ಕರ್ನಾಟಕ

karnataka

ETV Bharat / technology

ಬೆಂಗಳೂರು-ಪುಣೆಗೆ ಬೈಬೈ ಹೇಳಲು ಸಜ್ಜಾಗಿದ್ದಾರಾ ಟೆಕ್ಕಿಗಳು?: ಜಬಲ್​​​ಪುರ ಸೃಷ್ಟಿಸುವುದೇ ಅಂತಹದ್ದೇನಾದರೂ ಮಾಯಾಜಾಲ? - IT ENGINEERS LEAVE BANGALORE PUNE - IT ENGINEERS LEAVE BANGALORE PUNE

ಜಬಲ್ಪುರದಲ್ಲಿ ಆಯೋಜಿಸಲಾದ ಪ್ರಾದೇಶಿಕ ಕೈಗಾರಿಕೆಗಳ ಸಮಾವೇಶದಲ್ಲಿ ಭಾಗವಹಿಸುವುದಕ್ಕಾಗಿ ಅನೇಕ ಕೈಗಾರಿಕೋದ್ಯಮಿಗಳು ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಿಂಗಾಪುರದ ಕೈಗಾರಿಕೋದ್ಯಮಿ ಕೇತನ್ ವರ್ಮಾ, ರಾಜ್ಯ ಸರ್ಕಾರವು ಸ್ಥಳೀಯ ಕಂಪನಿಗಳಿಗೆ ಆದ್ಯತೆ ನೀಡದ ಹೊರತು ಮಧ್ಯಪ್ರದೇಶದಲ್ಲಿ ಐಟಿ ಉದ್ಯಮವು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದಿದ್ದಾರೆ.

Etv Bharajabalpur-it-engineers-want-leave-bangalore-and-pune-madhya-pradesh-new-it-policy-jabalpur-it-parkt
Etv Bharatಬೆಂಗಳೂರು - ಪುಣೆಗೆ ಬೈಬೈ ಹೇಳಲು ಸಜ್ಜಾಗಿದ್ದಾರಾ ಟೆಕ್ಕಿಗಳು?: ಜಬಲ್​​​ಪುರ ಸೃಷ್ಟಿಸುವುದೇ ಅಂತಹದ್ದೇನಾದರೂ ಮಾಯಾಜಾಲ? (ETV Bharat)

