ಕರ್ನಾಟಕ

karnataka

ETV Bharat / technology

ನೀವು ಅತಿಯಾಗಿ ಫೋನ್​ ಬಳಸ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ! - How To Control Cell Phone Usage - HOW TO CONTROL CELL PHONE USAGE

ದಿನದಲ್ಲಿ ಕನಿಷ್ಠ ಕೆಲವು ಗಂಟೆಗಳಷ್ಟಾದರೂ ಸ್ಮಾರ್ಟ್​ಫೋನ್​ ಬಳಕೆಯಿಂದ ದೂರು ಇರುವಂತೆ ನೋಡಿಕೊಳ್ಳಿ. ಇದು ಸಾಧ್ಯವಾಗುತ್ತಿಲ್ಲ ಎಂದರೆ, ಕೆಲವು ಸರಳ ಮಾರ್ಗಗಳನ್ನು ಪಾಲಿಸಿ.

How To Control Cell Phone Usage
ಮೊಬೈಲ್​ನಿಂದ ಬಳಕೆ ದೂರಾಗಲು ಸಲಹೆ (GettyImages)

By ETV Bharat Karnataka Team

Published : Jun 24, 2024, 11:15 AM IST

ಹೈದರಾಬಾದ್​: ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯೋಮಾನದವರಲ್ಲೂ ಸಾಮಾನ್ಯವಾಗಿರುವ ಚಟ ಎಂದರೆ, ಅದು ಸೆಲ್​ ಫೋನ್​ ಬಳಕೆ. ಇದನ್ನು ಬಳಸುತ್ತಾ ಕುಳಿತುಕೊಂಡರೆ ಸಮಯ ಕಳೆಯುವುದೇ ತಿಳಿಯುವುದಿಲ್ಲ. ಈ ಸೆಲ್​ ಫೋನ್​ಗಳ ಅತಿಯಾದ ಬಳಕೆ ಚಟವಾಗಿದ್ದು, ಇದು ಅನೇಕ ಆರೋಗ್ಯ ಸಮಸ್ಯೆ ಮತ್ತು ರೋಗಕ್ಕೆ ಕೂಡ ಕಾರಣವಾಗುತ್ತಿದೆ. ಈ ಬಗ್ಗೆ ವೈದ್ಯರು ಕೂಡ ಕಾಳಜಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಪ್ರಜ್ಞಾಪೂರ್ವಕವಾಗಿ ಇದರ ಬಳಕೆಯಿಂದ ದೂರಾಗುವುದು ಅಗತ್ಯವಾಗಿದೆ. ಈ ಕುರಿತು ಮಾರ್ಗವನ್ನು ಹುಡುಕುತ್ತಿದ್ದರೆ, ಇಲ್ಲಿದೆ ಸರಳ ಉಪಾಯ.

ದಿನದಲ್ಲಿ ಕನಿಷ್ಠ ಕೆಲವು ಗಂಟೆಗಳನ್ನು ಸ್ಮಾರ್ಟ್​ಫೋನ್​ ಬಳಕೆಯಿಂದ ದೂರು ಇರುವಂತೆ ನೋಡಿಕೊಳ್ಳಿ. ಇದು ಸಾಧ್ಯವಾಗುತ್ತಿಲ್ಲ ಎಂದರೆ ಕ್ವಾಲಿಟಿ ಟೈಮ್​ ಅಂಡ್​ ಮೊಮೆಟ್​ನಂತಹ ಆಪ್​ ಡೌನ್​ಲೋಡ್​ ಮಾಡಿ, ಸೆಲ್​ ಫೋನ್​ ಬಳಕೆಯನ್ನು ನಿರ್ವಹಿಸಿ. ಜೊತೆಗೆ ಈ ಆಪ್​ಗಳ ನೋಟಿಫಿಕೇಷನ್​ ಆನ್​ನಲ್ಲಿರುವಂತೆ ನೋಡಿಕೊಳ್ಳಿ. ಜೊತೆಗೆ ಇತರ ನಿಮ್ಮ ಹವ್ಯಾಸದ ಮೇಲೆ ಗಮನವಿಡಿ, ಅದರಲ್ಲಿ ತಲ್ಲೀನರಾಗಿ. ಇದರಿಂದ ಫೋನ್​ ಚಟದಿಂದ ಕ್ಷಣಕಾಲದವರೆಗೆ ಮುಕ್ತಿ ಪಡೆಯಬಹುದು.

