ರಂಟ್ ಸಸ್ಪೆನ್ಷನ್ ಸಿಸ್ಟಮ್ ಅಳವಡಿಸಲಾಗಿದೆ.
- ಲೋ ರೇಂಜ್ ಗೇರ್ ಬಾಕ್ಸ್ ಒದಗಿಸಲಾಗಿದೆ.
ಎಲೆಕ್ಟ್ರಿಕ್ ಕಾರು 850 ಮಿ.ಮೀವರೆಗಿನ ನೀರು ತುಂಬಿದ ಪ್ರದೇಶಗಳಲ್ಲೂ ಸರಳವಾಗಿ ಚಲಿಸಬಲ್ಲದು. ಇದು ಸಾಮಾನ್ಯ ಜಿ-ಕ್ಲಾಸ್‌ಗಿಂತ ಹೆಚ್ಚು. ಇದಲ್ಲದೆ ಜಿ-ಟರ್ನ್ ಸೌಲಭ್ಯ ಹೊಂದಿದೆ. ಅಂದರೆ ತನ್ನ ವ್ಹೀಲ್ಗಳ ಮೇಲೆ ತಿರುಗಬಹುದಾದ ವ್ಯವಸ್ಥೆ. ಇನ್ನೂ ಹೆಚ್ಚಿನ ಆಫ್-ರೋಡ್ ಫಂಕ್ಷನ್ಗಳನ್ನು ಒದಗಿಸಲಾಗಿದೆ.