How To Increase Internet Speed: ಪ್ರಸ್ತುತ 5G ಸೇವೆಗಳು ದೇಶದಲ್ಲಿ ಉತ್ತಮವಾಗಿ ಲಭ್ಯವಿದೆ. ಇಂತಹ ವೇಗದ ಇಂಟರ್ನೆಟ್ ಸೇವೆಗಳಿಗೆ ಒಗ್ಗಿಕೊಂಡವರು ನೆಟ್ ಸ್ಲೋ ಆದ್ರೆ ಸಹಿಸಿಕೊಳ್ಳುವುದಿಲ್ಲ. ನೀವೂ ಸಹ ಈ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ? ಹೌದು ಎಂದಾದರೆ ಚಿಂತಿಸಬೇಡಿ.
- ಫೋನ್ ರಿಸ್ಟಾರ್ಟ್ ಮಾಡಿ: ಕೆಲವೊಮ್ಮೆ ಇಂಟರ್ನೆಟ್ ವೇಗ ಅನಿರೀಕ್ಷಿತವಾಗಿ ಕಡಿಮೆಯಾಗುತ್ತದೆ. ಆಗ ನೀವು ಮೊದಲು ನಿಮ್ಮ ಫೋನ್ ಅನ್ನು ರಿಸ್ಟಾರ್ಟ್ ಮಾಡಿ. ಈ ರೀತಿ ಮಾಡುವುದರಿಂದ ಫೋನ್ನಲ್ಲಿರುವ ಹೆಚ್ಚಿನ ಸಮಸ್ಯೆಗಳು ಪರಿಹಾರವಾಗುತ್ತವೆ. ಇಂಟರ್ನೆಟ್ ಸ್ಪೀಡ್ ಹೆಚ್ಚಾಗುತ್ತದೆ.
- ಬ್ಯಾಕ್ಗ್ರೌಂಡ್ ಆಪ್ಸ್ ಕ್ಲೋಸ್ ಮಾಡಿ:ನಿಮ್ಮ ಫೋನ್ನಲ್ಲಿ ಅನೇಕ ಆ್ಯಪ್ಗಳು ಬ್ಯಾಗ್ರೌಂಡ್ನಲ್ಲಿ ರನ್ ಆಗುತ್ತಿರುತ್ತವೆ. ಅವು ನಿಮ್ಮ ಇಂಟರ್ನೆಟ್ ಅನ್ನು ಸೈಲೆಂಟ್ ಆಗಿಯೇ ನುಂಗುತ್ತಿರುತ್ತವೆ. ಫೋನ್ನ ಇಂಟರ್ನೆಟ್ ವೇಗ ಕಡಿಮೆ ಮಾಡುತ್ತವೆ. ಅನಗತ್ಯ ಆ್ಯಪ್ಗಳನ್ನು ಕ್ಲೋಸ್ ಮಾಡುವುದು ಉತ್ತಮ ಅಥವಾ ಅನ್ಇನ್ಸ್ಟಾಲ್ ಮಾಡುವುದು ಒಳ್ಳೆಯದು.
- ಕ್ಯಾಶ್ ಕ್ಲೀನ್ ಮಾಡಿ: ನಾವು ಯಾವುದೇ ವೆಬ್ಸೈಟ್ ಅಥವಾ ಅಪ್ಲಿಕೇಶನ್ಗಳನ್ನು ತೆರೆದಾಗ ನಾವು ಸಾಕಷ್ಟು ಡೇಟಾ ಉಪಯೋಗಿಸಿರುತ್ತೇವೆ. ಆದರೆ ನಮಗೆ ಗೊತ್ತಿಲ್ಲದೆಯೇ ಫೋನ್ನಲ್ಲಿ ಬಹಳಷ್ಟು ಕ್ಯಾಶ್ (Cache) ಸ್ಟೋರ್ ಆಗಿರುತ್ತದೆ. ಇದರಿಂದಾಗಿ ಲೋಡಿಂಗ್ ಟೈಂ ಸ್ಪೀಡ್ ಆಗುತ್ತದೆ. ಆಗ ಇಂಟರ್ನೆಟ್ ವೇಗ ಕಡಿಮೆಯಾಗುತ್ತದೆ. ಆದ್ದರಿಂದ ಕಾಲಕಾಲಕ್ಕೆ ಫೋನ್ನ ಕುಕೀಗಳು ಮತ್ತು ಕ್ಯಾಶ್ ಕ್ಲೀನ್ ಮಾಡುತ್ತಲೇ ಇರಬೇಕು.
