iPhone 17 Series Design Leaked :ಆಪಲ್ ತನ್ನ ಐಫೋನ್ 17 ಸೀರಿಸ್ ಫೋನ್‌ಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆ ಕಡಿಮೆಯಿದೆ. ಈ ಸೀರಿಸ್ ಬಿಡುಗಡೆಯಾಗಲು ಇನ್ನೂ ಹಲವು ತಿಂಗಳುಗಳು ಬಾಕಿ ಇವೆ. ಆದರೂ ಇವುಗಳ ವಿವರ ಈಗಾಗಲೇ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಈ ಸೀರಿಸ್ನ ಎರಡು ಮಾದರಿಗಳಾದ 'ಐಫೋನ್ 17' ಮತ್ತು 'ಐಫೋನ್ 17 ಪ್ರೊ' ನ ರೆಂಡರ್‌ಗಳು ಪ್ರತ್ಯೇಕವಾಗಿ ಲೀಕ್ ಆಗಿವೆ.
ಈ ಐಫೋನ್‌ಗಳು ರಿಯರ್ ಪ್ಯಾನೆಲ್ನಲ್ಲಿ ಅಡ್ಡಲಾಗಿ ವಿಸ್ತರಿಸುವ ಕ್ಯಾಮರಾ ಬಾರ್ ಅನ್ನು ಒಳಗೊಂಡಿರುತ್ತವಂತೆ ಕಾಣುತ್ತದೆ. ಲೀಕ್ ಆದ ರೆಂಡರ್ವೊಂದರಲ್ಲಿ ಐಫೋನ್ 17 ಅನ್ನು ಎರಡು ಅಡ್ಡಲಾಗಿ ಜೋಡಿಸಲಾದ ರಿಯರ್ ಕ್ಯಾಮರಾಗಳೊಂದಿಗೆ ತೋರಿಸುತ್ತದೆ. ಆದರೂ ಸೋರಿಕೆಯಾದ ಮತ್ತೊಂದು ರೆಂಡರ್ 'ಪ್ರೊ' ಮಾದರಿಯು ಅದರ ಹಿಂದಿನ 'ಐಫೋನ್ 16 ಪ್ರೊ' ನಂತೆಯೇ ಕ್ಯಾಮರಾ ವಿನ್ಯಾಸವನ್ನು ಹೊಂದಿರುತ್ತದೆ ಎಂದು ಸೂಚಿಸುತ್ತದೆ.
ಐಫೋನ್ 17, ಐಫೋನ್ 17 ಪ್ರೊ ಡಿಸೈನ್ (ಲೀಕ್) : ಪ್ರಮಾಣಿತ 'ಐಫೋನ್ 17' ಮಾದರಿಯ ರೆಂಡರ್ ಅನ್ನು @MajinBuOfficial ಬಳಕೆದಾರರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ತೋರಿಸಿರುವ ಚಿತ್ರವನ್ನು ನೋಡಿದ್ರೆ, ಈ ಫೋನ್ ರೀಡಿಸೈನ್ಡ್ ರಿಯರ್ ಕ್ಯಾಮರಾ ವಿನ್ಯಾಸದೊಂದಿಗೆ ಬರಬಹುದು ಎಂದು ತೋರುತ್ತದೆ. ಕಳೆದ ವರ್ಷ ಆಪಲ್ ಪ್ರಿವಿಯಸ್ ಮಾಡಲ್ಸ್ನಲ್ಲಿ ನೀಡಿದ್ದ ವರ್ಟಿಕಲ್ ಕ್ಯಾಮರಾ ಲೇಔಟ್ ಬದಲಾಗಿ ಲಂಬ ಕ್ಯಾಮರಾ ಲೇಔಟ್ನಲ್ಲಿ 'ಐಫೋನ್ 16' ಮತ್ತು 'ಐಫೋನ್ 16 ಪ್ಲಸ್' ಮಾಡೆಲ್ಸ್ ಅನ್ನು ಪರಿಚಯಿಸಿದೆ.
ಈಗ ಕಂಪನಿ ಐಫೋನ್ 17 ನಲ್ಲಿ ಪ್ರೈಮರಿ ಮತ್ತು ಅಲ್ಟ್ರಾವೈಡ್ ಕ್ಯಾಮರಾಗಳನ್ನು ಎರಡು ಬದಿಯಲ್ಲಿ ವಿಸ್ತರಿಸಿರುವ ಕ್ಯಾಮರಾ ಬಾರ್‌ನಲ್ಲಿ ಅಡ್ಡಲಾಗಿ ಜೋಡಿಸಿರುವಂತೆ ಈ ಹೊಸ ರೆಂಡರ್ ಸೂಚಿಸುತ್ತದೆ. ನಾವು ಬಲಭಾಗದಲ್ಲಿ LED ಫ್ಲ್ಯಾಷ್ ಅನ್ನು ಸಹ ನೋಡಬಹುದು. ಈ ರೆಂಡರ್‌ನಲ್ಲಿ ಕ್ಯಾಮರಾ ಬಾರ್ ಡಾರ್ಕ್ ಕಲರ್ನಲ್ಲಿ ಗೋಚರಿಸುತ್ತದೆ. ಐಫೋನ್ ಮಾತ್ರ ವೈಟ್ ಕಲರ್ನಲ್ಲಿದೆ. ಇದರರ್ಥ 'ಐಫೋನ್ 17' ಮಾದರಿಯ ಎಲ್ಲಾ ಕಲರ್ ಆಪ್ಷನ್ಗಳಲ್ಲಿ ಕ್ಯಾಮರಾ ಬಾರ್ ಒಂದೇ ಬಣ್ಣದ್ದಾಗಿರುವಂತೆ ಕಂಡುಬರುತ್ತದೆ.