ETV Bharat / technology

ದೇಶಿ ಮಾರುಕಟ್ಟೆಗೆ ಆಫ್-ರೋಡರ್ ಎಲೆಕ್ಟ್ರಿಕ್ ಕಾರು ತಂದ ಮರ್ಸಿಡಿಸ್-ಬೆನ್ಜ್: ಸಿಂಗಲ್​ ಚಾರ್ಜ್​ನಲ್ಲಿ 470 ಕಿ.ಮೀ ಸಂಚಾರ - MERCEDES BENZ G580 EQ LAUNCHED

Mercedes-Benz G580 EQ Launched: ಮರ್ಸಿಡಿಸ್​-ಬೆನ್ಜ್​ ತನ್ನ ಮೊದಲ EQ ತಂತ್ರಜ್ಞಾನದೊಂದಿಗೆ ಆಫ್-ರೋಡ್ ಎಲೆಕ್ಟ್ರಿಕ್ ಕಾರನ್ನು ದೇಶೀಯ ಮಾರುಕಟ್ಟೆಗೆ ಪರಿಚಯಿಸಿದೆ.

MERCEDES BENZ G580  EQ TECHNOLOGY  MERCEDES BENZ G580 FEATURES  MERCEDES BENZ G580 PRICE
ಮರ್ಸಿಡಿಸ್ ಬೆನ್ಜ್ ಎಲೆಕ್ಟ್ರಿಕ್ ಕಾರು (Photo Credit: Mercedes)
author img

By ETV Bharat Tech Team

Published : 6 hours ago

Mercedes-Benz G580 EQ: ಮರ್ಸಿಡಿಸ್ ಬೆಂಝ್‌ನ ಹೊಸ ಎಲೆಕ್ಟ್ರಿಕ್ ಜಿ-ಕ್ಲಾಸ್ ಕಾರು ದೇಶೀಯ ಮಾರುಕಟ್ಟೆಗೆ ಬಂದಿದೆ. ಇದನ್ನು ಇಕ್ಯೂ ಟೆಕ್ನಾಲಾಜಿಯೊಂದಿಗೆ ಬಿಡುಗಡೆ ಮಾಡಲಾಗಿದೆ. ಜಿ580 ಎಂಬುದು ಕಾರಿನ ಹೆಸರು. ಭಾರತದ ಆಫ್​-ರೋಡರ್​ ವೆಹಿಕಲ್​ ಲಿಸ್ಟ್​ನಲ್ಲಿ ಇದನ್ನು ಸೇರಿಸಲಾಗಿದೆ. ಕಾರಿನ ನಾಲ್ಕು ವ್ಹೀಲ್​ಗಳಲ್ಲಿ ತಲಾ ಒಂದೊಂದು ಎಲೆಕ್ಟ್ರಿಕಲ್​ ಮೋಟರ್​ ಅಳವಡಿಸಲಾಗಿದೆ.

ಕೀ ಪಾಯಿಂಟ್ಸ್:

  • 116 kWh ಯೂನಿಟ್‌ನ ಬ್ಯಾಟರಿ ಪ್ಯಾಕ್ ಹೊಂದಿದೆ.
  • 470 ಕಿಲೋಮೀಟರ್ ರೇಂಜ್​ ನೀಡುತ್ತದೆ.
  • 587 hp ಪವರ್​ ಹೊಂದಿದೆ.
  • 1165 Nm ಟಾರ್ಕ್ ಉತ್ಪಾದಿಸುತ್ತದೆ.
  • ಇಂಡಿಪೆಂಡೆಂಟ್​ ಫ್ರಂಟ್​ ಸಸ್ಪೆನ್ಷನ್ ಸಿಸ್ಟಮ್​ ಅಳವಡಿಸಲಾಗಿದೆ.
  • ಲೋ ರೇಂಜ್ ಗೇರ್ ಬಾಕ್ಸ್ ಒದಗಿಸಲಾಗಿದೆ.

ಎಲೆಕ್ಟ್ರಿಕ್ ಕಾರು 850 ಮಿ.ಮೀವರೆಗಿನ ನೀರು ತುಂಬಿದ ಪ್ರದೇಶಗಳಲ್ಲೂ ಸರಳವಾಗಿ ಚಲಿಸಬಲ್ಲದು. ಇದು ಸಾಮಾನ್ಯ ಜಿ-ಕ್ಲಾಸ್‌ಗಿಂತ ಹೆಚ್ಚು. ಇದಲ್ಲದೆ ಜಿ-ಟರ್ನ್ ಸೌಲಭ್ಯ ಹೊಂದಿದೆ. ಅಂದರೆ ತನ್ನ ವ್ಹೀಲ್​ಗಳ ಮೇಲೆ ತಿರುಗಬಹುದಾದ ವ್ಯವಸ್ಥೆ. ಇನ್ನೂ ಹೆಚ್ಚಿನ ಆಫ್-ರೋಡ್ ಫಂಕ್ಷನ್​ಗಳನ್ನು ಒದಗಿಸಲಾಗಿದೆ.

ನ್ಯೂ ಇವಿ ಡಿಸೈನ್​: ಬಾನೆಟ್​ಗೆ ಏರಿಯೋಡೈನಾಮಿಕ್​ ಡಿಸೈನ್ ನೀಡಲಾಗಿದೆ. ಇದರಲ್ಲಿರುವ ಮತ್ತೊಂದು ಬದಲಾವಣೆಯೆಂದರೆ ಸ್ಪೇರ್​ ವ್ಹೀಲ್​ ಕವರ್​. ಇದು ಚಾರ್ಜಿಂಗ್​ ಕೇಬಲ್​ ಹೋಲ್ಡರ್​ ಆಗಿ ಮಾರ್ಪಟ್ಟಿದೆ. ಪೆಟ್ರೋಲ್​ ಮತ್ತು ಡೀಸೆಲ್​ ವೆರಿಯಂಟ್​ಗಳಿಗೆ ಹೋಲಿಸಿದರೆ ಇಂಟಿರಿಯರ್​ನಲ್ಲಿ ಹೆಚ್ಚಿನ ಬದಲಾವಣೆಗಳಿವೆ.

ಆಫ್-ರೋಡರ್ ಎಲೆಕ್ಟ್ರಿಕ್: ಇದರ ಬೆಲೆ 3 ಕೋಟಿ ರೂ.ಗಳಾಗಿದೆ. ಕಳೆದ ವರ್ಷಾಂತ್ಯದ ವೇಳೆಗೆ ಈ ಕಾರು ಸಾಕಷ್ಟು ಬುಕಿಂಗ್‌ಗಳಾಗಿದೆ. G63 AMG ಗಿಂತಲೂ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ದೊರೆಯಬಹುದಾಗಿದೆ. G580 ಪ್ರಸ್ತುತ ಲಭ್ಯವಿರುವ ಏಕೈಕ ಆಫ್-ರೋಡರ್ ಎಲೆಕ್ಟ್ರಿಕ್ ಕಾರು ಎಂಬುದು ಗಮನಾರ್ಹ.

ಇದನ್ನೂ ಓದಿ: ಒಂದಲ್ಲ, ಎರಡಲ್ಲ ಭಾರತದಲ್ಲಿ 14 ಹೊಚ್ಚ ಹೊಸ ಬೈಕ್​ಗಳ ಬಿಡುಗಡೆಗೆ ಡುಕಾಟಿ ರೆಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.