Android App Safety Check: ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಅಗತ್ಯಗಳಿಗಾಗಿ ವಿವಿಧ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವುದು ಸಹಜ. ಆದರೆ, ಈ ರೀತಿಯ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವ ಮೊದಲು, ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ಸೈಬರ್ ವಂಚನೆಯ ಅಪಾಯ ತಪ್ಪಿದ್ದಲ್ಲ. ಹಾಗಾದರೆ ಡೌನ್‌ಲೋಡ್ ಮಾಡುವ ಮೊದಲು ಅಪ್ಲಿಕೇಶನ್ ಸುರಕ್ಷಿತವಾಗಿದೆಯೇ? ಅಥವಾ ಅಲ್ಲವೇ ಎಂಬುದನ್ನು ಕಂಡು ಹಿಡಿಯುವುದು ಹೇಗೆ ಎಂದು ನೋಡೋಣ.
ಮೂರನೇ ವ್ಯಕ್ತಿಯ ಅಪ್ಲಿಕೇಶನ್ ದೂರವಿಡಿ: Google Play ಮತ್ತು Apple App Store ನಂತಹ ಅಧಿಕೃತ ಸ್ಟೋರ್‌ಗಳಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬೇಕು. ಏಕೆಂದರೆ ಅಪ್ಲಿಕೇಶನ್‌ಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರವೇ ಅವುಗಳನ್ನು ಪ್ಲೇಸ್ಟೋರ್‌ನಲ್ಲಿ ಸೇಖರಿಸಿ ಇಟ್ಟಿರುತ್ತಾರೆ. ಯಾವುದೇ ಅಪ್ಲಿಕೇಶನ್ ಬಳಕೆದಾರರ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಭಾವಿಸಿದರೆ, ಅಂತಹ ಅಪ್ಲಿಕೇಶನ್‌ಗಳನ್ನು ತಕ್ಷಣವೇ ತೆಗೆದುಹಾಕಲಾಗುತ್ತದೆ. ಆದರೆ, ಥರ್ಡ್ ಪಾರ್ಟಿ ಆ್ಯಪ್ ಸ್ಟೋರ್‌ಗಳು ಹಾಗಿರುವುದಿಲ್ಲ. ಹಾಗಾಗಿ ಅಧಿಕೃತ ಸ್ಟೋರ್‌ಗಳಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವುದು ಉತ್ತಮ. ಮೂರನೇ ವ್ಯಕ್ತಿಗಳಿಂದ ತೆಗೆದುಕೊಳ್ಳುವುದು ಸೂಕ್ತವಲ್ಲ. ನೀವು ಇತರ ಸ್ಟೋರ್‌ಗಳಿಂದ ಆಯ್ಕೆ ಮಾಡಬೇಕಾದರೆ, ನೀವು Amazon ಆ್ಯಪ್ ಸ್ಟೋರ್ ಮತ್ತು Samsung Galaxy Store ಅನ್ನು ಬಳಸಬಹುದು.
ಗೌಪ್ಯತೆ ನೀತಿಯನ್ನು ಓದಿ:ಅನೇಕ ಬಳಕೆದಾರರು ಗೌಪ್ಯತೆ ನೀತಿಯನ್ನು ಓದದೆಯೇ ಅಪ್ಲಿಕೇಶನ್‌ಗೆ ಎಲ್ಲ ಅನುಮತಿಗಳನ್ನು ನೀಡುತ್ತಾರೆ. ಆದರೆ, ಇದು ಸರಿಯಾದ ವಿಧಾನವಲ್ಲ. ಗೌಪ್ಯತೆ ನೀತಿ ದಾಖಲೆಯು ಗೊಂದಲಮಯವಾಗಿದ್ದರೆ ಮತ್ತು ಅಪೂರ್ಣವಾಗಿದ್ದರೆ, ಅದನ್ನು ನಕಲಿ ಅಪ್ಲಿಕೇಶನ್ ಎಂದು ಗುರುತಿಸಬೇಕು. ಡೇಟಾ ಸಂಗ್ರಹಣೆ ಮತ್ತು ಬಳಕೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಗೌಪ್ಯತೆ ನೀತಿ ಒಳಗೊಂಡಿದೆಯೇ? ಅಥವಾ ಇಲ್ಲ ಪರಿಶೀಲಿಸುವುದು ಸೂಕ್ತ.