ಕರ್ನಾಟಕ

karnataka

ETV Bharat / technology

ಫ್ರೀ ಫ್ರೀ ಫ್ರೀ... ಜಿಯೋ ಫೈಬರ್ - ಏರ್ ಫೈಬರ್ ಗ್ರಾಹಕರಿಗೆ ಭರ್ಜರಿ ಆಫರ್ - Jio new plan - JIO NEW PLAN

Jio New Unlimited OTT Plan: ರಿಲಯನ್ಸ್ ಜಿಯೋ ಹೊಸ ಯೋಜನೆಯೊಂದನ್ನು ಬಿಡುಗಡೆ ಮಾಡಿದೆ. ಇದು 15 ಆ್ಯಪ್‌ಗಳ ಪ್ರೀಮಿಯಂ ಸೇವೆಗಳನ್ನು ಒಳಗೊಂಡಿದೆ. ಪೋಸ್ಟ್ ಪೇಯ್ಡ್ ಯೋಜನೆ ಇದಾಗಿದ್ದು, ಯಾರು ಒಟಿಟಿ ಪ್ಲಾಟ್ ಫಾರ್ಮ್‌ಗಳನ್ನು ಅತಿಹೆಚ್ಚು ಬಳಕೆ ಮಾಡುತ್ತೀರಿ, ಇಷ್ಟ ಪಡುತ್ತೀರಿ ಅಂಥವರಿಗೆ ಹೇಳಿಮಾಡಿಸಿದಂಥ ಯೋಜನೆ ಇದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

Jio OTT plan
ರಿಲಯನ್ಸ್ ಜಿಯೋ ಲೋಗೋ (Jio New Unlimited OTT Plan(ANI))

By ETV Bharat Karnataka Team

Published : May 13, 2024, 6:37 PM IST

ದೈತ್ಯ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ತನ್ನ ಜಿಯೋ ಫೈಬರ್ ಹಾಗೂ ಜಿಯೋ ಏರ್ ಫೈಬರ್ ಗ್ರಾಹಕರಿಗಾಗಿ ಹೊಸ ಪ್ಲಾನ್​ ಬಿಡುಗಡೆ ಮಾಡಿದೆ. ಈ ನೂತನ ಯೋಜನೆಯು ಒಟಿಟಿ ಪ್ಲಾಟ್ ಫಾರ್ಮ್​​​ಗಳನ್ನು ಅತಿಹೆಚ್ಚು ಬಳಕೆ ಮಾಡುವವರಿಗೆ ಮತ್ತು ಇಷ್ಟ ಪಡುವವರಿಗೆ ಹೇಳಿಮಾಡಿಸಿದಂತ ಪ್ಲ್ಯಾನ್‌ ಆಗಿದೆ. ಕೇವಲ 888 ರೂ.ಗಳ 'ಅಲ್ಟಿಮೇಟ್ ಸ್ಟ್ರೀಮಿಂಗ್ ಪ್ಲಾನ್' ಎಂಬ ನೂತನ ಪೋಸ್ಟ್ ಪೇಯ್ಡ್ ಪ್ಲ್ಯಾನ್‌ ಬಿಡುಗಡೆ ಮಾಡಿದ್ದು, ಭರಪೂರ ಯೋಜನೆಗಳ ಜೊತೆಗೆ, ಭರಪೂರ ಮನರಂಜನೆಯ ಕೊಡುಗೆ ಇದಾಗಿದೆ.

ಈ ಪ್ಲ್ಯಾನಿನಲ್ಲಿ ಬಳಕೆದಾರರಿಗೆ ವೇಗದ ಇಂಟರ್ನೆಟ್ ಸಂಪರ್ಕ, ಡಿಜಿಟಲ್ ಟಿವಿ ಪ್ರಸಾರ ಮತ್ತು 15 ಪ್ರೀಮಿಯಂ ಒಟಿಟಿ ಆ್ಯಪ್‌ಗಳು ಲಭ್ಯವಾಗಲಿವೆ. ಹೊಸ ಬಳಕೆದಾರರಲ್ಲದೇ, ಈಗಾಗಲೇ ಅಸ್ತಿತ್ವದಲ್ಲಿರುವ ಜಿಯೋ ಫೈಬರ್ ಮತ್ತು ಜಿಯೋ ಏರ್‌ ಫೈಬರ್ ಬಳಕೆದಾರರು ಸಹ ಈ ಯೋಜನೆಗೆ ಬದಲಾಯಿಸಬಹುದು ಎಂದು ಜಿಯೋ ಬಹಿರಂಗಪಡಿಸಿದೆ.