ಬಳಕೆ ಸಮಯ ನಿರ್ವಹಿಸಿ:ನಿತ್ಯ ನೀವು ಎಷ್ಟು ಸಮಯ ಮೊಬೈಲ್ ಬಳಕೆ ಮಾಡುತ್ತೀರಾ ಎಂದು ಪರಿಶೀಲಿಸಿ. ಬಳಿಕ ನಿಧಾನವಾಗಿ ಅದರ ಬಳಕೆಯನ್ನು ದಿನದಿಂದ ದಿನಕ್ಕೆ ಕಡಿಮೆ ಮಾಡಿ. ಕೆಲವು ನಿರ್ದಿಷ್ಟ ಆಪ್​ಗಳ ಮೂಲಕ ನಿಮ್ಮ ಬಳಕೆ ಸಮಯವನ್ನು ನಿರ್ವಹಣೆ ಮಾಡಬಹುದಾಗಿದೆ.

ನೋಟಿಫೀಕೇಷನ್​ ಆಫ್​​ ಮಾಡಿ: ನಿಮ್ಮ ಮೊಬೈಲ್​ನಲ್ಲಿರುವ ನೋಟಿಫೀಕೇಷನ್​ ಅನ್ನು ಆಫ್​ ಮಾಡಿ. ಇಲ್ಲದೇ ಹೋದಲ್ಲಿ, ಪ್ರತಿಬಾರಿ ನೋಟಿಫಿಕೇಷನ್​ ಬಂದಾಗ ಕೈಗೆ ಎತ್ತಿಕೊಂಡು ಅದರ ಬಳಕೆಗೆ ಮುಂದಾಗಿ ಮಗ್ನರಾಗುತ್ತೀರಿ. ಈ ಹಿನ್ನೆಲೆಯಲ್ಲಿ ಮೊಬೈಲ್​ನಲ್ಲಿರುವ ಆ್ಯಪ್​​​ಗಳ ನೋಟಿಫಿಕೇಷನ್​ ಆಫ್​ ಮಾಡಿ.

ಆಲರಾಂ ಸೆಟ್​ ಮಾಡಬೇಡಿ: ಮೊಬೈಲ್​ನಲ್ಲಿ ಆಲರಾಂ ಸೆಟ್​ ಮಾಡುವುದನ್ನು ನಿಲ್ಲಿಸಿ. ಕಾರಣ ಮೊಬೈಲ್​ ಆಲರಾಂ ಹೊಡೆದಾಕ್ಷಣ ಅದನ್ನು ನಿಲ್ಲಿಸಿ, ಅನೇಕ ಮಂದಿ ಸಾಮಾಜಿಕ ಮಾಧ್ಯಮದತ್ತ ಹೊರಳುತ್ತಾರೆ. ಇದರಿಂದ ಬೆಳ್ಳಂಬೆಳಗ್ಗೆಯಿಂದಲೇ ಮೊಬೈಲ್​ ಬಳಕೆ ಆರಂಭವಾಗುತ್ತದೆ. ಈ ಹಿನ್ನೆಲೆಯಲ್ಲಿ ಅಲರಾಂಗೆ ಬೇರೆ ಸಾಧನವನ್ನು ಬಳಕೆ ಮಾಡುವುದು ಉತ್ತಮ.

