ETV Bharat / technology

ದೂರವಿದ್ದರೂ ಹತ್ತಿರದಂತೆ ಕಾಣುವ ಆ ಚಂದಮಾಮನ ತಾಪಮಾನದ ಗುಟ್ಟೇನು? - HOW COLD IS MOON SURFACE

How Cold Is Moon Surface?: ಚಂದ್ರ ಭೂಮಿಯಿಂದ 3 ಲಕ್ಷ ಕಿ.ಮೀ ಗೂ ಹೆಚ್ಚು ದೂರದಲ್ಲಿದ್ದರೂ ನೋಡಲು ಹತ್ತಿರವಿದ್ದಂತೆ ಕಾಣುತ್ತಾನೆ. ಚಂದಮಾಮನ ಒಡಲಲ್ಲಿ ಅನೇಕ ರಹಸ್ಯಗಳಿವೆ. ಅಲ್ಲಿನ ತಾಪಮಾನದ ಕುರಿತು ತಿಳಿಯೋಣ ಬನ್ನಿ.

HOW COLD IS MOON SURFACE  HOW COLD IS MOON  MOON TEMPERATURE AT DAY  MOON TEMPERATURE AT NIGHT
ಚಂದಿರನ ಮೇಲೆ ಮಾನವ (ಸಾಂದರ್ಭಿಕ ಚಿತ್ರ) (Getty Images)
author img

By ETV Bharat Tech Team

Published : 5 hours ago

How Cold Is Moon Surface?: ಚಂದಮಾಮ ನೋಡಲು ಬಲು ಚೆಂದ. ಹುಣ್ಣಿಮೆಯ ಚಂದ್ರನ ವರ್ಣನೆಗೆ ಪದಗಳೇ ಸಾಲವು. ಪಳಪಳನೆ ಹೊಳೆಯುವ ಚಂದ್ರನ ಕುರಿತು ನೂರಾರು ಕಥೆಗಳಿವೆ. ಅಂತ್ಯವಿಲ್ಲದ ರಹಸ್ಯಗಳಿವೆ. 21ನೇ ಶತಮಾನದಲ್ಲಿಯೂ ಅವನ ಒಡಲ ರಹಸ್ಯಗಳು ಒಂದೊಂದಾಗಿ ಹೊರಬರುತ್ತಿವೆ. ಇದಕ್ಕೆ ಕಾರಣ ಬೆಳೆಯುತ್ತಿರುವ ಆಧುನಿಕ ತಂತ್ರಜ್ಞಾನ.

ಚಂದ್ರನಲ್ಲಿ ಎಷ್ಟು ಚಳಿ ಇರುತ್ತದೆ? ಅಲ್ಲಿ ತಾಪಮಾನ ಹೇಗಿರುತ್ತದೆ? ಇತರೆ ಪರಿಸ್ಥಿತಿಗಳು ಹೇಗಿವೆ ಎಂಬೆಲ್ಲ ಪ್ರಶ್ನೆಗಳಿಗೆ ವಿಜ್ಞಾನ ಮಾತ್ರ ಉತ್ತರ ನೀಡಬಲ್ಲದು.

ಅತಿಯಾದ ಚಳಿ, ಬಹುಬೇಗ ಬಿಸಿ: ಚಂದ್ರನ ಮೇಲಿನ ತಾಪಮಾನ ಅತ್ಯಂತ ವೇಗವಾಗಿ ಬದಲಾಗುತ್ತಿರುತ್ತದೆ. ಅತಿಯಾದ ಚಳಿ, ಬಹುಬೇಗ ಬಿಸಿಯಾಗಿ ಬದಲಾಗುತ್ತದೆ ಎಂದು ಮಿಚಿಗನ್ ವಿಶ್ವವಿದ್ಯಾಲಯದ ಖಗೋಳಶಾಸ್ತ್ರ ಪ್ರಾಧ್ಯಾಪಕ ಜಾನ್ ಮೋನಿಯರ್ ಹೇಳಿದ್ದಾರೆ.

