Social Media through sexual assault on Kids: Instagram ಮತ್ತು Snapchat ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಹದಿಹರೆಯದವರಿಗೆ ಕೆಲ ಪ್ರಯೋಜನಗಳನ್ನು ನೀಡುತ್ತವೆ. ಆದರೆ ಇತ್ತೀಚೆಗೆ ಸಂಶೋಧನೆಯೊಂದು ಆತಂಕಕಾರಿ ವಿಷಯವೊಂದನ್ನು ಬಹಿರಂಗಪಡಿಸಿದೆ.
ಆನ್‌ಲೈನ್‌ನಲ್ಲಿ ಅಪರಾಧಿಗಳು ಸಾಮಾಜಿಕ ಮಾಧ್ಯಮಗಳನ್ನು ಸಾಧನವಾಗಿ ಬಳಸುತ್ತಾರೆ. ಇದರ ಮೂಲಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ. ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ಸಾವಿರಕ್ಕೂ ಹೆಚ್ಚು ಹದಿಹರೆಯದವರಲ್ಲಿ 7 ಪ್ರತಿಶತದಷ್ಟು ಜನರು ಸಾಮಾಜಿಕ ಮಾಧ್ಯಮದಿಂದ ಆಕ್ರಮಣಕ್ಕೆ ಸುಲಭವಾಗಿ ತುತ್ತಾಗುತ್ತಿದ್ದಾರೆ ಎಂಬುದು ಹೊಸ ಅಧ್ಯಯನದ ಮೂಲಕ ತಿಳಿದುಬಂದಿದೆ.
ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ 2024 & ರ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾದ ಸಂಶೋಧನೆ ಪ್ರಕಾರ, ಸಂತ್ರಸ್ತರ ವಿವರಣೆ ಬಳಿಕ ಸಾಮಾಜಿಕ ಜಾಲತಾಣವು ಅಪರಾಧಿಗಳಿಗೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗಲು ದಾರಿಯಾಗಿದೆ ಎಂಬುದು ಗೊತ್ತಾಗಿದೆ. 2018 ಮತ್ತು 2023 ರ ನಡುವೆ ಮಕ್ಕಳು ಮತ್ತು ಕುಟುಂಬಗಳಿಗಾಗಿ ರಾಡಿ ಚಿಲ್ಡ್ರನ್ಸ್ ಹಾಸ್ಪಿಟಲ್ ಚಾಡ್ವಿಕ್ ಸೆಂಟರ್‌ನಲ್ಲಿ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ 10 ರಿಂದ 18 ವರ್ಷ ವಯಸ್ಸಿನ ಮಕ್ಕಳನ್ನು ಸಂಶೋಧನೆ ತಂಡವು ಮೌಲ್ಯಮಾಪನ ಮಾಡಿದೆ.
ಲೈಂಗಿಕ ದೌರ್ಜನ್ಯಕ್ಕೆ ಕಾರಣವಾಗುವ ಬಲಿಪಶು ಮತ್ತು ಅಪರಾಧಿಗಳ ನಡುವಿನ ಸಂವಹನಕ್ಕಾಗಿ ಸಾಮಾಜಿಕ ಮಾಧ್ಯಮವನ್ನು ಬಳಸಿದಾಗ ಈ ರೀತಿಯ ಘಟನೆಗಳು ಸಂಭವಿಸುತ್ತವೆ. ಹೀಗಾಗಿ ಸಂಶೋಧನಾ ತಂಡ "ಸಾಮಾಜಿಕ ಮಾಧ್ಯಮ ಸುಗಮ ಲೈಂಗಿಕ ದೌರ್ಜನ್ಯ" ಎಂದು ವ್ಯಾಖ್ಯಾನಿಸಿದ್ದಾರೆ. ಮಕ್ಕಳ ವೈದ್ಯ ಮತ್ತು ಸಂಶೋಧನೆಯ ಲೇಖಕ ಮಿಗುಯೆಲ್ ಕ್ಯಾನೊ ಪ್ರತಿಕ್ರಿಯಿಸಿ, ಹದಿಹರೆಯದವರು ಡಿಜಿಟಲ್ ಜಾಗದಲ್ಲಿ ತಮ್ಮ ಜೀವನದ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.