ಸಂದೇಶಕ್ಕೆ ಸಮಯ ನಿಗದಿಸಿ: ಫೇಸ್​ಬುಕ್​, ವಾಟ್ಸ್​ಆ್ಯಪ್​​ ಮತ್ತು ಕೆಲಸದ ನಿಮಿತ್ತದ ಇ ಮೇಲ್​ ಸಂದೇಶಗಳಿಗೆ ಸಂದೇಶ ಕಳುಹಿಸಲು ನಿಯಮಿತ ಸಮಯ ನಿಗದಿ ಮಾಡಿಕೊಳ್ಳಿ. ಇಲ್ಲದೇ ಹೋದಲ್ಲಿ, ಇಡೀ ದಿನ ನೀವು ರಿಪ್ಲೆ ಮಾಡುವುದರಲ್ಲಿಯೇ ದಿನ ಕಳೆದು, ಮೊಬೈಲ್​ ಬಳಕೆ ಹೆಚ್ಚಾಗುತ್ತದೆ. ತುರ್ತು ಪ್ರತಿಕ್ರಿಯೆ ಸಂದೇಶದ ಹೊರತಾಗಿ ಉಳಿದವುಗಳಿಗೆ ಸಮಯ ನಿಗದಿಸುವುದು ಉತ್ತಮ ಮಾರ್ಗ ಆಗಲಿದೆ.

ದಿನಕ್ಕೆ ಒಂದಷ್ಟು ಸಮಯ ಮೊಬೈಲ್​ ಆಫ್​ ಮಾಡಿ: ದಿನದಲ್ಲಿ ಒಂದಷ್ಟು ಸಮಯ ಉದ್ದೇಶ ಪೂರ್ವಕವಾಗಿ ಮೊಬೈಲ್​ ಆಫ್​ ಮಾಡಿ. ಅದು ಮಧ್ಯಾಹ್ನದ ನಿದ್ರೆ ಅಥವಾ ತಿನ್ನುವ ಸಮಯ ಆಗಿರಬಹುದು. ಇದರಿಂದ ಕೂಡ ಮೊಬೈಲ್​ ಬಳಕೆಗೆ ಕಡಿವಾಣ ಹಾಕಬಹುದು.

ಚಾರ್ಜ್​​​​​​​​​​​​ಗೆ ಈ ಕ್ರಮ ಅನುಸರಿಸಿ: ನಿಮ್ಮ ಫೋನ್​ ಚಾರ್ಜರ್​ ಅನ್ನು ದೂರವಿಡಿ. ಇದರಿಂದ ಚಾರ್ಜಿಂಗ್​ ಸಮಯದಲ್ಲಿ ಮೊಬೈಲ್​ ಬಳಕೆ ಮಾಡದಂತೆ ಮುನ್ನೆಚ್ಚರಿಕೆ ವಹಿಸಬಹುದು.

ಮಾನಸಿಕ ಸಿದ್ಧತೆ: ಮೊಬೈಲ್​ನಿಂದ ದೂರ ಇಡಲು ಏನೇ ಸಲಹೆ ನೀಡಿದರೂ ಅದರ ಪಾಲನೆಗೆ ಮಾನಸಿಕವಾಗಿ ಸಿದ್ಧವಾಗುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ತಯಾರಿ. ಮೊಬೈಲ್​ನಿಂದ ದೂರ ಇರಬಲ್ಲೆ ಎಂದು ನಿರ್ಧರಿಸಿ, ಉದ್ದೇಶಪೂರ್ವಕವಾಗಿ ಅದರಿಂದ ದೂರಾಗಿ.

ಈ ರೀತಿ ಯೋಚಿಸಿ: ಅನೇಕ ಜನರು ಸಾಮಾಜಿಕ ಜಾಲತಾಣದ ಮೂಲಕ ಪ್ರಮುಖ ಸುದ್ದಿ, ಅಪ್ಡೇಟ್​ಗಳು ಮಿಸ್​ ಆಗಬಾರದು ಎಂಬ ಕಾರಣಕ್ಕೆ ಸದಾ ಮೊಬೈಲ್​ನಲ್ಲಿಯೇ ಮುಳುಗುತ್ತಾರೆ. ಆದರೆ, ಇವುಗಳನ್ನು ಒಂದೆರಡು ಗಂಟೆ ನೋಡದೇ ಹೋದರೆ, ಯಾವುದೇ ಹಾನಿ ಸಂಭವಿಸುವುದಿಲ್ಲ ಎಂದು ಮನವರಿಕೆ ಮಾಡಿಕೊಳ್ಳಿ. ಇದರಿಂದ ತಕ್ಷಣಕ್ಕೆ ಫೋನ್​ ಬಳಕೆಯಿಂದ ದೂರಾಗಬಹುದು.

