Honda Recall:ಪ್ರಮುಖ ಮೋಟಾರ್‌ಸೈಕಲ್ ತಯಾರಕ ಹೊಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) 300-350 ಸಿಸಿ ಬೈಕ್‌ಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಸ್ಪೀಡ್ ಸೆನ್ಸಾರ್ ಮತ್ತು ಕ್ಯಾಮ್‌ಶಾಫ್ಟ್‌ನಲ್ಲಿನ ದೋಷಗಳಿಂದಾಗಿ ಈ ಬೈಕ್‌ಗಳನ್ನು ಹಿಂಪಡೆಯಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ. ಕಂಪನಿ ಹಿಂಪಡೆದಿರುವ ಮಾದರಿಗಳಲ್ಲಿ CB300F, CB300R, CB359, HNES 350 ಮತ್ತು CB350RS ಸೇರಿವೆ. ಇದು ಅಕ್ಟೋಬರ್ 2020 ಮತ್ತು ಏಪ್ರಿಲ್ 2024ರ ನಡುವೆ ತಯಾರಿಸಲಾದ ಮಾದರಿಗಳನ್ನು ಒಳಗೊಂಡಿದೆ.
ಮೋಲ್ಡಿಂಗ್ ಪ್ರಕ್ರಿಯೆಯಲ್ಲಿನ ತಪ್ಪಿನಿಂದಾಗಿ ಸ್ಪೀಡ್ ಸೆನ್ಸಾರ್ನಲ್ಲಿ ನೀರು ಒಳನುಸುಳುವ ಸಾಧ್ಯತೆಯಿದೆ. ಇದರಿಂದಾಗಿ ಸ್ಪೀಡ್ ಸೆನ್ಸಾರ್ದೊಂದಿಗೆ ಟ್ರಾಕ್ಷನ್ ಕಂಟ್ರೋಲ್ ಅಥವಾ ಎಬಿಎಸ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಬಹುದು ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ. ಕೆಲವು ಸಂದರ್ಭಗಳಲ್ಲಿ ಬ್ರೇಕಿಂಗ್‌ನಲ್ಲಿ ದೋಷಗಳು ಉಂಟಾಗಬಹುದು ಎಂದು ಹೇಳಲಾಗುತ್ತದೆ. ಅಕ್ಟೋಬರ್ 2020 ಮತ್ತು ಏಪ್ರಿಲ್ 2024ರ ನಡುವೆ ತಯಾರಿಸಲಾದ ಘಟಕಗಳಲ್ಲಿ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದೆ. ಹೀಗಾಗಿ ಕಂಪನಿ 300-350 ಸಿಸಿ ಬೈಕ್‌ಗಳನ್ನು ಹಿಂಪಡೆಯಲು ತೀರ್ಮಾನಿಸಿದೆ.