ಕರ್ನಾಟಕ

karnataka

ETV Bharat / technology

ಎನ್‌ಕ್ಯಾಪ್ ರೇಟಿಂಗ್‌ ಫೈವ್​ ಸ್ಟಾರ್​ ಪಡೆದ ಹ್ಯುಂಡೈನ ಎಸ್​ಯುವಿ ಟಕ್ಸನ್! - HYUNDAI TUCSON CRASH TEST RATING

Hyundai Tucson Crash Test Rating: ಭಾರತ್ ಎನ್‌ಕ್ಯಾಪ್ ರೇಟಿಂಗ್‌ ಹ್ಯುಂಡೈನ ಎಸ್​ಯುವಿ ಟಕ್ಸನ್ ಫೈವ್ ಸ್ಟಾರ್ ಪಡೆದಿದೆ. ಇದರ ಬೆಲೆ ಮತ್ತು ವೈಶಿಷ್ಟ್ಯಗಳ ಕುರಿತಾದ ವರದಿ ಇಲ್ಲಿದೆ..

HYUNDAI TUCSON SECURITY SYSTEM  HYUNDAI 5 STAR RATING CARS  BHARAT NCAP RATING  NCAP CRASH TEST 2024
ಎನ್‌ಕ್ಯಾಪ್ ರೇಟಿಂಗ್‌ ಫೈವ್​ ಸ್ಟಾರ್​ ಪಡೆದ ಹ್ಯುಂಡೈನ ಎಸ್​ಯುವಿ ಟಕ್ಸನ್ (Hyundai)

By ETV Bharat Tech Team

Published : Nov 30, 2024, 7:18 AM IST

Hyundai Tucson Crash Test Rating:ಹ್ಯುಂಡೈನ ಎಸ್​ಯುವಿ ಟಕ್ಸನ್ ಫೈವ್ ಸ್ಟಾರ್ ಕ್ಲಬ್‌ಗೆ ಸೇರ್ಪಡೆಗೊಂಡಿದೆ. ಈ ಎಸ್​ಯುವಿ ಭಾರತದ ಎನ್‌ಕ್ಯಾಪ್ ಕ್ರಾಸ್ ಟೆಸ್ಟ್‌ನಲ್ಲಿ ಪರಿಪೂರ್ಣ 5-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಇದು ಭಾರತದ ಎನ್‌ಕ್ಯಾಪ್​ನಿಂದ ಪರೀಕ್ಷಿಸಲ್ಪಟ್ಟ ಮೊದಲ ಹುಂಡೈ ಕಾರು. ಈ ಹಿಂದೆ ಈ ಕಂಪನಿಯ ವೆರ್ನಾ ಜಾಗತಿಕ ಎನ್‌ಕ್ಯಾಪ್ ಪರೀಕ್ಷೆಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿತ್ತು. ಟಕ್ಸನ್ ಈಗ ಅತ್ಯಧಿಕ ರೇಟಿಂಗ್ ಹೊಂದಿದೆ.

ವಯಸ್ಕರ ಸುರಕ್ಷತೆಗಾಗಿ ಕಾರು 32 ಅಂಕಗಳಲ್ಲಿ 30.84 ಅಂಕಗಳನ್ನು ಗಳಿಸಿದೆ. ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ 49 ಅಂಕಗಳಿಗೆ 41 ಅಂಕಗಳನ್ನು ಪಡೆದಿದೆ. ಈ ಎರಡೂ ವಿಭಾಗಗಳಲ್ಲಿ ಹ್ಯುಂಡೈ ಟಕ್ಸನ್ ಫೈವ್​ ಸ್ಟಾರ್ ರೇಟಿಂಗ್ ಅನ್ನು ಸಾಧಿಸಿದೆ ಎಂದು ಇಂಡಿಯಾ ಎನ್‌ಸಿಎಪಿ ಬಹಿರಂಗಪಡಿಸಿದೆ. ಹ್ಯುಂಡೈ ಟಕ್ಸನ್ ಎಸ್‌ಯುವಿ ಎಂಜಿನ್ ಮತ್ತು ಸುರಕ್ಷತಾ ವೈಶಿಷ್ಟ್ಯಗಳ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ..

