ಕರ್ನಾಟಕ

karnataka

ETV Bharat / technology

ನಿಮ್​ ಮೂಡ್​ಗೆ ತಕ್ಕಂತೆ 'ಪ್ರೊಫೈಲ್​ ಸಾಂಗ್'- ಇನ್​ಸ್ಟಾಗ್ರಾಮ್​​ನಿಂದ ಹೊಸ ಫೀಚರ್​ ಪರಿಚಯ! - Instagram Profile Song - INSTAGRAM PROFILE SONG

Instagram Introduces Song On Profile Feature : ಇನ್​ಸ್ಟಾಗ್ರಾಂ ಬಳಕೆದಾರರಿಗೆ ಸಿಹಿ ಸುದ್ದಿ. ಈಗ Instagram ಒಂದು ವೈಶಿಷ್ಟ್ಯವನ್ನು ಪರಿಚಯಿಸಿದೆ. ಅಲ್ಲಿ ನಿಮ್ಮ ಮನಸ್ಥಿತಿಗೆ ಅನುಗುಣವಾಗಿ ನಿಮ್ಮ ಪ್ರೊಫೈಲ್‌ಗೆ ನೀವು ಹಾಡನ್ನು ಸೇರಿಸಬಹುದಾಗಿದೆ. ಯಾವರೀತಿ ಎಂಬುದು ತಿಳಿಯೋಣಾ ಬನ್ನಿ..

ADD MUSIC TO YOUR PROFILE INSTAGRAM  INSTAGRAM LATEST FEATURES  INSTAGRAM ADDS MYSPACE FEATURE  INSTAGRAM PROFILE SONG FEATURE
ಇನ್​ಸ್ಟಾಗ್ರಾಮ್​​ನಿಂದ ಹೊಸ ಫೀಚರ್​ ಪರಿಚಯ (ETV Bharat)

By ETV Bharat Tech Team

Published : Aug 24, 2024, 12:42 PM IST

Add music to your profile Instagram: ಇನ್​ಸ್ಟಾಗ್ರಾಂ ಡೈಹಾರ್ಡ್ ಫ್ಯಾನ್​ಗಳಿಗೆ ಒಂದು ಶುಭ ಸುದ್ದಿ. ಇನ್​ಸ್ಟಾಗ್ರಾಂ ನಿಮಗಾಗಿ ಮತ್ತೊಂದು ಹೊಸ ವೈಶಿಷ್ಟ್ಯವನ್ನು ತಂದಿದೆ. ಪ್ರೊಫೈಲ್ ಕಸ್ಟಮೈಸೇಶನ್ ಅನ್ನು ಇನ್ನಷ್ಟು ಹೆಚ್ಚಿಸಲು 'ಪ್ರೊಫೈಲ್ ಸಾಂಗ್' ವೈಶಿಷ್ಟ್ಯವನ್ನು ಪರಿಚಯಿಸಲಾಗುತ್ತಿದೆ. ಹೆಸರೇ ಸೂಚಿಸುವಂತೆ, ಬಳಕೆದಾರರು ಈ ಹೊಸ ಪೀಚರ್ ಮೂಲಕ ತಮ್ಮ ನೆಚ್ಚಿನ ಹಾಡನ್ನು ತಮ್ಮ ಪ್ರೊಫೈಲ್‌ಗೆ ಬಳಸಬಹುದಾಗಿದೆ.

