ಕರ್ನಾಟಕ

karnataka

ETV Bharat / technology

ಥಾರ್​ಗೆ ಮನಸೋತ ಗ್ರಾಹಕರು; 2 ಲಕ್ಷ ಯುನಿಟ್​ ಮಾರಾಟ ಮಾಡಿದ ಮಹೀಂದ್ರ! - MAHINDRA THAR SALES

ಸ್ಟೈಲಿಶ್​ ಎಸ್​ಯುವಿ ಮಹೀಂದ್ರ ಥಾರ್​​ಗೆ ಫಿದಾ ಆದವರೇ ಹೆಚ್ಚು. ಅದರು ಸ್ಟೈಲಿಶ್​ ಲುಕ್​ಗೆ ಜನ ಮನಸೋಲುವುದು ನಿಜ. ಈಗ ಈ ಮಹೀಂದ್ರ ಥಾರ್​ ಮಾರುಕಟ್ಟೆಯಲ್ಲಿ 2 ಲಕ್ಷ ಯುನಿಟ್​ ಎಸ್​ಯುವಿ ಮಾರಾಟ ಮಾಡಿದೆ.

MAHINDRA THAR PRICE  MAHINDRA THAR SALES MILESTONE  MAHINDRA AND MAHINDRA
ಮಹೀಂದ್ರ ಥಾರ್​ (Mahindra & Mahindra)

By ETV Bharat Tech Team

Published : Nov 19, 2024, 1:56 PM IST

MAHINDRA THAR SALES:ಡ್ಯಾಶಿಂಗ್ ಆಫ್ ರೋಡಿಂಗ್ ಎಸ್‌ಯುವಿ ಮಹೀಂದ್ರ ಥಾರ್ ಪ್ರಾರಂಭವಾದಾಗಿನಿಂದ ಭಾರತೀಯ ಗ್ರಾಹಕರಲ್ಲಿ ಅತ್ಯಂತ ಜನಪ್ರಿಯವಾಗಿದೆ. ಮಹೀಂದ್ರ ಥಾರ್ ದೇಶೀಯ ಮಾರುಕಟ್ಟೆಯಲ್ಲಿ 2 ಲಕ್ಷ ಯುನಿಟ್ ಎಸ್‌ಯುವಿ ಮಾರಾಟವನ್ನು ದಾಟಿದೆ. ಆಟೋಕಾರ್ ಇಂಡಿಯಾದಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಇತ್ತೀಚಿಗೆ ಬಿಡುಗಡೆಯಾದ 5-ಡೋರ್​ ಮಹೀಂದ್ರ ಥಾರ್ ರಾಕ್ಸ್ ಅನ್ನು ಸಹ ಈ ಮಾರಾಟದಲ್ಲಿ ಸೇರಿಸಲಾಗಿದೆ. ಅಕ್ಟೋಬರ್ 2024 ರ ಅಂತ್ಯದ ವೇಳೆಗೆ ಮಹೀಂದ್ರ ಥಾರ್ ಮತ್ತು ಥಾರ್ ರಾಕ್ಸ್ ಒಟ್ಟು 2,07,110 ಯುನಿಟ್ ಎಸ್‌ಯುವಿಗಳನ್ನು ಮಾರಾಟ ಮಾಡಿದೆ.

ಮಹೀಂದ್ರ ಥಾರ್ ಮಾರಾಟ ಹೀಗಿದೆ:2021 ರ ಹಣಕಾಸು ವರ್ಷದಲ್ಲಿ ಮಹೀಂದ್ರ ಥಾರ್ ಒಟ್ಟು 14,186 ಯುನಿಟ್ ಎಸ್‌ಯುವಿಗಳನ್ನು ಮಾರಾಟ ಮಾಡಿತ್ತು. 2022 ರ ಹಣಕಾಸು ವರ್ಷದಲ್ಲಿ, ಮಹೀಂದ್ರ ಥಾರ್ ಒಟ್ಟು 37,844 ಗ್ರಾಹಕರನ್ನು ಪಡೆದುಕೊಂಡಿತ್ತು. 2023 ರ ಹಣಕಾಸು ವರ್ಷದಲ್ಲಿ, ಮಹೀಂದ್ರ ಥಾರ್ ಒಟ್ಟು 47,108 ಯುನಿಟ್ ಎಸ್‌ಯುವಿಗಳನ್ನು ಮಾರಾಟ ಮಾಡಿದೆ. ಆದ್ರೆ 2024 ರ ಹಣಕಾಸು ವರ್ಷದಲ್ಲಿ, ಮಹೀಂದ್ರ ಥಾರ್ ಒಟ್ಟು 65,246 ಹೊಸ ಗ್ರಾಹಕರನ್ನು ಸೆಳೆದಿದೆ. ಮತ್ತೊಂದೆಡೆ, 2025 ರ ಹಣಕಾಸು ವರ್ಷದ ಏಪ್ರಿಲ್ ನಿಂದ ಅಕ್ಟೋಬರ್ ತಿಂಗಳ ಅವಧಿಯಲ್ಲಿ, ಮಹೀಂದ್ರ ಥಾರ್ ಮತ್ತು ಥಾರ್ ರಾಕ್ಸ್ ಇದುವರೆಗೆ 42,726 ಗ್ರಾಹಕರನ್ನು ಪಡೆದಿವೆ.