ಎಂಜಿನ್: ಇದು 2.0-ಲೀಟರ್ ಪೆಟ್ರೋಲ್ ಮತ್ತು 2-ಲೀಟರ್ ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿದೆ. ಇದರ ಪೆಟ್ರೋಲ್ ಎಂಜಿನ್ 156bhp ಪವರ್ ಮತ್ತು 192Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಟಾರ್ಕ್ ಕನ್ವರ್ಟರ್​ ಆಟೋಮೆಟಿಕ್​ ಗೇರ್​ ಬಾಕ್ಸ್​ ಜೊತೆ ಲಿಂಕ್ ಆಗಿದೆ. ಇದರ ಡೀಸೆಲ್ ಎಂಜಿನ್ 186bhp ಪವರ್ ಮತ್ತು 416Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 8-ಸ್ಪೀಡ್ ಟಾರ್ಕ್ ಕನ್ವರ್ಟರ್​ ಆಟೋಮೆಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲ್ಪಟ್ಟಿದೆ. ಇದಲ್ಲದೆ, ಟಕ್ಸನ್ ಡೀಸೆಲ್ ಎಂಜಿನ್ ಆಲ್-ವೀಲ್ ಡ್ರೈವ್ ಆಯ್ಕೆಯನ್ನು ಸಹ ಹೊಂದಿದೆ.

ಭದ್ರತಾ ವೈಶಿಷ್ಟ್ಯಗಳು:

  • ಫ್ರಂಟಲ್​ ಏರ್​ ಬ್ಯಾಗ್ಸ್​
  • ಬೆಲ್ಟ್ ಪ್ರಿಟೆನ್ಷನರ್
  • ಬೆಲ್ಟ್ ಲೋಡ್ ಲಿಮಿಟರ್
  • ಸೈಡ್ ಹೆಡ್ ಕರ್ಟನ್ ಏರ್ ಬ್ಯಾಗ್
  • ಸೈಡ್ ಚೆಸ್ಟ್​ ಏರ್​ ಬ್ಯಾಗ್​
  • ಸೈಡ್ ಪೆಲ್ವಿಸ್ ಏರ್ ಬ್ಯಾಗ್

ಇವುಗಳ ಹೊರತಾಗಿ, ಈ ಕಾರು ಚೈಲ್ಡ್ ಸೀಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಪಾದಚಾರಿ ರಕ್ಷಣೆ, ಸೀಟ್ ಬೆಲ್ಟ್ ರಿಮೈಂಡರ್‌ಗಳಿಗಾಗಿ ಐಸೊಫಿಕ್ಸ್ ಮೌಂಟ್‌ಗಳನ್ನು ಹೊಂದಿದೆ. ಈ ರೇಟಿಂಗ್‌ಗಳು ಹ್ಯುಂಡೈ ಟಕ್ಸನ್ ಪ್ಲಾಟಿನಂ ಮತ್ತು ಸಿಗ್ನೇಚರ್ ರೂಪಾಂತರಗಳಿಗೂ ಅನ್ವಯಿಸುತ್ತವೆ.

ಬೆಲೆ: ದೇಶೀಯ ಮಾರುಕಟ್ಟೆಯಲ್ಲಿ ಈ ಕಾರಿನ ಬೆಲೆ ರೂ.29.02 ಲಕ್ಷದಿಂದ ಪ್ರಾರಂಭವಾಗುತ್ತದೆ.

ಟಾಟಾದ ಕರ್ವ್, ಕರ್ವ್ ಇವಿ, ನೆಕ್ಸನ್, ಮಹೀಂದ್ರಾ ಥಾರ್ ರಾಕ್ಸ್, ಮಹೀಂದ್ರಾ ಎಕ್ಸ್‌ಯುವಿ 400 ಇವಿ ಮತ್ತು ಎಕ್ಸ್‌ಯುವಿ 3 ಎಕ್ಸ್‌ಒ ಕಾರುಗಳು ಈಗಾಗಲೇ ಭಾರತ್ ಎನ್‌ಕ್ಯಾಪ್ ರೇಟಿಂಗ್‌ನಲ್ಲಿ ಫೈವ್ ಸ್ಟಾರ್ ರೇಟಿಂಗ್ ಅನ್ನು ಸಾಧಿಸಿವೆ.

ಓದಿ:16 ವರ್ಷದೊಳಗಿನ ಮಕ್ಕಳಿಗೆ ಆಸ್ಟ್ರೇಲಿಯಾದಲ್ಲಿ ಸೋಷಿಯಲ್ ಮೀಡಿಯಾ ಬ್ಯಾನ್

ABOUT THE AUTHOR

...view details