By ETV Bharat Karnataka Team

Published : Jul 26, 2024, 9:26 PM IST

ಜಬಲ್‌ಪುರ, ಮಧ್ಯಪ್ರದೇಶ:ರಾಜ್ಯ ಸರ್ಕಾರ ಸ್ಥಳೀಯ ಕಂಪನಿಗಳಿಗೆ ಸರ್ಕಾರಿ ಸವಲತ್ತುಗಳನ್ನು ನೀಡದ ಹೊರತು ಮಧ್ಯಪ್ರದೇಶದಲ್ಲಿ ಐಟಿ ಉದ್ಯಮವು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಸಿಂಗಾಪುರದಲ್ಲಿ ಐಟಿ ಕಂಪನಿ ನಡೆಸುತ್ತಿರುವ ಹೂಡಿಕೆದಾರರೊಬ್ಬರು ಪ್ರತಿಪಾದಿಸಿದ್ದಾರೆ. ಸಿಂಗಾಪುರದಲ್ಲಿ ಅಲ್ಲಿನ ಸರ್ಕಾರವು ಸಣ್ಣ ಸಣ್ಣ ಕಂಪನಿಗಳಿಗೆ ಕೆಲಸ ನೀಡುತ್ತದೆ. ಆದ್ದರಿಂದಾಗಿಯೇ ಸಿಂಗಾಪುರದಲ್ಲಿ ಹೊಸ ಐಟಿ ಕಂಪನಿಗಳು ಪ್ರವರ್ಧಮಾನಕ್ಕೆ ಬರುತ್ತಿವೆ. ಐಟಿ ಉದ್ಯಮವು ಕೇವಲ ಜಾಗವನ್ನು ಒದಗಿಸುವ ಮೂಲಕ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಅದಕ್ಕೆ ಪೂರಕವಾದ ವಾತಾವರಣವನ್ನೂ ಸೃಷ್ಟಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ಮಧ್ಯಪ್ರದೇಶ ಆಗಲಿದೆಯಾ ಹೊಸ ಐಟಿ ಹಬ್: ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್, ಜಬಲ್ಪುರದ ಸುಭಾಷ್ ಚಂದ್ರ ಬೋಸ್ ಸಂಸ್ಕೃತಿ ಮತ್ತು ಮಾಹಿತಿ ಕೇಂದ್ರವನ್ನು ಐಟಿ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಈ ಕಟ್ಟಡದಲ್ಲಿ ಹೊಸ ಐಟಿ ಪಾರ್ಕ್ ತೆರೆಯಲಾಗುವುದು ಎಂದು ಘೋಷಿಸಿದ್ದಾರೆ. ಈ ಕಟ್ಟಡವನ್ನು ಹೊರತುಪಡಿಸಿ, ಜಬಲ್ಪುರದಲ್ಲಿ ಸುಮಾರು 100 ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ್ ನಿರ್ಮಿಸಲಾಗಿದೆ. ಆದರೆ ಇದಾದ ನಂತರವೂ ಜಬಲ್ಪುರದಲ್ಲಿ ದೊಡ್ಡ ಕಂಪನಿಗಳು ತಮ್ಮ ಕಚೇರಿಗಳನ್ನು ತೆರೆಯುತ್ತಿಲ್ಲ. ಬರ್ಗಿ ಹಿಲ್ಸ್‌ನಲ್ಲಿ ಐಟಿ ಪಾರ್ಕ್‌ನ ಮೊದಲ ಕಟ್ಟಡವು ಸುಮಾರು 5 ವರ್ಷಗಳ ಹಿಂದೆ ಪೂರ್ಣಗೊಂಡಿದೆ ಮತ್ತು ಅನೇಕ ಸಣ್ಣ ಕಂಪನಿಗಳು ಈ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ, ಆದರೆ ಇನ್ನೂ ಯಾವುದೇ ದೊಡ್ಡ ಕಂಪನಿ ಜಬಲ್‌ಪುರದಲ್ಲಿ ಹೂಡಿಕೆ ಮಾಡಿಲ್ಲ.

ಸರ್ಕಾರಕ್ಕೆ ಕೈಗಾರಿಕೋದ್ಯಮಿಗಳಿಂದ ಬೇಡಿಕೆಗಳ ಪಟ್ಟಿ: Paytm ಮಾತ್ರ ಜಬಲ್‌ಪುರದಲ್ಲಿ ಇದುವರೆಗೂ ಹೂಡಿಕೆ ಮಾಡಿದೆ. ಆದರೆ, ಈ ಹಿಂದೆ Paytm ಇಲ್ಲಿ ಕಡಿಮೆ ವಹಿವಾಟು ನಡೆದಿದ್ದರಿಂದಾಗಿ ಜಬಲ್‌ಪುರದ ಈ IT ಪಾರ್ಕ್‌ಗೆ ಯಾವುದೇ ದೊಡ್ಡ ಕಂಪನಿಗಳು ಆಗಮಿಸಿಲ್ಲ. ಪೇಟಿಎಂ ಜತೆಗೆ ಹಲವು ಕಂಪನಿಗಳ ಕೆಲಸಗಳ ಹೊರತಾಗಿಯೂ, ಜಬಲ್ಪುರವು ಐಟಿ ಕೇಂದ್ರವಾಗಲು ಸಾಧ್ಯವಾಗಲಿಲ್ಲ. ಈ ಐಟಿ ಪಾರ್ಕ್‌ನಲ್ಲಿ ಇನ್ನೂ ಹೊಸ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಜಬಲ್ಪುರದ ಪ್ರಾದೇಶಿಕ ಉದ್ಯಮಗಳ ಸಮಾವೇಶದಲ್ಲಿ ಭಾಗವಹಿಸಲು ಸಿಂಗಾಪುರದಿಂದ ಜಬಲ್ಪುರಕ್ಕೆ ಬಂದಿದ್ದ ಕೇತನ್ ವರ್ಮಾ ಸಿಂಗಾಪುರದಲ್ಲಿ ತಮ್ಮದೇ ಆದ ಐಟಿ ಕಂಪನಿಯನ್ನು ನಡೆಸುತ್ತಿದ್ದಾರೆ.

