ಹೈದರಾಬಾದ್: ಟಿವಿ ರಿಮೋಟ್ ಅನ್ನು ಎಲ್ಲೋ ಮರೆತು ಅದನ್ನು ಹುಡುಕುವುದು ಪ್ರತಿಯೊಬ್ಬರ ಮನೆಗಳಲ್ಲಿ ಕಾಮನ್. ಕೆಲವೊಮ್ಮೆ ಟಿವಿ ರಿಮೋಟ್ ಅನ್ನು ಸೋಫಾ ಅಥವಾ ಹಾಸಿಗೆಗಳ ಅಡಿಯಲ್ಲಿ ಇಟ್ಟು ಬಿಟ್ಟಿರುತ್ತೇವೆ. ನಮಗೆ ಏನಾದರೂ ಚೇಂಜ್ ಮಾಡಬೇಕು ಅಂದಾಗ ರಿಮೋಟ್ ಕೈಗೇ ಸಿಗಲ್ಲ. ರಿಮೋಟ್ ಎಲ್ಲಿದೆ ಅನ್ನೋದು ಮರೆತು ಹೋಗಿರುತ್ತದೆ. ಈ ಸಮಯದಲ್ಲಿ ಟಿವಿಯಲ್ಲಿ ನಮಗೆ ಬೇಕಾದ ಚಾನಲ್ ಅನ್ನು ಬದಲಾಯಿಸಲು ಸಾಧ್ಯವಾಗಲ್ಲ. ರಿಮೋಟ್ ಸಿಗುವವರೆಗೆ ಟಿವಿ ಬಳಕೆ ಮಾಡೋಕು ಆಗಲ್ಲ. ಇನ್ನು ರಿಮೋಟ್ ಹಾಳಾದಾಗಲೂ ಇದೇ ಪರಿಸ್ಥಿತಿ ಬಂದಿರುತ್ತದೆ. ಅಂತಹ ಸಂದರ್ಭಗಳಲ್ಲಿ ಸಾಕಷ್ಟು ಕಿರಿಕಿರಿ ಉಂಟಾಗುತ್ತದೆ. ಆದರೆ, ಅದಕ್ಕೆ ಇಲ್ಲೊಂದು ಪರಿಹಾರ ಇದೆ. ನೀವು ಸ್ಮಾರ್ಟ್ ಟಿವಿಯನ್ನು ನಿಯಂತ್ರಿಸಲು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ರಿಮೋಟ್ ಆಗಿ ಬಳಸಬಹುದು. ನೀವು ಟಿವಿ ವಾಲ್ಯೂಮ್ ಅನ್ನು ಹೆಚ್ಚಿಸಬಹುದು ಮತ್ತು ಕಡಿಮೆ ಮಾಡಬಹುದು. ಸ್ಮಾರ್ಟ್‌ಫೋನ್ ಮೂಲಕವೂ ಚಾನೆಲ್‌ಗಳನ್ನು ಬದಲಾಯಿಸಬಹುದು. ಈಗ ಹೇಗೆ ಅಂದರೆ,
Google TV ಅಪ್ಲಿಕೇಶನ್ ಅನ್ನು ಹೀಗೆ ಬಳಸುವುದು:
- ಮೊದಲು ನಿಮ್ಮ ಸ್ಮಾರ್ಟ್‌ಫೋನ್ ಮತ್ತು ಸ್ಮಾರ್ಟ್ ಟಿವಿ ಎರಡಕ್ಕೂ ಬ್ಲೂಟೂತ್ ಅಥವಾ ವೈಫೈ ಕನೆಕ್ಟ್ ಮಾಡಿ
- ಅದರ ನಂತರ, ನಿಮ್ಮ ಫೋನ್‌ನಲ್ಲಿ Google Play Store ಅನ್ನು ಓಪನ್ ಮಾಡಿ 'Google TV ಅಪ್ಲಿಕೇಶನ್' ಡೌನ್‌ಲೋಡ್ ಮಾಡಿ.
- ನಂತರ Google TV ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ನಲ್ಲಿ ಸ್ಥಾಪಿಸಿದ ಬಳಿಕ ಅದನ್ನು ಒಪನ್ ಮಾಡಿ
- ಪರದೆಯ ಕೆಳಗಿನ ಬಲ ಮೂಲೆಯಲ್ಲಿರುವ 'ರಿಮೋಟ್ ಬಟನ್' ಮೇಲೆ ಕ್ಲಿಕ್ ಮಾಡಿ.
- ತಕ್ಷಣವೇ ಅಪ್ಲಿಕೇಶನ್ ಹತ್ತಿರದ ಸಾಧನಗಳನ್ನು ಸಂಪರ್ಕಿಸಲು ಸ್ಕ್ಯಾನ್ ಮಾಡಲು ಪ್ರಾರಂಭಿಸುತ್ತದೆ.
- ಪಟ್ಟಿಯಲ್ಲಿ ನಿಮ್ಮ ಟಿವಿ ಹೆಸರು ಕಾಣಿಸಿಕೊಂಡಾಗ, ಅದನ್ನು ಆಯ್ಕೆಮಾಡಿ.
- ನಂತರ ನಿಮ್ಮ ಟಿವಿ ಪರದೆಯಲ್ಲಿ ಕೋಡ್ ಕಾಣಿಸುತ್ತದೆ.
- ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಅಪ್ಲಿಕೇಶನ್‌ನಲ್ಲಿ ಆ ಕೋಡ್ ನಮೂದಿಸಿ ಮತ್ತು ಜೋಡಿ ಬಟನ್ ಒತ್ತಿರಿ.
- ನಿಮ್ಮ ಸ್ಮಾರ್ಟ್ ಟಿವಿಯೊಂದಿಗೆ ಸ್ಮಾರ್ಟ್‌ಫೋನ್ ಈಜಿಯಾಗಿ ಕನೆಕ್ಟ್ ಆಗತ್ತದೆ
- ಈಗ ನೀವು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ರಿಮೋಟ್ ಆಗಿ ಬಳಸಬಹುದು.