AI Powered Smart Glasses for Visually Impaired:ಒಂದಾನೊಂದು ಕಾಲದಲ್ಲಿ ಅಂಧರು ಸಾಮಾನ್ಯವಾಗಿ ಬೆತ್ತ ಅಥವಾ ಕೈ ಕೋಲು ಸಹಾಯವಿಲ್ಲದೇ ಮುಂದೆ ಸಾಗಲು ಸಾಧ್ಯವಾಗುತ್ತಿರಲಿಲ್ಲ. ಈಗ ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಅಭಿವೃದ್ಧಿಗೊಳ್ಳುತ್ತಿದೆ. ತಂತ್ರಜ್ಞಾನ ಬೆಳವಣಿಗೆಯಿಂದಾಗಿ ಅಂಧರಿಗೆ ವಿವಿಧ ರೀತಿಯ ಉಪಕರಣಗಳು ಬಳಕೆಗೆ ಬರುತ್ತಿವೆ. ಸ್ಮಾರ್ಟ್ಫೋನ್ಗಳಲ್ಲಿ ವಿಶೇಷ ಅಪ್ಲಿಕೇಶನ್‌ಗಳ ಸಹಾಯದಿಂದ ಅವರು ಓದುತ್ತಿದ್ದಾರೆ. ಈಗ ಅವರು ಯಾರ ಸಹಾಯವಿಲ್ಲದೇ ಹೊರಗೆ ಹೋಗಿ ಜೀವಿಸಲು ಸಮರ್ಥರಾಗಿದ್ದಾರೆ. ಇತ್ತೀಚೆಗೆ ಕೃತಕ ಬುದ್ಧಿಮತ್ತೆ ಆಧಾರಿತ ಸ್ಮಾರ್ಟ್ ಗ್ಲಾಸ್‌ಗಳು ಅವರಿಗಾಗಿ ತರಲಾಗಿದೆ. ಅಂಧರು ಇವುಗಳನ್ನು ಧರಿಸಿದರೆ ಕೇವಲ ಕೋಲುಗಳ ಸಹಾಯ ಅಲ್ಲ.. ಇತರರ ಸಹಾಯವಿಲ್ಲದೆಯೇ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಬಹುದಾಗಿದೆ.
ಹೌದು ಈ ಎಐ ಸ್ಮಾರ್ಟ್ ಗ್ಲಾಸ್‌ಗಳು ಮನೆಯಿಂದ ಹೊರಗೆ ಹೋಗುವುದಕ್ಕೆ ಸಹಾಯ ಮಾಡುತ್ತವೆ. ಟೆಕ್ಸ್ಟ್ ಟು ಸ್ಪೀಚ್ ಸಹಾಯದಿಂದ ಪುಸ್ತಕದ ಅಕ್ಷರಗಳನ್ನು ಈ ಸ್ಮಾರ್ಟ್ ಗ್ಲಾಸ್ ಓದಿ ಅವರಿಗೆ ಹೇಳುತ್ತದೆ. ಡಿಆರ್‌ಡಿಒ ಸಂಶೋಧನಾ ಕೇಂದ್ರದ ಕಿಮ್ಸ್ ಫೌಂಡೇಶನ್‌ನ ಮಾಜಿ ವಿಜ್ಞಾನಿ ಡಾ.ವಿ.ಭುಜಂಗರಾವ್ ಅವರ ಮಾರ್ಗದರ್ಶನದಲ್ಲಿ ಈ ಎಐ ಸ್ಮಾರ್ಟ್ ಗ್ಲಾಸ್ವಿ ನ್ಯಾಸಗೊಳಿಸಿದ್ದಾರೆ. ಇತ್ತೀಚೆಗೆ ತೆಲಂಗಾಣ ರಾಜ್ಯಪಾಲ ಜಿಷ್ಣುದೇವ್ ವರ್ಮಾ, ಕಿಮ್ಸ್ ಆಸ್ಪತ್ರೆಯ ಸಿಎಂಡಿ ಡಾ. ಬೊಳ್ಳಿನೇನಿ ಭಾಸ್ಕರ ರಾವ್, ಎಲ್ವಿ ಪ್ರಸಾದ್ ನೇತ್ರಾಲಯದ ಸಂಸ್ಥಾಪಕ ಅಧ್ಯಕ್ಷ ಮತ್ತು ಖ್ಯಾತ ನೇತ್ರ ತಜ್ಞ ಡಾ. ಜಿಎನ್ ರಾವ್ ಅವರು ಎಐ ಗ್ಲಾಸ್‌ಗಳನ್ನು ಪರಿಚಯಿಸಿದ್ದಾರೆ.
ಹೆಚ್ಚಿನ ತಂತ್ರಜ್ಞಾನದಿಂದ ಅಭಿವೃದ್ಧಿಯಾಗಲಿ ಈ ಗ್ಲಾಸ್: ಈ ಸ್ಮಾರ್ಟ್ ಗ್ಲಾಸ್ ಅನ್ನು ಮೊದಲ ಹಂತದಲ್ಲಿ 100 ಅಂಧ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. ಪ್ರಯೋಗಾತ್ಮಕ ವೀಕ್ಷಣೆಯಲ್ಲಿ ಅವುಗಳನ್ನು ಬಳಸಿದ ನಂತರ ಹೆಚ್ಚಿನ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲಾಗುವುದು ಎಂದು ಡಾ.ವಿ.ಭುಜಂಗರಾವ್ ಈಟಿವಿ ಭಾರತಗೆ ತಿಳಿಸಿದ್ದಾರೆ. ಇದನ್ನು ತಯಾರಿಸುವುದಕ್ಕೆ ಪ್ರತಿ ಜೋಡಿಗೆ 10 ಸಾವಿರದವರೆಗೂ ವೆಚ್ಚವಾಗಲಿದೆ. ಆರಂಭದಲ್ಲಿ ಯಾವುದೇ ಲಾಭದ ಉದ್ದೇಶವಿಲ್ಲದೆ ಈ ಕನ್ನಡಕಗಳನ್ನು ನೀಡಲಾಗುತ್ತಿದೆ ಎಂದು ವಿವರಿಸಲಾಗಿದೆ. ಇವುಗಳ ತೂಕ 45 ಗ್ರಾಂ ಇರಲಿದೆ ಎನ್ನಲಾಗಿದೆ. ತಂತ್ರಜ್ಞಾನ ಅಭಿವೃದ್ಧಿಯಾದಂತೆ ಬೆಲೆ ಕಡಿಮೆಯಾಗುವುದಲ್ಲದೇ ತೂಕದಲ್ಲಿಯೂ ಹಗುರವಾಗುತ್ತದೆ ಎಂದು ಡಾ.ವಿ.ಭುಜಂಗರಾವ್ ತಿಳಿಸಿದರು.