ಚಂದ್ರನ ಮೇಲ್ಮೈ ತಾಪಮಾನ -100 ಡಿಗ್ರಿ ಸೆಲ್ಸಿಯಸ್‌ನಿಂದ +​100 ಡಿಗ್ರಿ ಸೆಲ್ಸಿಯಸ್​ವರೆಗೆ ಇರುವ ಸಾಧ್ಯತೆ ಇರುತ್ತದೆ ಎಂದು ವಿಜ್ಞಾನಿ ಜಾನ್​ ಮೋನಿಯರ್​ ಹೇಳಿದ್ದಾರೆ. ನಾಸಾ(NASA)ದ ಪ್ರಕಾರ ಭೂಮಿಯ ಸರಾಸರಿ ಮೇಲ್ಮೈ ತಾಪಮಾನ 15 ಸೆಲ್ಸಿಯಸ್. ವ್ಯಾಪ್ತಿಯ ವಿಷಯದಲ್ಲಿ ಇದು ಸರಿಸುಮಾರು -89 ಡಿಗ್ರಿ ಸೆಲ್ಸಿಯಸ್‌ನಿಂದ 57 ಡಿಗ್ರಿ ಸೆಲ್ಸಿಯಸ್​ವರೆಗೆ ಇರುತ್ತದೆ.

ಚಂದ್ರ ಮತ್ತು ಭೂಮಿಯ ನಡುವೆ ವ್ಯತ್ಯಾಸವೇಕೆ?: ಭೂಮಿ ಮತ್ತು ಚಂದ್ರ ಸೂರ್ಯನಿಂದ ಬಹುತೇಕ ಒಂದೇ ಸಮನಾದ ದೂರದಲ್ಲಿದೆ. (ಸುಮಾರು 150 ಮಿಲಿಯನ್ ಕಿಲೋಮೀಟರ್). ಆದರೆ ಇಬ್ಬರ ಮಧ್ಯೆ ತಾಪಮಾನದಲ್ಲಿ ವ್ಯತ್ಯಾಸ ಬಹಳ. ಇದು ಹಲವಾರು ಅಂಶಗಳಿಂದ ಪ್ರಭಾವಿತವಾಗಿದೆ. ಭೂಮಿಯಲ್ಲಿ ಶಾಖವನ್ನು ಹೀರಿಕೊಂಡು ವಾಸಯೋಗ್ಯಕ್ಕೆ ಬೇಕಾಗುವ ತಾಪಮಾನ ಒದಗಿಸುತ್ತದೆ. ಆದರೆ ಚಂದ್ರನಿಗೆ ಭೂಮಿಯಂತಹ ವಾತಾವರಣವಿಲ್ಲ. ಇದು ಸೂರ್ಯನ ಬೆಳಕನ್ನು ನೇರವಾಗಿ ಚಂದ್ರನ ಮೇಲ್ಮೈ ಮೇಲೆ ಬೀಳುವಂತೆ ಅನುವು ಮಾಡಿಕೊಡುತ್ತದೆ ಎಂದು ಪ್ರೊಫೆಸರ್ ಜಾನ್ ಮೋನಿಯರ್ ಹೇಳುತ್ತಾರೆ.

ಭೂಮಿಯ ಮೇಲೆ ಸಾಗರಗಳಿವೆ. ಅವು ಸೂರ್ಯನಿಂದ ಶಾಖವನ್ನು ಹೀರಿಕೊಳ್ಳುತ್ತವೆ. ರಾತ್ರಿ ಶಾಖ ಬಿಡುಗಡೆ ಮಾಡುತ್ತವೆ. ಆದರೆ ಚಂದ್ರನ ಮೇಲೆ ಹಾಗಲ್ಲ. ರಾತ್ರಿ ಚಂದ್ರನ ಮೇಲಿಂದ ಶಾಖವನ್ನು ಹೊರಸೂಸಲು ಸಾಧ್ಯವಿಲ್ಲ. ಹೀಗಾಗಿ ಅಲ್ಲಿ ರಾತ್ರಿ ಅತ್ಯಂತ ಕಡಿಮೆ ತಾಪಮಾನ ದಾಖಲಾಗುತ್ತದೆ. ಚಂದ್ರನ ಹಗಲು-ರಾತ್ರಿ ಚಕ್ರವು ಭೂಮಿಯ ಮೇಲಿನ ಒಂದು ತಿಂಗಳ ಚಕ್ರಕ್ಕೆ ಬಹುತೇಕ ಸಮ. ಅದಕ್ಕಾಗಿಯೇ ಚಂದ್ರನ ಮೇಲ್ಮೈಯಲ್ಲಿ ದೀರ್ಘಾವಧಿಯವರೆಗೆ ಬಿಸಿಲು ಮತ್ತು ಕತ್ತಲೆ ಮೂಡುತ್ತಲೇ ಇರುತ್ತದೆ.

