ನವದೆಹಲಿ:ಎಲೋನ್ ಮಸ್ಕ್ ಅವರ ಸಾಮಾಜಿಕ ಮಾಧ್ಯಮ ಎಕ್ಸ್ ಶೀಘ್ರದಲ್ಲೇ ತನ್ನ 'ಗ್ರೋಕ್' ಎಐ ಚಾಟ್ ಬಾಟ್ ಅನ್ನು ಎಲ್ಲಾ ಪೇಡ್ ಸಬ್ಸ್ಕ್ರೈಬರ್ಗಳಿಗೆ ಲಭ್ಯವಾಗುವಂತೆ ಮಾಡಲಿದೆ ಎಂದು ಎಲೋನ್ ಮಸ್ಕ್ ಬುಧವಾರ ಹೇಳಿದ್ದಾರೆ. ಈ ಮೂಲಕ ಓಪನ್ಎಐನ ಚಾಟ್ ಜಿಪಿಟಿಗೆ ಪೈಪೋಟಿ ನೀಡಲು ಎಕ್ಸ್ ಸಜ್ಜಾಗುತ್ತಿದೆ. ಈ ಬಗ್ಗೆ ಎಕ್ಸ್ನಲ್ಲಿ (ಹಿಂದೆ ಟ್ವಿಟರ್) ಪೋಸ್ಟ್ ಮಾಡಿರುವ ಟೆಸ್ಲಾ ಮತ್ತು ಸ್ಪೇಸ್ಎಕ್ಸ್ ಸಿಇಒ ಮಸ್ಕ್ "ಗ್ರೋಕ್ ಎಲ್ಲಾ ಪ್ರೀಮಿಯಂ ಚಂದಾದಾರರಿಗೆ ಲಭ್ಯವಾಗಲಿದೆ" ಎಂದು ಘೋಷಿಸಿದ್ದಾರೆ.
"ಈ ವಾರದ ಕೊನೆಯಲ್ಲಿ ಗ್ರೋಕ್ ಅನ್ನು ಎಲ್ಲಾ ಪ್ರೀಮಿಯಂ ಚಂದಾದಾರರಿಗೆ ಸಕ್ರಿಯಗೊಳಿಸಲಾಗುವುದು (ಪ್ರೀಮಿಯಂ ಪ್ಲಸ್ ಮಾತ್ರವಲ್ಲದೆ ಎಲ್ಲ ಪ್ರೀಮಿಯಂ ಬಳಕೆದಾರರಿಗೆ)" ಎಂದು ಮಸ್ಕ್ ಹೇಳಿದ್ದಾರೆ.
ಕಳೆದ ವಾರ, ಮಸ್ಕ್ ನೇತೃತ್ವದ ಎಕ್ಸ್ಎಐ ತನ್ನ ಎಐ ಚಾಟ್ ಬಾಟ್ ಗ್ರೋಕ್ ಅನ್ನು ಡೆವಲಪರ್ಗಳು ಮತ್ತು ಸಂಶೋಧಕರಿಗೆ ಓಪನ್-ಸೋರ್ಸ್ ಮೋಡ್ನಲ್ಲಿ ಲಭ್ಯವಾಗುವಂತೆ ಮಾಡಿದೆ. "ನಾವು ನಮ್ಮ 314 ಬಿಲಿಯನ್ ಪ್ಯಾರಾಮೀಟರ್ ಮಿಕ್ಚರ್-ಆಫ್-ಎಕ್ಸ್ ಪರ್ಟ್ಸ್ ಮಾದರಿ, ಗ್ರೋಕ್ -1 ನ ತೂಕ ಮತ್ತು ವಾಸ್ತುಶಿಲ್ಪವನ್ನು ಬಿಡುಗಡೆ ಮಾಡುತ್ತಿದ್ದೇವೆ" ಎಂದು ಕಂಪನಿ ಬ್ಲಾಗ್ ಪೋಸ್ಟ್ನಲ್ಲಿ ತಿಳಿಸಿದೆ. ಎಐ ಚಾಟ್ ಬಾಟ್ ಈಗ ಓಪನ್-ಸೋರ್ಸ್ ಡೆವಲಪರ್ ಪ್ಲಾಟ್ ಫಾರ್ಮ್ ಗಿಟ್ ಹಬ್ನಲ್ಲಿ ಲಭ್ಯವಿದೆ.