Mahindra Veero CNG Launched:ದೇಶೀಯ ವಾಹನ ತಯಾರಕ ಮಹೀಂದ್ರಾ ತನ್ನ ಹೊಸ ವೀರೋ ಸಿಎನ್ಜಿ ಲೈಟ್ ಕಮರ್ಶಿಯಲ್ ವಾಹನವನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಇದನ್ನು ಮೊದಲು ಸೆಪ್ಟೆಂಬರ್ 2024 ರಲ್ಲಿ ಪ್ರದರ್ಶಿಸಲಾಗಿದ್ದು, ಸದ್ಯ ಇದರ ಮಾರಾಟ ಪ್ರಾರಂಭವಾಗುತ್ತಿದೆ. ಕಂಪನಿಯು ಮಹೀಂದ್ರಾ ವೀರೋ ಸಿಎನ್ಜಿಯನ್ನು ಎರಡು ರೂಪಾಂತರಗಳಲ್ಲಿ ಹೊರ ತಂದಿದೆ.
ಬೇಸ್ 1.4 XXL SD V2 CNG ರೂಪಾಂತರದ ಬೆಲೆ 8.99 ಲಕ್ಷ ರೂ. (ಎಕ್ಸ್ ಶೋ ರೂಂ), ಟಾಪ್-ಸ್ಪೆಕ್ 1.4 XXL SD V4 (A) CNG ರೂಪಾಂತರದ ಬೆಲೆ 9.39 ಲಕ್ಷ ರೂ. (ಎಕ್ಸ್ ಶೋ ರೂಂ) ಆಗಿದೆ.
ಮಹೀಂದ್ರಾ ವೀರೋ 250 ಸಿಸಿ :ಮಹೀಂದ್ರಾ ಈಗಾಗಲೇ 3.5 ಟನ್ಗಳಿಗಿಂತ ಕಡಿಮೆ ತೂಕದ ಲಘು ವಾಣಿಜ್ಯ ವಾಹನ ವಿಭಾಗದಲ್ಲಿ ಮುಂಚೂಣಿಯಲ್ಲಿದೆ. ಅಲ್ಲಿ ಶೇಕಡ 51.2 ಮಾರುಕಟ್ಟೆ ಪಾಲನ್ನು ಹೊಂದಿದೆ. ಹೊಸ ಮಹೀಂದ್ರಾ ವೀರೋ ಸಿಎನ್ಜಿಯೊಂದಿಗೆ ಕಂಪನಿಯು ಈ ವಿಭಾಗದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಇದು ಭಾರತೀಯ ಮಾರುಕಟ್ಟೆಗಳಲ್ಲಿ ನಿರಂತರವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಇದು ಇ-ಕಾಮರ್ಸ್ ವ್ಯವಹಾರಗಳಿಗೆ ಸೂಕ್ತವಾಗಿದೆ.
ಮಹೀಂದ್ರಾ ವೀರೋವನ್ನು ಕಂಪನಿಯ ಮಾಡ್ಯುಲರ್ ಅರ್ಬನ್ ಪ್ರಾಸ್ಪರ್ ಪ್ಲಾಟ್ಫಾರ್ಮ್ (UPP) ಮೇಲೆ ನಿರ್ಮಿಸಲಾಗಿದೆ. ಸುರಕ್ಷತೆ, ಸಾಮರ್ಥ್ಯ ಮತ್ತು ಇಂಧನ ದಕ್ಷತೆಯ ವಿಷಯದಲ್ಲಿ ಹೊಸ ಮಾನದಂಡಗಳನ್ನು ಪರಿಚಯಿಸುವ ಮೂಲಕ ಇದು ಲಘು ವಾಣಿಜ್ಯ ವಾಹನ ವಿಭಾಗವನ್ನು ಮರು ವ್ಯಾಖ್ಯಾನಿಸುತ್ತದೆ. ಇದರ ಕ್ಯಾಬಿನ್ನ ಸೌಕರ್ಯವನ್ನು ಮತ್ತಷ್ಟು ಸುಧಾರಿಸಲಾಗಿದೆ. ಅಷ್ಟೇ ಅಲ್ಲ, ಚಾಲಕನ ಸೌಕರ್ಯ ಮತ್ತು ಸುರಕ್ಷತೆಗೆ ವಿಶೇಷ ಗಮನ ನೀಡಲಾಗಿದೆ. ಇದರ ಜೊತೆಗೆ ಈ ವಿಭಾಗದಲ್ಲಿ ಮೊದಲ ಬಾರಿಗೆ ನೀಡಲಾಗಿರುವ ಹಲವು ವೈಶಿಷ್ಟ್ಯಗಳು ಉಪಯುಕ್ತವಾಗಿವೆ.
ಮಹೀಂದ್ರಾ ವೀರೋದ ಪೇಲೋಡ್ ಸಾಮರ್ಥ್ಯ 1.4 ಟನ್ಗಳು. ಇದು 3035 ಮಿ.ಮೀ ಸರಕು ಉದ್ದವನ್ನು ಹೊಂದಿದ್ದು, ಇದು ಅನೇಕ ಅನ್ವಯಿಕೆಗಳಿಗೆ ಸೂಕ್ತವಾಗಿದೆ. ಇದಲ್ಲದೆ, ಇದು ಮೂರು ಆಸನಗಳ ದೊಡ್ಡ ಕ್ಯಾಬಿನ್ ಹೊಂದಿದೆ. ರಿಕ್ಲೈನಿಂಗ್ ಡ್ರೈವರ್ ಸೀಟ್, TFT ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಅಷ್ಟೇ ಅಲ್ಲ ಏರ್ ಕಂಡಿಷನ್ ಫೀಚರ್ ಸಹ ಲಭ್ಯವಿದೆ. ಕಂಪನಿಯು ಇದರಲ್ಲಿ 10.25-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಪವರ್ ವಿಂಡ್ಸೋ ಮತ್ತು ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್ಗಳನ್ನು ಸಹ ಸೇರಿಸಿದೆ.