ರೆಗೋಲಿತ್ ಗೊತ್ತೇ?: ಚಂದ್ರನ ಮೇಲಿನ ಮಣ್ಣನ್ನು 'ರೆಗೋಲಿತ್' ಎಂದು ಕರೆಯಲಾಗುತ್ತದೆ. ಇದು ತುಂಬಾ ಉತ್ತಮ ನಿರೋಧಕವಾಗಿದೆ. ಅದಕ್ಕಾಗಿಯೇ ಚಂದ್ರನ ಮೇಲ್ಮೈ ಹಗಲು ರಾತ್ರಿ ಶಾಖ ಮತ್ತು ಶೀತವನ್ನು ಉಳಿಸಿಕೊಳ್ಳುತ್ತದೆ. ಅಪೋಲೋ 15 ಮತ್ತು 17 ಕಾರ್ಯಾಚರಣೆಗಳ ಸಮಯದಲ್ಲಿ ಚಂದ್ರನ ಮೇಲ್ಮೈಗಿಂತ ಕೆಳಗೆ ತಾಪಮಾನ ಮಾಪನಗಳನ್ನು ತೆಗೆದುಕೊಳ್ಳಲಾಗಿದೆ. ಮೇಲ್ಮೈಗಿಂತ 14 ಇಂಚುಗಳು (35 ಸೆಂಟಿಮೀಟರ್‌ಗಳು) ಕೆಳಗಿನ ಸರಾಸರಿ ತಾಪಮಾನ ಮೇಲ್ಮೈಗಿಂತ 40-45 ಕೆಲ್ವಿನ್‌ಗಳಷ್ಟು ಬೆಚ್ಚಗಿರುವುದು ಕಂಡುಬಂದಿದೆ.

ನಾಸಾ ಪ್ರಕಾರ, ಚಂದ್ರನ ಸಮಭಾಜಕ ವೃತ್ತದಲ್ಲಿ ಹಗಲಿನ ತಾಪಮಾನ 121 ಡಿಗ್ರಿ ಸೆಲ್ಸಿಯಸ್. ರಾತ್ರಿಯ ತಾಪಮಾನ -133 ಡಿಗ್ರಿ ಸೆಲ್ಸಿಯಸ್‌. ಬುಧ ಗ್ರಹದ ನಂತರ ಚಂದ್ರನ ಮೇಲ್ಮೈ ಸೌರವ್ಯೂಹದಲ್ಲಿ ಅತ್ಯಂತ ತೀವ್ರವಾದ ಉಷ್ಣ ವಾತಾವರಣವನ್ನು ಹೊಂದಿದೆ.

ಚಂದ್ರನ ಧ್ರುವಗಳ ಮೇಲೆ ಸೂರ್ಯನ ಉದಯದ ಕಿರಣಗಳು ಬೀಳುವುದಿಲ್ಲ. ಹಾಗಾಗಿ, ಇಲ್ಲಿ ತಾಪಮಾನ ಯಾವಾಗಲೂ 1.5 ಡಿಗ್ರಿ ಸೆಲ್ಸಿಯಸ್ ಮೀರುವುದಿಲ್ಲ. ಶಾಶ್ವತ ಕತ್ತಲೆಯಲ್ಲಿರುವ ಕೆಲವು ಕುಳಿಗಳು ಮಂಜುಗಡ್ಡೆಯ ಕಣಗಳನ್ನು ಹೊಂದಿರಬಹುದು. ಇದು ಚಂದ್ರನ ಮೇಲೆ ಮಾನವನ ಉಳಿವಿಗೆ ಪ್ರಮುಖವಾಗಬಹುದು ಎಂದು ಪ್ರೊಫೆಸರ್ ಮೋನಿಯರ್ ಅಭಿಪ್ರಾಯಪಟ್ಟಿದ್ದಾರೆ.

ಚಂದ್ರನಲ್ಲಿ ಮಾನವನ ಬದುಕು ಸಾಧ್ಯವೇ?: ಜೂನ್ 2009ರಲ್ಲಿ ಉಡಾವಣೆಯಾದ ಲೂನಾರ್ ರೆಕಾನೈಸನ್ಸ್ ಆರ್ಬಿಟರ್ (ಎಲ್​ಆರ್​ಒ) ಮೂಲಕ ನಾಸಾ ಚಂದ್ರನ ಮೇಲಿನ ತಾಪಮಾನವನ್ನು ಅಳೆಯಿತು. ಕೆಲವು ಕತ್ತಲೆಯ ಕುಳಿಗಳಂತಹ ಪ್ರದೇಶಗಳನ್ನು ಗುರುತಿಸಲು ಎಲ್​ಆರ್​ಒ ಆರ್ಬಿಟರ್ ತನ್ನ ಥರ್ಮಲ್ ಕ್ಯಾಮೆರಾ ಮತ್ತು ಡಿವೈನರ್ ಲೂನಾರ್ ರೇಡಿಯೋಮೀಟರ್ ಪ್ರಯೋಗವನ್ನು ಬಳಸಿತು. ಇದರಲ್ಲಿ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವುದು ಕಂಡುಬಂದಿದೆ. ಈ ಕುಳಿಗಳು ಮಾನವ ಆಶ್ರಯಕ್ಕೆ ಸೂಕ್ತವಾದ ಸ್ಥಳಗಳಾಗಿ ಕಾರ್ಯನಿರ್ವಹಿಸಬಹುದು ಎಂದು ಸಂಶೋಧನೆ ಹೇಳುತ್ತದೆ.

