iPhone WhatsApp data transfer:ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸಿದಾಗ, ನಿಮ್ಮ ಹಳೆಯ ಫೋನ್‌ನಲ್ಲಿ ವಾಟ್ಸಾಪ್ ಡೇಟಾ ವರ್ಗಾವಣೆಯಲ್ಲಿ ಸಮಸ್ಯೆ ಇರುತ್ತದೆ. ಮುಖ್ಯವಾಗಿ ಐಫೋನ್ ಬಳಕೆದಾರರು ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಹೊಸ iPhone 16 ಅಥವಾ ಯಾವುದೇ iPhone ಮಾಡೆಲ್ ಅನ್ನು ಖರೀದಿಸಿದ ಬಳಕೆದಾರರಿಗೆ, ಅವರು WhatsApp ಡೇಟಾವನ್ನು ವರ್ಗಾಯಿಸುವಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈ ಸಂದೇಶವು ಅವರಿಗೆ ಸಹಾಯ ಮಾಡುತ್ತದೆ.
ನಿಮ್ಮ ಹಳೆಯ ಐಫೋನ್‌ನಿಂದ ಹೊಸ ಐಫೋನ್‌ಗೆ WhatsApp ಸಂಭಾಷಣೆ ಮತ್ತು ಡೇಟಾವನ್ನು ಸುಲಭವಾಗಿ ವರ್ಗಾಯಿಸುವುದು ಹೇಗೆ ಎಂದು ತಿಳಿದುಕೊಳ್ಳೋಣ. ಆದ್ರೆ ನೀವು ಈ ನಿಯಮಗಳನ್ನು ಆರಂಭಿಸುವ ಮೊದಲು ನಿಮ್ಮ iOS ಆವೃತ್ತಿ ಮತ್ತು WhatsApp ಆವೃತ್ತಿಯನ್ನು ಅಪ್ಡೇಟ್ ಮಾಡಿಕೊಳ್ಳಬೇಕಾಗುತ್ತದೆ.
ತ್ವರಿತ ಆರಂಭ (Quick Start):
- ಹಳೆಯ ಐಫೋನ್‌ನಿಂದ ನಿಮ್ಮ ಹೊಸ ಐಫೋನ್‌ಗೆ ಡೇಟಾ ವರ್ಗಾಯಿಸಲು ಇದು ಅತ್ಯಂತ ವಿಶ್ವಾಸಾರ್ಹ ವಿಧಾನವಾಗಿದೆ.
- ನಿಮ್ಮ ಹಳೆಯ ಮತ್ತು ಹೊಸ ಐಫೋನ್‌ಗಳಲ್ಲಿ ನೀವು ವೈ-ಫೈ ಮತ್ತು ಬ್ಲೂಟೂತ್ ಅನ್ನು ಆ್ಯಕ್ಟಿವ್ಗೊಳಿಸುವ ಅಗತ್ಯವಿದೆ.
- ಎರಡೂ ಐಫೋನ್‌ಗಳು ಪರಸ್ಪರ ಸಂವಹನ ನಡೆಸಲು ಸಾಕಷ್ಟು ಹತ್ತಿರದಲ್ಲಿದೆ ಎಂದು ಖಚಿತಪಡಿಸಿಕೊಳ್ಳಬೇಕು.
- "Transfer from iPhone" ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ನಂತರ ನಿಮ್ಮ ಹಳೆಯ ಐಫೋನ್‌ನಿಂದ ಡೇಟಾವನ್ನು ಹೊಸ ಐಫೋನ್‌ಗೆ ವರ್ಗಾಯಿಸಿಕೊಳ್ಳಿ..