ಫ್ರೀ ಫ್ರೀ ಫ್ರೀ:ಅನಿಯಮಿತ (ಅನ್​ಲಿಮಿಟೆಡ್) ಡೇಟಾ ಪ್ರಯೋಜನ ಸಹ ಲಭ್ಯವಾಗಲಿದ್ದು, ಬಳಕೆದಾರರು ತಮ್ಮ ಅಚ್ಚುಮೆಚ್ಚಿನ ಅಪ್ಲಿಕೇಷನ್​​ಗಳಲ್ಲಿ ಯಾವಾಗ ಮತ್ತು ಎಲ್ಲಿ ಬೇಕಾದರೂ ಕಾರ್ಯಕ್ರಮಗಳ ವೀಕ್ಷಣೆ ಮಾಡಲು ಅವಕಾಶ ಇದೆ. ಜಿಯೋ ತಂದಿರುವ ಈ ಹೊಸ ಯೋಜನೆಯೊಂದಿಗೆ ಬಳಕೆದಾರು 30 Mbps ವೇಗದಲ್ಲಿ ಅನಿಯಮಿತ ಇಂಟರ್ನೆಟ್ ಡೇಟಾ ಪಡೆಯಲಿದ್ದಾರೆ. ಇದರ ಜತೆಗೆ ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್, ಜಿಯೋ ಸಿನಿಮಾ ಪ್ರೀಮಿಯಂ, ಡಿಸ್ನಿ+ಹಾಟ್ ಸ್ಟಾರ್, ಸೋನಿ ಲಿವ್, ಈಟ್ಲಿ ವಿನ್ ನಂತಹ 15ಕ್ಕೂ ಅಧಿಕ ಜನಪ್ರಿಯ ಒಟಿಟಿ ಆ್ಯಪ್‌ಗಳು ದೊರೆಯುತ್ತವೆ. ಈ ಆ್ಯಪ್‌ನ ಸಬ್​​ಸ್ಕ್ರಿಪ್ಷನ್ ಲಭ್ಯವಾಗುವುದು ಯೋಜನೆಯ ಜತೆಗೆ ಮಾತ್ರ.

ಇದಷ್ಟೇ ಅಲ್ಲದೇ ಜಿಯೋ ಇತ್ತೀಚೆಗೆ ಘೋಷಿಸಿದ ಐಪಿಎಲ್ ಧನ್ ಧನ್ ಧನ್ ಆಫರ್ ಕೂಡ ಈ ಯೋಜನೆಗೆ ಅನ್ವಯಿಸುತ್ತದೆ. ಜಿಯೋ ಫೈಬರ್ ಅಥವಾ ಜಿಯೋ ಏರ್ ಫೈಬರ್​ನ ಅರ್ಹ ಗ್ರಾಹಕರು ತಮ್ಮ ಜಿಯೋ ಹೋಮ್ ಬ್ರಾಡ್​ಬ್ಯಾಂಡ್ ಕನೆಕ್ಷನ್‌ನಲ್ಲಿ 50 ದಿನ ರಿಯಾಯಿತಿ ಕ್ರೆಡಿಟ್ ವೋಚರ್ ಸಹ ಪಡೆದುಕೊಳ್ಳಬಹುದಾಗಿದೆ. ಜೊತೆಗೆ 10 ಅಥವಾ 30 ಎಂಬಿಪಿಎಸ್ ಪ್ಲ್ಯಾನ್‌ಗಳನ್ನು ಈಗಾಗಲೇ ಬಳಕೆ ಮಾಡುತ್ತಿರುವ ಜಿಯೋದ ಬಳಕೆದಾರರು ಸಹ ಪಡೆಯಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಭರಪೂರ ಮನರಂಜನೆಯ: ಜಿಯೋ ಸಿನಿಮಾ ಪ್ರೀಮಿಯಂ ಯಶಸ್ವಿಯಾಗಿ ಜನರನ್ನು ಆಕರ್ಷಿಸುತ್ತಿದ್ದು, ಇತ್ತೀಚೆಗೆಷ್ಟೇ ಬಿಡುಗಡೆ ಮಾಡಲಾಗಿರುವ 29 ರೂ. ಮತ್ತು 89 ರೂ. ಪಾವತಿಸುವುದರೊಂದಿಗೆ ಗ್ರಾಹಕರು ಪ್ರೀಮಿಯಮ್ ಸದಸ್ಯತ್ವ ಪಡೆಯಬಹುದಾಗಿದೆ. ತಿಂಗಳಿಗೆ 29 ರೂ. ಪಾವತಿಸಿದರೆ, ಯಾವುದೇ ಜಾಹೀರಾತುಗಳಿಲ್ಲದೆ 4K ವಿಡಿಯೊ ಗುಣಮಟ್ಟದಲ್ಲಿ ಭರಪೂರ ಮನರಂಜನೆ ಪಡೆಯಬಹುದು. ಗ್ರಾಹಕರು ಇಲ್ಲಿ ಆಫ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು ಮತ್ತು ವೀಕ್ಷಿಸಲೂ ಅವಕಾಶ ಇದೆ. ಏಕಕಾಲದಲ್ಲಿ ನಾಲ್ಕು ಸಾಧನಗಳಲ್ಲಿ ವಿಷಯವನ್ನು ಸ್ಟ್ರೀಮ್ ಮಾಡಲು ಅವಕಾಶ ಇದೆ. ಚಲನಚಿತ್ರಗಳು, ಹಾಲಿವುಡ್ ಬ್ಲಾಕ್‌ಬಸ್ಟರ್‌ಗಳು, ಮಕ್ಕಳ ಕಾರ್ಯಕ್ರಮಗಳು, ಟಿವಿ ಮನರಂಜನೆಯನ್ನು ಸ್ಮಾರ್ಟ್ ಟಿವಿ ಸೇರಿದಂತೆ ಯಾವುದೇ ಸಾಧನದಲ್ಲಿ ವೀಕ್ಷಿಸಬಹುದು. ಲೈವ್ ಟೆಲಿಕಾಸ್ಟ್ ಮತ್ತು ಕ್ರೀಡೆಗಳು ಜಾಹೀರಾತುಗಳೊಂದಿಗೆ ಬರುತ್ತವೆ.