ಪುಣೆ- ಬೆಂಗಳೂರು ಬದುಕಿಗೆ ಅತ್ಯಂತ ದುಬಾರಿ ನಗರಗಳು:ಇವರು ಕೈಗಾರಿಕಾ ಸಮಾವೇಶದಲ್ಲಿ ಮಾತನಾಡಿ, ಅನೇಕ ನನ್ನ ಸಹೋದ್ಯೋಗಿಗಳು ಪುಣೆ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಪುಣೆ ಮತ್ತು ಬೆಂಗಳೂರಿನ ಜೀವನ ವೆಚ್ಚವು ತುಂಬಾ ದುಬಾರಿಯಾಗಿದೆ. ಈ ಎರಡೂ ನಗರಗಳು ಸ್ಯಾಚುರೇಟೆಡ್ ಆಗಿವೆ. ಇಲ್ಲಿನ ಯುವ ಇಂಜಿನಿಯರ್‌ಗಳು ಬೆಂಗಳೂರು ಮತ್ತು ಪುಣೆಯನ್ನು ಬಿಟ್ಟು ಬೇರೆ ನಗರಗಳಿಗೆ ಹೋಗಲು ಬಯಸುತ್ತಿದ್ದಾರೆ. ಆದರೆ, ಬೆಂಗಳೂರು ಮತ್ತು ಪುಣೆ ಹೊರತು ಪಡಿಸಿ ಇತರ ಕಡೆ ಕಂಪನಿಗಳ ಅಭಿವೃದ್ಧಿಗೆ ಹಾಗೂ ಸ್ಥಳಾಂತರಕ್ಕೆ ಪರ್ಯಾಯನ್ನು ರೂಪಿಸಲು ಸಾಧ್ಯವಾಗಿಲ್ಲ. ಹಾಗಾಗಿ ಪರ್ಯಾಯ ಐಟಿ ಹಬ್​ ನಿರ್ಮಾಣಕ್ಕೆ ಇದು ಸಕಾಲ ಎಂದು ಸಲಹೆ ನೀಡಿದರು.

ಸಣ್ಣ ಕಂಪನಿಗಳು ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕು: ರಾಜ್ಯ ಸರ್ಕಾರವೇ ಸಣ್ಣ ಕಂಪನಿಗಳಿಗೆ ಸಣ್ಣ ಯೋಜನೆಗಳನ್ನು ರೂಪಿಸಬೇಕು ಎಂದರು. ಸಿಂಗಾಪುರದ ಉದಾಹರಣೆ ನೀಡಿದ ಕೇತನ ವರ್ಮಾ, ‘‘ಸಿಂಗಾಪುರದಲ್ಲಿ ಸರಕಾರ ಶೇ.50ರಷ್ಟು ಕೆಲಸವನ್ನು ಹೊಸ ಮತ್ತು ಸಣ್ಣ ಕಂಪನಿಗಳಿಗೆ ನೀಡುತ್ತದೆ. ಈ ಕಾರಣದಿಂದಾಗಿ, ಸಣ್ಣ ಕಂಪನಿಗಳು ಬದುಕುಳಿಯುತ್ತವೆ. ಹೀಗೆ ಸರ್ಕಾರದಿಂದ ಉಸಿರಾಡಿ, ಕೆಲ ಆದಾಯ ಗಳಿಸುವ ಮೂಲಕ ನಂತರ ಅವು ಬೇರೆ ಬೇರೆ ಕಡೆಗಳಿಂದ ದೊಡ್ಡ ಆರ್ಡರ್​ಗಳನ್ನು ಪಡೆಯಲು ಪ್ರಾರಂಭಿಸುತ್ತವೆ ಎಂದು ಹೇಳಿದರು.

ಈ ಬಗ್ಗೆ ಮಾತನಾಡಿದ ಮಧ್ಯಪ್ರದೇಶದ ಸಿಎಂ ಮೋಹನ್​ ಯಾದವ್​, ಸರ್ಕಾರ ಐಟಿ ಪಾರ್ಕ್​ ನಿರ್ಮಾಣ ಮಾಡಿ ಅದಕ್ಕೆ ಬೇಕಾದ ಎಲ್ಲ ಸವಲತ್ತುಗಳನ್ನು ನೀಡಲು ಸದಾ ಸನ್ನದ್ಧವಾಗಿದೆ. ಆದರೆ ಕಂಪನಿಗೆ ದೊರಕಬೇಕಾದ ಕೆಲಸಕ್ಕೆ ಬೇಕಾದ ಪ್ರಾಜೆಕ್ಟ್​ಗಳನ್ನು ನೀಡುವ ಬಗ್ಗೆ ಗ್ಯಾರಂಟಿ ನೀಡಲು ಸಾಧ್ಯವಿಲ್ಲ ಎಂದರು.

