Maruti Swift ANCAP Rating:ಜಪಾನಿನ ವಾಹನ ತಯಾರಕರ ಅತ್ಯಂತ ಜನಪ್ರಿಯ ಮತ್ತು ಕೈಗೆಟುಕುವ ವಾಹನಗಳಲ್ಲಿ ಮಾರುತಿ ಸ್ವಿಫ್ಟ್ ಹೆಸರನ್ನು ಸೇರಿಸಲಾಗಿದೆ. ಭಾರತೀಯ ಮಾರುಕಟ್ಟೆಯಲ್ಲೂ ಈ ವಾಹನಕ್ಕೆ ಸಾಕಷ್ಟು ಬೇಡಿಕೆಯಿದೆ. ಈ ಕಾರನ್ನು ಜಪಾನ್ ಮತ್ತು ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದ ಅನೇಕ ದೇಶಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಕಾರು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನ ಮಾರುಕಟ್ಟೆಗಳಲ್ಲಿಯೂ ಲಭ್ಯವಿದೆ. ಈ ಕಾರಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಆಸ್ಟ್ರೇಲಿಯಾದಲ್ಲಿ ಪರೀಕ್ಷಿಸಲಾಯಿತು. ಆಸ್ಟ್ರೇಲಿಯನ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ (ANCAP) ಈ ಕಾರಿಗೆ ಕ್ರ್ಯಾಶ್ ಟೆಸ್ಟ್ಗಳಲ್ಲಿ ಕೇವಲ 1-ಸ್ಟಾರ್ ನೀಡಿದೆ.
ಮಾರುತಿ ಸ್ವಿಫ್ಟ್ ಸೇಫ್ಟಿ ರೇಟಿಂಗ್: ಮಾರುತಿ ಸ್ವಿಫ್ಟ್ ಅನ್ನು ಈಗಾಗಲೇ ಕ್ರ್ಯಾಶ್ ಟೆಸ್ಟ್ಗೆ ಒಳಪಡಿಸಲಾಗಿದೆ. ಯುರೋ ಎನ್ಕ್ಯಾಪ್ ಪರೀಕ್ಷೆಯಲ್ಲಿ ಈ ಕಾರು 3-ಸ್ಟಾರ್ಗಳನ್ನು ಪಡೆದುಕೊಂಡಿದೆ. ಆದರೆ, ಯುರೋ ಎನ್ಸಿಎಪಿ ಪರೀಕ್ಷೆಯಲ್ಲಿ ಬಳಸಲಾದ ಕಾರಿನ ವೈಶಿಷ್ಟ್ಯಗಳು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿ ಮಾರಾಟವಾಗುವ ಸ್ವಿಫ್ಟ್ಗಿಂತ ಸ್ವಲ್ಪ ಭಿನ್ನವಾಗಿವೆ. ಮಾರುತಿ ಸ್ವಿಫ್ಟ್ ಕಾರ್ಯಕ್ಷಮತೆಯ ಕುರಿತು ANCAP ನ ಸಿಇಒ ಅವರು ಕ್ರ್ಯಾಶ್ ಪರೀಕ್ಷೆಯ ವೇಳೆಯಲ್ಲಿ ಈ ವಾಹನವು ಶಕ್ತಿಯ ಕೊರತೆ ಹೊಂದಿದೆ ಎಂದು ಹೇಳಿದರು.
ಮಾರುತಿ ಸ್ವಿಫ್ಟ್ ಸ್ಕೋರ್ ಎಷ್ಟು?: ಆಸ್ಟ್ರೇಲಿಯಾದ NCAP ನಾಲ್ಕು ವಿಭಾಗಳಲ್ಲಿ ನಾಲ್ಕನೇ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ ಅನ್ನು ಪರೀಕ್ಷಿಸಿದೆ. ವಯಸ್ಕರ ನಿವಾಸಿಗಳ ರಕ್ಷಣೆ, ಮಕ್ಕಳ ನಿವಾಸಿಗಳ ರಕ್ಷಣೆ, ದುರ್ಬಲ ರಸ್ತೆ ಬಳಕೆದಾರರ ರಕ್ಷಣೆ ಮತ್ತು ಸೇಫ್ಟಿ ಅಸಿಸ್ಟ್ ಎಂಬ ವಿಭಾಗಳಲ್ಲಿ ಎಎನ್ಕ್ಯಾಪ್. ಹ್ಯಾಚ್ಬ್ಯಾಕ್ ಈ ವಿಭಾಗಗಳಲ್ಲಿ ಕ್ರಮವಾಗಿ 47%, 59%, 76% ಮತ್ತು 54% ಮಾರ್ಕ್ಸ್ ಗಳಿಸಿತು. ವಯಸ್ಕರ ಆಕ್ಯುಪೆನ್ಸಿ ವಿಭಾಗದಲ್ಲಿ ಮಾರುತಿ ಸ್ವಿಫ್ಟ್ 40 ರಲ್ಲಿ 18.88 ಅಂಕಗಳನ್ನು ಪಡೆದಿದೆ. ಈ ಕಾರು ಮುಂಭಾಗದ ಆಫ್ಸೆಟ್ ಬ್ಯಾರಿಯರ್ ಪರೀಕ್ಷೆಯಲ್ಲಿ 8 ಅಂಕಗಳಲ್ಲಿ 2.56, ಪೂರ್ಣ ಅಗಲದ ಮುಂಭಾಗದ ಪರೀಕ್ಷೆಯಲ್ಲಿ 8 ರಲ್ಲಿ 0, ಸೈಡ್ ಇಂಪ್ಯಾಕ್ಟ್ ಪರೀಕ್ಷೆಯಲ್ಲಿ 6 ರಲ್ಲಿ 5.51 ಮತ್ತು ಓರೆಯಾದ ಪೋಲ್ ಪರೀಕ್ಷೆಯಲ್ಲಿ 6ಕ್ಕೆ 6 ಅಂಕಗಳನ್ನು ಪಡೆದುಕೊಂಡಿದೆ. ಈ ಮಾರುತಿ ವಾಹನವು ಮುಂಭಾಗದ ಪ್ರಯಾಣಿಕರಿಗೆ ವಿಪ್ಲ್ಯಾಶ್ ರಕ್ಷಣೆಯಲ್ಲಿ 4 ರಲ್ಲಿ 3.97 ಅಂಕಗಳನ್ನು ಮತ್ತು ರೆಸ್ಕ್ಯೂ ಪರೀಕ್ಷೆಯಲ್ಲಿ 4 ರಲ್ಲಿ 0.83 ಅಂಕಗಳನ್ನು ಗಳಿಸಿದೆ.