- ಫ್ಲೈಟ್ ಮೋಡ್ ಬಳಕೆ: ಇಂಟರ್ನೆಟ್ ಸ್ಪೀಡ್ ತುಂಬಾ ಸ್ಲೋ ಆದಾಗ ನಿಮ್ಮ ಮೊಬೈಲ್ನ ಫ್ಲೈಟ್ ಮೋಡ್ ಆನ್ ಮಾಡಿ. ಕೆಲ ಸೆಕೆಂಡ್ಗಳ ನಂತರ ಅದನ್ನು ಮತ್ತೆ ಆಫ್ ಮಾಡಿ. ಇದು ನಿಮ್ಮ ಇಂಟರ್ನೆಟ್ ಕನೆಕ್ಷನ್ ರಿಸೆಟ್ ಆಗುತ್ತದೆ. ಆಗ ಇಂಟರ್ನೆಟ್ ವೇಗ ಆಟೋಮೆಟಿಕ್ ಆಗಿ ಹೆಚ್ಚಾಗುತ್ತದೆ.
- ಡೇಟಾ ಆಫ್ ಮಾಡಿ:ನೆಟ್ ಸ್ಪೀಡ್ ತುಂಬಾ ಕಡಿಮೆಯಿದ್ದರೆ, ನಿಮ್ಮ ಮೊಬೈಲ್ ಡೇಟಾವನ್ನು ಒಮ್ಮೆ ಆಫ್ ಮಾಡಿ. ಸ್ವಲ್ಪ ಸಮಯದವರೆಗೆ ಅದನ್ನು ಹಾಗೆಯೇ ಇರಿಸಿ. ನಂತರ ಡೇಟಾವನ್ನು ಮತ್ತೆ ಆನ್ ಮಾಡಿ. ಆಗ ಸ್ಮಾರ್ಟ್ಫೋನ್ನ ಇಂಟರ್ನೆಟ್ ವೇಗ ಹೆಚ್ಚಾಗುವ ಸಾಧ್ಯತೆ ಇದೆ.
- ಫೋನ್ ಅಪ್ಡೇಟ್:ಕೆಲವರು ಮೊಬೈಲ್ ಫೋನ್ ಅನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡದೇ ಹಾಗೆಯೇ ಬಳಸುತ್ತಾರೆ. ಇದು ಇಂಟರ್ನೆಟ್ ಅನ್ನು ನಿಧಾನಗೊಳಿಸುವ ಅವಕಾಶವೂ ಹೊಂದಿರುತ್ತದೆ. ಆದ್ದರಿಂದ ನೀವು ನಿಮ್ಮ ಮೊಬೈಲ್ ಡಿವೈಸ್ ಅನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡಬೇಕು. ಆಗ ನಿಮ್ಮ ಇಂಟರ್ನೆಟ್ ವೇಗ ಹೆಚ್ಚಾಗುತ್ತದೆ.
- ಡಿಎನ್ಎಸ್ ಸರ್ವರ್: ಡಿಎನ್ಎಸ್ ಸರ್ವರ್ ಬದಲಾಯಿಸುವ ಮೂಲಕ ನೀವು ನಿಮ್ಮ ಇಂಟರ್ನೆಟ್ ವೇಗ ಹೆಚ್ಚಿಸಬಹುದು.
- ಡೇಟಾ ಸೇವಿಂಗ್ ಮೋಡ್: ಎಲ್ಲಾ ಇತ್ತೀಚಿನ ಫೋನ್ಗಳಲ್ಲಿ ಡೇಟಾ ಸೇವಿಂಗ್ ಮೋಡ್ ಎಂಬ ಆಯ್ಕೆ ಇರುತ್ತದೆ. ಇದನ್ನು ಸಕ್ರಿಯಗೊಳಿಸುವುದರಿಂದ ಇಂಟರ್ನೆಟ್ ವೇಗ ಹೆಚ್ಚಾಗುತ್ತದೆ.
- ಸ್ಟಾಪ್ ಆಟೋ ಅಪ್ಡೇಟ್: ನಿಮ್ಮ ಫೋನ್ನಲ್ಲಿ ಆಟೋ ಅಪ್ಡೇಟ್ ವೈಶಿಷ್ಟ್ಯವನ್ನು ಆನ್ ಮಾಡಿದ್ರೆ ಅದು ನಿಮ್ಮ ಇಂಟರ್ನೆಟ್ ಬಳಕೆಯನ್ನು ಸದ್ದಿಲ್ಲದೆ ಉಪಯೋಗಿಸುತ್ತಿರುತ್ತದೆ. ಹೀಗಾಗಿ ಅಪ್ಲಿಕೇಶನ್ಗಳು ಕಾಲಕಾಲಕ್ಕೆ ಅಪ್ಡೇಟ್ ಆಗುತ್ತಲೇ ಇರುತ್ತದೆ. ಆಗ ಇಂಟರ್ನೆಟ್ ವೇಗ ಕಡಿಮೆಯಾಗುತ್ತದೆ. ಆದ್ದರಿಂದ ನಿಮ್ಮ ಫೋನ್ನಲ್ಲಿ ಆಟೋ-ಅಪ್ಡೇಟ್ ಆಯ್ಕೆಯನ್ನು ಬಂದ್ ಮಾಡಿ. ಇದು ನಿಮ್ಮ ಇಂಟರ್ನೆಟ್ ವೇಗವನ್ನು ಆಟೋಮೆಟಿಕ್ ಆಗಿ ಹೆಚ್ಚಿಸುತ್ತದೆ.