ಕತ್ತಲಿನಲ್ಲಿರುವ ಕುಳಿಗಳು ಅತ್ಯಂತ ತಂಪಾದ ತಾಪಮಾನವನ್ನು ಹೊಂದಿರಬಹುದು ಎಂಬುದು ಸಂಶೋಧಕರ ನಂಬುಕೆ. ಆದರೆ ಸೂರ್ಯನ ಬೆಳಕು ಆ ಕುಳಿಗಳಿಗೆ ತಲುಪುವುದಿಲ್ಲ. ಇದಲ್ಲದೆ ಇತರ ಪ್ರದೇಶಗಳ ಮೇಲೆ ಬಿದ್ದು ಪ್ರತಿಫಲಿಸುವ ಬೆಳಕು ಕೂಡ ಆ ಕುಳಿಗಳನ್ನು ತಲುಪುವುದಿಲ್ಲ. ಈ ಕುಳಿಗಳಲ್ಲಿನ ತಾಪಮಾನವನ್ನು ಇನ್ನೂ ನೇರವಾಗಿ ಅಳೆಯಲಾಗಿಲ್ಲ. ಆದರೆ ತಾಪಮಾನ ಮೈನಸ್ 248 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಚಂದ್ರನ ತಾಪಮಾನವು ಹೇಗೆ ಏರಿಳಿತಗೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಭವಿಷ್ಯದ ಪರಿಶೋಧನೆಗೆ ಬಹಳ ಮುಖ್ಯ. ಆದರೆ ಮನುಷ್ಯ ಚಂದ್ರನ ಮೇಲೆ ದೀರ್ಘಕಾಲ ಇರಬೇಕಾದರೆ ಅಲ್ಲಿನ ತಾಪಮಾನದ ಏರಿಳಿತಗಳನ್ನು ತಡೆದುಕೊಳ್ಳುವ ಉಪಕರಣಗಳನ್ನು ನಿರ್ಮಿಸಬೇಕಾಗುತ್ತದೆ ಎಂದು ಪ್ರೊಫೆಸರ್ ಮೋನಿಯರ್ ಹೇಳುತ್ತಾರೆ.

ಇದರ ಜೊತೆಗೆ, ಇನ್ಸುಲೆಟಿಂಗ್​ ರೆಗೋಲಿತ್ ವಿವಿಧ ಸಾಧನಗಳೊಂದಿಗೆ ಹೇಗೆ ಸಂವಹನ ನಡೆಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದೂ ಮುಖ್ಯ. ಇದು ಅಧಿಕ ಬಿಸಿಯಾಗುವುದನ್ನು ತಡೆಯುತ್ತದೆ ಎಂದು ಮೋನಿಯರ್​ ಹೇಳಿದರು.

ನಾವು ಚಂದ್ರನ ಮೇಲೆ ಶಾಶ್ವತ ನೆಲೆಯನ್ನು ಹೊಂದಬಯಸಿದರೆ ಅಥವಾ ವೈಜ್ಞಾನಿಕ ಉಪಕರಣಗಳೊಂದಿಗೆ ನೆಲೆ ಅಥವಾ ಪ್ರಯೋಗಾಲಯವನ್ನು ಸ್ಥಾಪಿಸಲು ಬಯಸಿದರೆ ಅಲ್ಲಿ ತಾಪಮಾನ ಹೇಗೆ ಬದಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲೇಬೇಕು. ಇದರಿಂದ ನಾವು ಚಂದ್ರನ ಮೇಲೆ ಉಳಿಯುವ ವಸ್ತುಗಳನ್ನು ತಯಾರಿಸಬಹುದು ಎಂದು ಪ್ರೊಫೆಸರ್ ಮೋನಿಯರ್ ಹೇಳಿದರು.

ಇದನ್ನೂ ಓದಿ: ಸ್ಪಡೆಕ್ಸ್ ಮಿಷನ್​: ಮತ್ತೆ ಡಾಕಿಂಗ್​ ಪ್ರಯೋಗ ಮುಂದೂಡಿದ ಇಸ್ರೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.