ಚಾಟ್‌ಗಳನ್ನು ಬದಲಾಯಿಸುವುದು ಹೇಗೆ?:
- ನಿಮ್ಮ ವೈಯಕ್ತಿಕ ಸಂದೇಶಗಳು, ಫೋಟೋಗಳು, ವಿಡಿಯೋಗಳು ಮತ್ತು ಡಾಕ್ಯುಮೆಂಟ್‌ಗಳನ್ನು ಐಕ್ಲೌಡ್ ಸಹಾಯವಿಲ್ಲದೆ ನೇರವಾಗಿ ಐಫೋನ್‌ಗಳ ನಡುವೆ ಸುಲಭವಾಗಿ ವರ್ಗಾಯಿಸಿಕೊಳ್ಳಲು WhatsApp "Chat Transfer" ವೈಶಿಷ್ಟ್ಯ ನಿಮಗೆ ಸಹಾಯ ಮಾಡುತ್ತದೆ. ಈ ವಿಧಾನವನ್ನು ಅನುಸರಿಸುವುದರಿಂದ ಹಳೆಯ ಫೋನ್‌ನಲ್ಲಿರುವ ಎಲ್ಲಾ WhatsApp ಡೇಟಾವನ್ನು ಹೊಸ ಐಫೋನ್‌ಗೆ ವರ್ಗಾಯಿಸಲಾಗುತ್ತದೆ. ಇದಕ್ಕಾಗಿ ಹಳೆ ಫೋನಿನಲ್ಲಿ ಬಳಸಿದ ಕಾಂಟ್ಯಾಕ್ಟ್ ನಂಬರ್ ಅನ್ನು ಹೊಸ ಫೋನ್ನಲ್ಲೂ ಬಳಸುವುದು ಅಗತ್ಯ.
- ಇದಕ್ಕಾಗಿ ಹಳೆಯ ಐಫೋನ್‌ನಲ್ಲಿ ಸೆಟ್ಟಿಂಗ್ಸ್ ಭೇಟಿ ನೀಡಿ. Settings > Chats > Transfer chats to iPhone > Start ಎಂಬ ಆಯ್ಕೆಗೆ ಹೋಗಿ.
- ನಂತರ QR ಕೋಡ್ ಡಿಸ್ಪ್ಲೇ ಆಗುತ್ತದೆ. ಅದನ್ನು ಬಿಟ್ಟು ಹೊಸ iPhone WhatsApp ಪೇಜ್ಗೆ ಬನ್ನಿ.
- ನಂತರ ನಿಮ್ಮ ಸಂಪರ್ಕ ಸಂಖ್ಯೆಯನ್ನು ದೃಢೀಕರಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಮತ್ತು ಮುಂದುವರೆಯಲು "Chat History Tranfer" ಅನ್ನು ಆಯ್ಕೆ ಮಾಡಿ.
- ನಂತರ ಹಳೆಯ ಫೋನ್‌ನಲ್ಲಿ ಪ್ರದರ್ಶಿಸಲಾದ ಕ್ಯೂಆರ್ ಕೋಡ್ ಅನ್ನು ಹೊಸ ಐಫೋನ್ ವಾಟ್ಸಾಪ್ ಕ್ಯಾಮರಾದೊಂದಿಗೆ ಸ್ಕ್ಯಾನ್ ಮಾಡಿ.
- ಡೇಟಾ ವರ್ಗಾವಣೆ ಪೂರ್ಣಗೊಳ್ಳುವವರೆಗೆ ನಿರೀಕ್ಷಿಸಿ.
ಈ ಬ್ಯಾಕಪ್ ಆಯ್ಕೆಗಳು ಲಭ್ಯ:ಸಾಮಾನ್ಯವಾಗಿ ಐಫೋನ್‌ಗಳ ನಡುವೆ WhatsApp ಡೇಟಾವನ್ನು ವರ್ಗಾಯಿಸಲು ನಿಮಗೆ ಸಹಾಯ ಮಾಡುವ ಮೂರು ಬ್ಯಾಕಪ್ ವಿಧಾನಗಳಿವೆ. ವಾಟ್ಸಾಪ್ ಆಪ್ನಲ್ಲಿ ಬ್ಯಾಕ್ಅಪ್ ಸೌಲಭ್ಯ ಮುಖ್ಯವಾದುದು. ನಂತರ ನೀವು "iCloud" ಮೂಲಕ ಡೇಟಾವನ್ನು ಬ್ಯಾಕಪ್ ಮಾಡಬಹುದು ಮತ್ತು ಬಳಸಬಹುದು. ಹೆಚ್ಚುವರಿಯಾಗಿ, ನೀವು MacOS-ಆಧಾರಿತ ಕಂಪ್ಯೂಟರ್ ಹೊಂದಿದ್ದರೆ, ನೀವು ಅದರ ಮೂಲಕ ಸುಲಭವಾಗಿ ಬ್ಯಾಕಪ್ ಪಡೆಯಬಹುದಾಗಿದೆ.