ಮನಸ್ಥಿತಿಗೆ ಅನುಗುಣವಾಗಿ ಅದನ್ನು ಆಯ್ಕೆ ಮಾಡಲು ಅವಕಾಶ ಇದೆ. ಇನ್​ಸ್ಟಾಗ್ರಾಮ್​ ಈ ಉದ್ದೇಶಕ್ಕಾಗಿ ಕೆಲವು ಪರವಾನಗಿ ಪಡೆದ ಹಾಡುಗಳನ್ನು ಲಭ್ಯವಾಗುವಂತೆ ಮಾಡಿದೆ. ಇದಕ್ಕಾಗಿ ಅಮೆರಿಕದ ಖ್ಯಾತ ಗಾಯಕಿ ಸಬ್ರಿನಾ ಕಾರ್ಪೆಂಟರ್ ಸಹ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಬಳಕೆದಾರರ ಬಯೋ ಅಡಿಯಲ್ಲಿ ಪ್ರೊಫೈಲ್ ಸಾಂಗ್ ವೈಶಿಷ್ಟ್ಯವು ಕಾಣಿಸಿಕೊಳ್ಳುತ್ತದೆ. ಸಂಗೀತ ಐಕಾನ್ ಅನ್ನು ಟ್ಯಾಪ್ ಮಾಡಿ ಮತ್ತು ಹಾಡು ಪ್ಲೇ ಆಗುತ್ತದೆ. ಆದರೆ ಬಳಕೆದಾರರು 30 ಸೆಕೆಂಡ್ ಉದ್ದದ ಹಾಡನ್ನು ಮಾತ್ರ ಆಯ್ಕೆ ಮಾಡಬಹುದಾಗಿದೆ. ಬಳಕೆದಾರರು ಬದಲಾವಣೆ ಮಾಡುವವರೆಗೆ ಆ ಹಾಡು ಮಾತ್ರ ಪ್ರೊಫೈಲ್‌ನಲ್ಲಿ ಹಾಗೆಯೇ ಉಳಿದಿರುತ್ತದೆ. ಅಂದರೆ ಸ್ಟೋರಿ/ರೀಲ್​ಗಳಂತೆ 24 ಗಂಟೆಗಳಲ್ಲಿ ಮಾಯವಾಗುವುದಿಲ್ಲ ಎಂಬುದು ಗಮನಾರ್ಹ..

ಪ್ರೊಫೈಲ್ ಹಾಡು ಹೇಗೆ ಬಳಸುವುದು?:

  • ಮೊದಲು ನೀವು Insta ಪ್ರೊಫೈಲ್ ಟ್ಯಾಬ್‌ಗೆ ಹೋಗಿ. ಅಲ್ಲಿ 'ಎಡಿಟ್​ ಪ್ರೊಫೈಲ್' ಮೇಲೆ ಕ್ಲಿಕ್​ ಮಾಡಿ..
  • ‘ಯಾಡ್​ ಮ್ಯೂಸಿಕ್​ ಟು ಯುವರ್​ ಪ್ರೊಫೈಲ್​’ ಮೇಲೆ ಕ್ಲಿಕ್​ ಮಾಡಿ.
  • ನಿಮ್ಮ ಆಯ್ಕೆಯ ಹಾಡಿನಲ್ಲಿ 30 ಸೆಕೆಂಡ್​ಗಳ ಹಾಡನ್ನು ಆಯ್ಕೆ ಮಾಡಿಕೊಳ್ಳಿ..
  • ಬಳಿಕ ನೀವು ಆ ಹಾಡನ್ನು ಪ್ರೊಫೈಲ್​ ಸಾಂಗ್​ ಆಗಿ ಬಳಸಬಹುದಾಗಿದೆ.

ಓದಿ:'ಯೂಸರ್ ನೇಮ್'ನಿಂದ ವಾಟ್ಸಾಪ್​ ಮೂಲಕ ಸಂದೇಶ, ಇನ್ಮುಂದೆ ಮೊಬೈಲ್ ಸಂಖ್ಯೆ ಅವಶ್ಯಕತೆಯಿಲ್ಲ! - WHATSAPP NEW FEATURES

ನೀವು ಆಯ್ಕೆ ಮಾಡಿಕೊಳ್ಳುವ ಪ್ರೊಫೈಲ್ ಸಾಂಗ್ ಮತ್ತೆ ನೀವು ಬದಲಾಯಿಸುವವರೆ ಮುಂದುವರಿಯಲಿದೆ.

ABOUT THE AUTHOR

...view details