ಕರ್ನಾಟಕ

karnataka

ETV Bharat / technology

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಹೊಂಡಾ ಕಂಪನಿಯಿಂದ ಫ್ಲೆಕ್ಸ್​ ಫ್ಯುಯಲ್ ಬೈಕ್​ ಅನಾವರಣ: ಬೆಲೆ ಎಷ್ಟು ಗೊತ್ತಾ? - HONDA CB300F FLEX FUEL LAUNCHED

Honda CB300F Flex-Fuel Launched: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಫ್ಲೆಕ್ಸ್​ ಫ್ಯುಯಲ್ ಬೈಕ್​ ಅನಾವರಣಗೊಂಡಿದೆ. ಇದರ ಬೆಲೆ ಮತ್ತು ವೈಶಿಷ್ಟ್ಯಗಳು ಹೀಗಿವೆ.

HONDA CB300F FLEX FUEL PRICE  HONDA CB300F 2024  HONDA CB300F FLEX FUEL  FLEX FUEL BIKE LAUNCH IN INDIA
ಫ್ಲೆಕ್ಸ್​ ಫ್ಯುಯಲ್ (Hondabigwing)

By ETV Bharat Tech Team

Published : Oct 21, 2024, 9:36 AM IST

Honda CB300F Flex-Fuel Launched:ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ದೇಶದಲ್ಲಿ ಮೊದಲ ಫ್ಲೆಕ್ಸ್ ಇಂಧನ ಬೈಕ್ ಬಿಡುಗಡೆ ಮಾಡಿದೆ. ಹೋಂಡಾ ಇದನ್ನು CB300F ಹೆಸರಿನಲ್ಲಿ ಮಾರುಕಟ್ಟೆಗೆ ತಂದಿದೆ. ಈ ಹೊಸ ಹೋಂಡಾ ಫ್ಲೆಕ್ಸ್ ಫ್ಯೂಯಲ್ ಬೈಕ್‌ನ ಬುಕ್ಕಿಂಗ್ ಈಗಾಗಲೇ ಮಾರುಕಟ್ಟೆಯಲ್ಲಿ ಪ್ರಾರಂಭವಾಗಿದೆ ಎಂದು ಕಂಪನಿ ತಿಳಿಸಿದೆ.

ಈ ಬೈಕ್‌ಗಳು ಅಕ್ಟೋಬರ್ ಕೊನೆಯ ವಾರದಿಂದ ಹೋಂಡಾ ಬಿಗ್ ವಿಂಗ್ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿರುತ್ತವೆ. ಈ ಸಂದರ್ಭದಲ್ಲಿ ಫ್ಲೆಕ್ಸಿ ಇಂಧನ ಎಂದರೇನು? ಈ ಬೈಕ್‌ನ ಬೆಲೆ ಮತ್ತು ವೈಶಿಷ್ಟ್ಯಗಳ ಕುರಿತು ಹೆಚ್ಚಿನ ವಿವರಗಳು ಇಂತಿವೆ.

ಹೋಂಡಾ CB300F ಫ್ಲೆಕ್ಸ್ ಇಂಧನ ವೈಶಿಷ್ಟ್ಯಗಳು:

  • ಎಂಜಿನ್: 293.52 ಸಿಸಿ
  • ಟಾರ್ಕ್​: 25.6 Nm
  • ಕರ್ಬ್ ತೂಕ: 153 ಕೆಜಿ
  • ಪವರ್: 24.4 ಪಿಎಸ್
  • ಮೈಲೇಜ್: 30 ಕೆಎಂಪಿಎಲ್
  • ಬ್ರೇಕ್​ಗಳು: ಡಬಲ್ ಡಿಸ್ಕ್

ಹೋಂಡಾ CB300F ಬೈಕ್​ನ ಕಲರ್​ಗಳು:

  • ಸ್ಪೋರ್ಟ್ಸ್​ ರೆಡ್​
  • ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್

ಹೋಂಡಾ CB300F ಬೈಕ್​ನ ಬೆಲೆ:

  • ಕಂಪನಿಯು ಹೊಸ ಹೋಂಡಾ CB300F ಫ್ಲೆಕ್ಸ್ ಫ್ಯುಯಲ್ ಮೋಟಾರ್‌ಸೈಕಲ್‌ ಬೆಲೆಯನ್ನು 1.70 ಲಕ್ಷ ರೂ. (ಎಕ್ಸ್ ಶೋ ರೂಂ) ಎಂದು ನಿಗದಿಪಡಿಸಿದೆ.

ಫ್ಲೆಕ್ಸಿ ಇಂಧನ ಎಂದರೇನು?: ಒಂದಕ್ಕಿಂತ ಹೆಚ್ಚು ಇಂಧನ ಮಿಶ್ರಣವನ್ನು ಫ್ಲೆಕ್ಸ್ ಇಂಧನ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಈ ರೀತಿಯ ಮೋಟಾರ್‌ಸೈಕಲ್‌ಗಳು ಪೆಟ್ರೋಲ್ + ಎಥೆನಾಲ್ ಅಥವಾ ಮೆಥನಾಲ್‌ನಲ್ಲಿ ಚಲಿಸುತ್ತವೆ. ಕಂಪನಿಯ ಎಂಡಿ ಮತ್ತು ಸಿಇಒ ತ್ಸುತ್ಸುಮು ಒಟಾನಿ ಈ ಮಾದರಿಯ ಬೈಕ್ ತರುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಅವರ ಪಯಣದಲ್ಲಿ ಹೊಸ ಮೈಲಿಗಲ್ಲು ಎಂದರು. ಹೊಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಹೊರಸೂಸುವಿಕೆ ಕಡಿಮೆ ಮಾಡುವ ಭಾಗವಾಗಿ ಈ ಬೈಕ್ ಅನ್ನು ಅಭಿವೃದ್ಧಿಪಡಿಸಿದೆ ಎಂದು ಅವರು ಹೇಳಿದರು.

ಓದಿ:ಸ್ಕಾರ್ಪಿಯೋ ಕ್ಲಾಸಿಕ್ ಬಾಸ್ ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಿದ ಮಹೀಂದ್ರ; ಇದರಲ್ಲಿದೆ ಹಲವು ವಿಶೇಷತೆ

ABOUT THE AUTHOR

...view details