ಸಾಮಾಜಿಕ ಜಾಲತಾಣದ ಬಳಕೆಗೆ ಇರಲಿ ಮಿತಿ: ಅನೇಕ ಜನರು ಫೋನ್​ ಬಳಕೆಗೆ ಕಾರಣ ಸಾಮಾಜಿಕ ಜಾಲತಾಣ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆ ಕಡಿಮೆ ಮಾಡುವುದು ಸರ್ವತೋಮುಖ ಆರೋಗ್ಯಕ್ಕೂ ಕೂಡ ಉತ್ತಮ.

ಮಕ್ಕಳ ಜೊತೆ ಜಾಗೃತಿ ಇರಲಿ: ಅನೇಕ ಮಕ್ಕಳು ಕೂಡ ಇಂದು ಮೊಬೈಲ್​ ಚಟಕ್ಕೆ ಒಳಗಾಗುತ್ತಿದ್ದಾರೆ. ಮಕ್ಕಳಿಗೆ ಕೆಲವು ಆ್ಯಪ್​​ಗಳ ಹೊರತಾಗಿ ಅವರು ಅತಿಯಾಗಿ ನೋಡುವ ಆ್ಯಪ್​​ಗಳು ಸಿಗದಂತೆ ನಿಯಂತ್ರಿಸಿ. ಜೊತೆಗೆ ಎಷ್ಟು ಸಮಯ ಮೊಬೈಲ್​ ನೋಡುವುದರಿಂದ ಏನಾಗಲಿದೆ ಎಂದು ತಿಳಿಸಿದೆ.

ನಿಯಮ ರೂಪಿಸಿ:ಕುಟುಂಬ ಸದಸ್ಯರನ್ನು ದೂರಾಗಿಸಿರುವ ಈ ಫೋನ್​ ಅನ್ನು ಸದಸ್ಯರು ಒಟ್ಟಿಗೆ ಸೇರಿದಾಗ ಅದನ್ನು ಸ್ವಿಚ್ಡ್​​ ಆಫ್​ ಮಾಡಬೇಕು. ಅಥವಾ ಸಂಜೆ 7ಗಂಟೆ ಬಳಿಕ ಇಲ್ಲ ಊಟದ ಸಮಯದಲ್ಲಿ ಪ್ರತಿಯೊಬ್ಬರು ಮೊಬೈಲ್ ಬಳಕೆ ಮಾಡದಂತೆ ನಿಯಮ ರೂಪಿಸಿ.

ವಿದ್ಯಾರ್ಥಿಗಳಿಂದ ದೂರವಿಡಿ: ಮಕ್ಕಳು ಶಾಲೆಗೆ ಮೊಬೈಲ್​ ಕೊಂಡೊಯ್ಯುತ್ತಿದ್ದರೆ, ಈ ಸಂಬಂಧ ಪ್ರಾಂಶುಪಾಲರಿಗೆ ತಿಳಿಸುವುದಾಗಿ ಹೇಳಿ. ಅವರ ಸಾಮಾಜಿಕ ಜಾಲತಾಣದ ಮೇಲೆ ಒಂದು ಕಣ್ಣೀಡಿ. ಪೇರೇಟ್ಸ್​ ಕಂಟ್ರೋಲ್​ನ ಕೆಲವು ನೀತಿ ಅನುಸರಿಸಿ. ​

ಇದನ್ನೂ ಓದಿ: ನಿಮ್ಮ ಮೊಬೈಲ್ ಕಳುವಾಗಿದೆಯೇ ? ಹಾಗಾದ್ರೆ ಸಿಇಐಆರ್ ಪೋರ್ಟಲ್​ಗೆ ದೂರು ನೀಡಿ

ABOUT THE AUTHOR

...view details