ಸರಕಾರ ದೊಡ್ಡ ಕಂಪನಿಗಳಿಗೆ ಕೆಲಸ;ಮಧ್ಯಪ್ರದೇಶ ಸರ್ಕಾರ ಈಗಾಗಲೇ ಅನೇಕ ಐಟಿ ಕಂಪನಿಗಳಿಗೆ ಕೆಲಸ ನೀಡುತ್ತಿದೆ, ಆದರೆ ಇವುಗಳು ಹೆಚ್ಚಾಗಿ ದೊಡ್ಡ ಕಂಪನಿಗಳಾಗಿವೆ. ಅನೇಕ ಖಾಸಗಿ ಐಟಿ ಕಂಪನಿಗಳು ಸರ್ಕಾರದ ಎಲ್ಲಾ ಆನ್‌ಲೈನ್ ಸೇವೆಗಳನ್ನು ನಿರ್ವಹಿಸುತ್ತಿವೆ. ಉದಾಹರಣೆಗೆ, ಮಧ್ಯಪ್ರದೇಶ ಸರ್ಕಾರದ ಎಂಪಿ ಆನ್‌ಲೈನ್ ಸೇವೆಯನ್ನು ಟಿಸಿಎಸ್ ಕಂಪನಿಯ ಸಹಾಯದಿಂದ ನಡೆಸುತ್ತಿದೆ. ಅದೇ ಸಮಯದಲ್ಲಿ, ಮಧ್ಯಪ್ರದೇಶದ ಅನೇಕ ಇಲಾಖೆಗಳಲ್ಲಿ ಅನೇಕ ಆನ್‌ಲೈನ್ ಸೇವೆಗಳು ಚಾಲನೆಯಲ್ಲಿವೆ. ಅದರಲ್ಲಿ ದೊಡ್ಡ ಕಂಪನಿಗಳಿಗೆ ಕೆಲಸವನ್ನು ನೀಡಲಾಗುತ್ತಿದೆ. ಅದೇ ಕೆಲಸವನ್ನು ಸ್ಥಳೀಯ ಕಂಪನಿಗಳಿಗೆ ನೀಡಿದರೆ, ಮಧ್ಯಪ್ರದೇಶದಲ್ಲೂ ಐಟಿ ಉದ್ಯಮವು ಕ್ರಮೇಣ ಅಭಿವೃದ್ಧಿ ಹೊಂದುತ್ತದೆ. ಐಟಿ ಉದ್ಯಮವು ಸರಳ ಮತ್ತು ಸಣ್ಣ ಉದ್ಯಮವಾಗಿದೆ, ಆದರೆ ಐಟಿ ಉದ್ಯಮವು ಕೇವಲ ಜಾಗವನ್ನು ಒದಗಿಸುವ ಮೂಲಕ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಐಟಿ ಉದ್ಯಮದಲ್ಲಿ ಕೆಲಸ ಮಾಡುವ ಯುವ ಇಂಜಿನಿಯರ್‌ಗಳಿಗೆ ಕೆಲಸ ಸಿಗದ ಹೊರತು ಈ ಉದ್ಯಮ ಅಭಿವೃದ್ಧಿಯಾಗುವ ಸಾಧ್ಯತೆ ಇಲ್ಲ.

ಇದನ್ನು ಓದಿ:ಮಹತ್ವದ ಕ್ಷಿಪಣಿ ಪರೀಕ್ಷೆಗೂ ಮುನ್ನ ಒಡಿಶಾದಲ್ಲಿ 10,000 ಕ್ಕೂ ಹೆಚ್ಚು ಜನರ ಸ್ಥಳಾಂತರ: ಏನಿದು ಯೋಜನೆ? - Govt shifts over 10K people

ಮೊಬೈಲ್​ನಲ್ಲಿನ ಡೇಟಾ ಕಳುವಾಗಬಾರದೇ?: ಹಾಗಿದ್ರೆ ಈ ಆ್ಯಂಡ್ರಾಯ್ಡ್​​ 'ಲಾಕ್​​ಡೌನ್​ ಮೋಡ್​​' ಬಳಸಿ - lockdown mode

ABOUT THE AUTHOR

...view details