BSNL ಪ್ರಿಪೇಯ್ಡ್ ಯೋಜನೆಗಳು: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ BSNL ತನ್ನ ಗ್ರಾಹಕರಿಗೆ ಎರಡು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ ಒಂದು ಡೇಟಾ ವೋಚರ್ ಮತ್ತು ಇನ್ನೊಂದು ಮಾನ್ಯತೆಯ ವಿಸ್ತರಣೆ ಯೋಜನೆಯಾಗಿದೆ. ಇವುಗಳ ಬೆಲೆ ಕ್ರಮವಾಗಿ 58 ರೂ. ಮತ್ತು 59 ರೂ. ಆಗಿದೆ.

BSNL ನೀಡುವ 58 ರೂ. ಯೋಜನೆಯು ಡೇಟಾ ವೋಚರ್ ಆಗಿದೆ. ಇದನ್ನು ಪಡೆಯಲು ಸಕ್ರಿಯ ಮೂಲ ಯೋಜನೆಯನ್ನು ಹೊಂದಿರಬೇಕು. ಇದರ ಮಾನ್ಯತೆ 7 ದಿನಗಳು ಮಾತ್ರ. ಪ್ರತಿದಿನ 2GB ಡೇಟಾವನ್ನು ಪಡೆಯಬಹುದು. ಪೂರ್ಣ ಡೇಟಾ ಬಳಕೆಯ ನಂತರ ಬಳಕೆದಾರರು 40 Kbps ವೇಗದಲ್ಲಿ ಇಂಟರ್ನೆಟ್ ಅನ್ನು ಸಹ ಬಳಸಬಹುದು. ಹಾಗೆಯೇ 59 ರೂ. ಪ್ಲಾನ್‌ನ ವ್ಯಾಲಿಡಿಟಿ ಕೂಡ 7 ದಿನಗಳು ಇರಲಿದ್ದು ಯಾವುದೇ SMS ಪ್ರಯೋಜನಗಳಿಲ್ಲ. ಇಲ್ಲಿ ದಿನಕ್ಕೆ 1GB ಡೇಟಾವನ್ನು ಪಡೆಯಬಹುದಾಗಿದೆ. ಅನಿಯಮಿತ ಧ್ವನಿ ಕರೆಗಳನ್ನು ಸಹ ಒದಗಿಸಲಾಗಿದೆ.

BSNL ಆಗಸ್ಟ್ 2024 ರಿಂದ ದೇಶಾದ್ಯಂತ 4G ಸೇವೆಗಳನ್ನು ಪ್ರಾರಂಭಿಸಲಿದೆ. ಆತ್ಮನಿರ್ಭರ್ ಭಾರತ್ ನೀತಿಗೆ ಅನುಗುಣವಾಗಿ, ಕಂಪನಿಯು 4G ಸೇವೆಗಳಿಗೆ ಸಂಪೂರ್ಣ ಸ್ವದೇಶಿ ತಂತ್ರಜ್ಞಾನವನ್ನು ಬಳಸುತ್ತದೆ. ಪ್ರಾಯೋಗಿಕ ಹಂತದಲ್ಲಿ 700-2,100 MHz ಸ್ಪೆಕ್ಟ್ರಮ್ ಬ್ಯಾಂಡ್‌ವಿಡ್ತ್‌ನೊಂದಿಗೆ ನಿರ್ಮಿಸಲಾದ 4G ನೆಟ್‌ವರ್ಕ್‌ನಲ್ಲಿ, 40-45 Mbps ಡೇಟಾ ವೇಗವನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ವಾಟ್ಸ್​ಆ್ಯಪ್​ ಪ್ರೊಫೈಲ್ ಪಿಕ್ಚರ್ ಸ್ಕ್ರೀನ್​ಶಾಟ್​ಗೆ ನಿರ್ಬಂಧ: ಶೀಘ್ರವೇ ಬರಲಿದೆ ಹೊಸ ವೈಶಿಷ್ಟ್ಯ - New WhatsApp Feature

ABOUT THE AUTHOR

...view details