ETV Bharat / bharat

ಗಂಡು ಮಗುವಿಗಾಗಿ ಜೀವಂತ ಕೋಳಿ ನುಂಗಿ ಪ್ರಾಣ ಕಳೆದುಕೊಂಡ ವ್ಯಕ್ತಿ - MAN SWALLOWS LIVE CHICKEN

ಗಂಡು ಮಗುವಿಗೆ ಹಪಹಪಿಸುತ್ತಿದ್ದ ವ್ಯಕ್ತಿ ತಾಂತ್ರಿಕ್‌ವೊಬ್ಬನನ್ನು ಭೇಟಿಯಾಗಿ ​ಪರಿಹಾರ ಕೇಳಿದಾಗ, ಆತ ಜೀವಂತ ಕೋಳಿಯನ್ನು ನುಂಗಲು ಸೂಚಿಸಿದ್ದನಂತೆ.

man-swallowed-live-chicken-in-surguja-he-lost-his-life-due-to-superstition-forensic-team-is-also-surprised
ಕೋಳಿ (ಸಂಗ್ರಹ ಚಿತ್ರ) (ANI)
author img

By ETV Bharat Karnataka Team

Published : Dec 17, 2024, 3:36 PM IST

ಸುರ್ಗುಜಾ(ಛತ್ತೀಸ್​ಗಢ): ಮಾಟಗಾರನ ಸಲಹೆಯಂತೆ ಜೀವಂತ ಕೋಳಿ ನುಂಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಛತ್ತೀಸ್​ಗಢದ ಸುರ್ಗುಜಾದಲ್ಲಿ ನಡೆದಿದೆ.

ಏನಿದು ಘಟನೆ?: ಇಲ್ಲಿನ ಛಿಂದಕಲೊ ಗ್ರಾಮದ ಆನಂದ್​ ಕುಮಾರ್​ ಯಾದವ್​ ಸಾವನ್ನಪ್ಪಿದ ವ್ಯಕ್ತಿ. ಗಂಡು ಮಗುವಿಗೆ ಹಪಹಪಿಸುತ್ತಿದ್ದ ಈತ ತಾಂತ್ರಿಕ್​ (ಮಾಟಗಾರ)ವೊಬ್ಬನ ಮೊರೆ ಹೋಗಿದ್ದಾನೆ. ಆಗ ಆತ ಜೀವಂತ ಕೋಳಿಯನ್ನು ನುಂಗಲು ಸಲಹೆ ನೀಡಿದ್ದಾನೆ. ಅದರನುಸಾರ ಡಿಸೆಂಬರ್​ 14ರಂದು ಆನಂದ್,​ ಜೀವಂತ ಕೋಳಿ ತಿಂದು ಪ್ರಜ್ಞೆ ತಪ್ಪಿ, ಕುಸಿದು ಬಿದ್ದಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ತಕ್ಷಣಕ್ಕೆ ಆತನನ್ನು ಅಂಬಿಕಪುರ್​​ನಲ್ಲಿನ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಅಚ್ಚರಿ ವ್ಯಕ್ತಪಡಿಸಿದರು. ಆತನ ಎಲ್ಲಾ ಅಂಗಾಂಗಗಳನ್ನು ಪರೀಕ್ಷಿಸಿದಾಗ ಯಾವುದೇ ವೈದ್ಯಕೀಯ ಸಮಸ್ಯೆ ಕಂಡುಬಂದಿರಲಿಲ್ಲ. ಬಳಿಕ ಕುತ್ತಿಗೆ ಸೀಳಿದಾಗ ಜೀವಂತ ಕೋಳಿ ಸಿಲುಕಿರುವುದು ಗೊತ್ತಾಯಿತು. ಆನಂದ್‌ನ ಶ್ವಾಸನಾಳ ಮತ್ತು ಅನ್ನನಾಳದಲ್ಲಿ ಕೋಳಿ U ಆಕಾರದಲ್ಲಿ ಸಿಲುಕಿಕೊಂಡ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಗಂಟಲಿನಲ್ಲಿ ಕೋಳಿ ಸಿಲುಕಿ ನುಂಗಲು ಸಾಧ್ಯವಾಗದೇ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ.

ಎಎಸ್​ಪಿ ಅಮೊಲಕ್​ ಸಿಂಗ್​ ದಿಲೊನ್​ ಮಾತನಾಡಿ, "ಅಂತಿಮ ಮರಣೋತ್ತರ ಪರೀಕ್ಷಾ ವರದಿಗೆ ಕಾಯುತ್ತಿದ್ದೇವೆ. ಇದು ಜನರಲ್ಲಿರುವ ಮೌಢ್ಯದ ಅಭ್ಯಾಸಗಳು ಮತ್ತು ಅದರಿಂದ ಎದುರಾಗುವ ಅಪಾಯವನ್ನು ತೋರಿಸುತ್ತಿದೆ" ಎಂದರು.

"ಆನಂದ್​ ಕೋಳಿ ನುಂಗಿರುವ ಕುರಿತು ನಮಗೆ ತಿಳಿದಿಲ್ಲ. ಈ ಬಗ್ಗೆ ಯಾವ ಸುಳಿವು ಕೂಡಾ ನಮಗಿಲ್ಲ" ಕುಟುಂಬಸ್ಥರು ಪ್ರತಿಕ್ರಿಯಿಸಿದ್ದಾರೆ. ಆದರೆ ಸ್ಥಳೀಯರ ಪ್ರಕಾರ, ಆನಂದ್​ ಗಂಡು ಮಗುವಿಗಾಗಿ ಹಪಹಪಿಸುತ್ತಿದ್ದ. ಇದೇ ಕಾರಣಕ್ಕೆ ಈ ರೀತಿಯ ಮೌಢ್ಯಕ್ಕೆ ಬಲಿಯಾಗಿದ್ದಾನೆ.

ಇದನ್ನೂ ಓದಿ: ಅಯ್ಯೋ ಪಾಪ ಅಂತಾ ಭಿಕ್ಷೆ ಕೊಟ್ರಾ, ಇನ್ನು ನಿಮ್ ಮೇಲೆ ಕೇಸ್​ ಬೀಳುತ್ತೆ ಹುಷಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.