ಮಹೀಂದ್ರ ಥಾರ್ ವೈಶಿಷ್ಟ್ಯಗಳು: ಭಾರತೀಯ ಗ್ರಾಹಕರಲ್ಲಿ ಮಹೀಂದ್ರ ಥಾರ್ 2 ರೂಪಾಂತರಗಳು ಮತ್ತು 5 ಕಲರ್​ಗಳ ಆಯ್ಕೆಗಳಲ್ಲಿ ಲಭ್ಯವಿದೆ. ನಾವು ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ ಮಹೀಂದ್ರ ಥಾರ್ 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಕನೆಕ್ಟಿವಿಟಿ, ಆಟೋಮೆಟಿಕ್​ ಎಸಿ, ಕ್ರೂಸ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್​ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸಹ ಹೊಂದಿದೆ. ಇದಲ್ಲದೆ, ಕಾರು ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಮತ್ತು ಮುಂಭಾಗದ ಸೀಟ್ ಬೆಲ್ಟ್ ರಿಮೈಂಡರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರ ಥಾರ್ ಫೋರ್ಸ್ ಗೂರ್ಖಾ ಮತ್ತು ಮಾರುತಿ ಸುಜುಕಿ ಜಿಮ್ನಿಯೊಂದಿಗೆ ಸ್ಪರ್ಧಿಸುತ್ತದೆ.

SUV ಪವರ್‌ಟ್ರೇನ್:ನಾವು ಪವರ್‌ಟ್ರೇನ್ ಬಗ್ಗೆ ಮಾತನಾಡುವುದಾದ್ರೆ, ಕಾರು 3 ಎಂಜಿನ್​ಗಳ ಆಯ್ಕೆಯನ್ನು ಹೊಂದಿದೆ. ಮೊದಲನೆಯದು 2.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು 150bhp ಗರಿಷ್ಠ ಶಕ್ತಿ ಮತ್ತು 320Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎರಡನೆಯದು 2.2-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, ಇದು ಗರಿಷ್ಠ 130bhp ಶಕ್ತಿಯನ್ನು ಮತ್ತು 300Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವಿದೆ. ಇದಲ್ಲದೆ, ಕಾರು ಮೂರನೇ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಸಹ ಹೊಂದಿದೆ. ಇದು ಗರಿಷ್ಠ 118bhp ಶಕ್ತಿಯನ್ನು ಮತ್ತು 300Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರ ಥಾರ್‌ನ ಆರಂಭಿಕ ಎಕ್ಸ್ ಶೋ ರೂಂ ಬೆಲೆಯು ಟಾಪ್ ಮಾಡೆಲ್‌ಗೆ ರೂ 11.35 ಲಕ್ಷದಿಂದ ರೂ 17.60 ಲಕ್ಷದವರೆಗೆ ಇರುತ್ತದೆ.

ಓದಿ:ಭಾರತದ ಉಪಗ್ರಹ ಹೊತ್ತೊಯ್ದ ಸ್ಪೇಸ್​ ಎಕ್ಸ್​ ರಾಕೆಟ್​; ಮಸ್ಕ್​ ಜೊತೆ ಇಸ್ರೋ ಕೈಜೋಡಿಸಿದ್ದು ಏಕೆ?

ABOUT THE AUTHOR

...view details